ನವದೆಹಲಿ (New Delhi): ಶನಿವಾರದ ಆರಂಭಿಕ ವಹಿವಾಟಿನಲ್ಲಿ, ೨೪-ಕ್ಯಾರೆಟ್ ಚಿನ್ನದ ಬೆಲೆಯು (gold price) ಸ್ವಲ್ಪ ಹೆಚ್ಚಳವನ್ನು ಕಂಡಿದೆ. ೧೦ ರೂ.ಗಳಷ್ಟು ಏರಿಕೆ ಕಂಡು ಹತ್ತು ಗ್ರಾಂಗಳಿಗೆ ೭೭೪೧೦ ರೂ.ಗೆ ತಲುಪಿತು. ಬೆಳ್ಳಿ ಬೆಲೆಯೂ (Silver price) ಏರಿಕೆ ಕಂಡಿದ್ದು, ೧೦೦ ರೂಪಾಯಿ ಏರಿಕೆಯಾಗಿದ್ದು, ಒಂದು ಕಿಲೋಗ್ರಾಂಗೆ ೯೬೧೦೦ ರೂಪಾಯಿಗೆ ತಲುಪಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅದೇ ರೀತಿ, ೨೨-ಕ್ಯಾರೆಟ್ ಚಿನ್ನದ ಬೆಲೆಯು (gold price) ೧೦ ರೂ. ಏರಿಕೆಗೆ ಸಾಕ್ಷಿಯಾಗಿ ಹತ್ತು ಗ್ರಾಂ ಬೆಲೆ ೭೦೯೬೦ ರೂ.ಗೆ ಸ್ಥಿರವಾಗಿದೆ. ಮುಂಬೈ (Mumbai), ಕೋಲ್ಕತ್ತಾ (Kolkat) ಮತ್ತು ಹೈದರಾಬಾದ್ (hyderabad)ನಂತಹ ಪ್ರಮುಖ ನಗರಗಳಲ್ಲಿ, ಹತ್ತು ಗ್ರಾಂ ೨೪-ಕ್ಯಾರೆಟ್ ಚಿನ್ನದ ಬೆಲೆ ೭೭೪೧೦ ರೂಗಳಲ್ಲಿ ಸ್ಥಿರವಾಗಿದೆ. ಆದರೆ, ದೆಹಲಿಯಲ್ಲಿ (Delhi) ಬೆಲೆ ಸ್ವಲ್ಪ ಹೆಚ್ಚಾಗಿದ್ದು ೭೭೫೬೦ ರೂ.ಗೆ ಏರಿಕೆಯಾಗಿದೆ. ಬೆಂಗಳೂರು ಮತ್ತು ಚೆನ್ನೈ ೭೭೪೧೦ ರೂ. ದಾಖಲಿಸಿದೆ.
ಇದನ್ನೂ ಓದಿ : ಕಡವೆ ಬೇಟೆಯಾಡಿದ ಅಪರಿಚಿತರು
22-ಕ್ಯಾರೆಟ್ ಚಿನ್ನಕ್ಕೆ ಮುಂಬೈ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ ಹತ್ತು ಗ್ರಾಂಗೆ ೭೦೯೬೦ ರೂ., ದೆಹಲಿಯಲ್ಲಿ ಬೆಲೆ ೭೧೧೧೦ ರೂ ಆಗಿದ್ದರೆ, ಬೆಂಗಳೂರು (Bengaluru) ಮತ್ತು ಚೆನ್ನೈ (Chennai) ರೂ ೭೦೯೬೦ ದರ ದಾಖಲಾಗಿದೆ.
ಇದನ್ನೂ ಓದಿ : ಭಕ್ತಿಯ ಸಿಂಚನಗೈದ ಉಮೇಶ ಮುಂಡಳ್ಳಿ ಗಾಯನ
ದೆಹಲಿ, ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಬೆಳ್ಳಿ ಬೆಲೆಗಳು ಏಕರೂಪವಾಗಿದೆ. ಒಂದು ಕಿಲೋಗ್ರಾಂ ಬೆಳ್ಳಿ ರೂ. ೯೬೧೦೦ ಕ್ಕೆ ಮಾರಾಟವಾಗಿದೆ. ಆದರೆ, ಚೆನ್ನೈನಲ್ಲಿ ಬೆಳ್ಳಿ ಪ್ರತಿ ಕಿಲೋಗ್ರಾಂಗೆ ೧೦೨೧೦೦ ರೂ. ಆಗಿದೆ.