ಭಟ್ಕಳ (Bhatkal): ತಾಲೂಕಿನ ಯಲ್ವಡಿಕವೂರ ಪಂಚಾಯತ ವ್ಯಾಪ್ತಿಯ ಬೆಣಂದೂರಿನಲ್ಲಿ ಗರ್ಭಿಣಿ ಕಡವೆ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ನಗರದಲ್ಲಿ ಮನೆವೊಂದರ ಮೇಲೆ ದಾಳಿ ನಡೆಸಿ 20 ಕೆಜಿ ಮಾಂಸ ಸಹಿತ ಓರ್ವ ವ್ಯಕ್ತಿಯನ್ನು ಅರಣ್ಯ ಅಧಿಕಾರಿಗಳು (Forest officers) ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶುಕ್ರವಾರ ಮಧ್ಯಾಹ್ನ ವೇಳೆ ಮಹಿಯೋರ್ವಳು ಬೆಣಂದೂರಿಗೆ ಹೋಗುವ ರಸ್ತೆ ಪಕ್ಕದಲ್ಲಿ ದನದ ಮೇವಿಗಾಗಿ ಬಂದ ವೇಳೆ ಕಡವೆ ಬೇಟಿಯಾಡಿದ್ದು ಬೆಳಕಿಗೆ ಬಂದಿತ್ತು. ಯಾರೋ ಬೇಟೆಗಾರರು ಹೆಣ್ಣು ಕಡವೆಯನ್ನು ಬೇಟೆಯಾಡಿದ ಬಳಿಕ ಅದರ ತಲೆಯನ್ನು ಬೇರ್ಪಡಿಸಿ ಅಲ್ಲೇ ಎಸೆದು ಮಾಂಸವನ್ನು ಸಾಗಾಟ ಮಾಡಿಕೊಂಡು ಪರಾರಿಯಾಗಿದ್ದರು.

ವಿಡಿಯೋ ಸಹಿತ ಇದನ್ನೂ ಓದಿ :  ಕಾಣಿಕೆ ಹುಂಡಿಯಲ್ಲಿದ್ದ ಹಣ ಕಳ್ಳರ ಪಾಲು

ನಂತರ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಭಟ್ಕಳ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದರು. ಖಚಿತ ಮಾಹಿತಿ ಮೆರೆಗೆ ಭಟ್ಕಳ ವ್ಯಕ್ತಿಯ ಮನೆಯೊಂದರ ಮೇಲೆ ದಾಳಿ ನಡೆಸಿ ಮನೆಯಲ್ಲಿದ್ದ ಸುಮಾರು 20 ಕೆಜಿ ಮಾಂಸ ಹಾಗೂ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ :  ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ

ವಿಚಾರಣೆ ನಡೆಸಿ ವ್ಯಕ್ತಿಯನ್ನು ಬಿಡಲಾಗಿದೆ. ಮಾಂಸವನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಅಧಿಕಾರಿಗಳು (forest officers) ಮಾಹಿತಿ ನೀಡಿದ್ದಾರೆ.

ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ರೀಲ್ ವೀಕ್ಷಿಸಬಹುದು.

ವಿಡಿಯೋ ಸಹಿತ ಇದನ್ನೂ ಓದಿ : ಸಮುದ್ರ ಪಾಲಾಗುತ್ತಿದ್ದ ಯುವಕನ‌ ರಕ್ಷಣೆ