ಭಟ್ಕಳ (Bhatkal): ಪ್ರವಾದಿ ಮುಹಮ್ಮದ್‌ (prophet muhammed) ಪೈಗಂಬರರನ್ನು ಅವಹೇಳನ ಮಾಡಿದ ಉತ್ತರಪ್ರದೇಶದ (Uttara Pradesh) ಯತಿ ನರಸಿಂಹಾನಂದ ಸರಸ್ವತಿ ಸ್ವಾಮೀಜಿ ಎಂಬುವವರ ವಿರುದ್ಧ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (complaint registered).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉತ್ತರ ಪ್ರದೇಶದ ಯತಿಗಳಾದ ನರಸಿಂಹಾನಂದ ಸರಸ್ವತಿ ಸ್ವಾಮೀಜಿ ಪ್ರವಾದಿ ಮುಹಮ್ಮದ್ ಪೈಗಂಬರರನ್ನು ಅವಹೇಳನ ಮಾಡಿದ್ದಾರೆ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಯುಎಪಿಎ ಮತ್ತು ಎನ್.ಎಸ್.ಎ ಕಾಯ್ದೆಯಡಿ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ (complaint registered) ದಾಖಲಾಗಿದೆ.

ಇದನ್ನೂ ಓದಿ : ತಾಲೂಕು ಸೌಧದೆದುರು ಪ್ರತಿಭಟನೆ; ಮೆರವಣಿಗೆಯಿಲ್ಲ

ಇಲ್ಲಿನ ಸಾಮಾಜಿಕ ಮತ್ತು ರಾಜಕೀಯ ಸಂಘಟನೆಯಾಗಿರುವ ಮಜ್ಲಿಸೆ ಇಸ್ಲಾಹ್-ವ-ತಂಜೀಮ್‌ ಸಂಸ್ಥೆಯ ನೇತೃತ್ವದಲ್ಲಿ ಭಟ್ಕಳದ ವಿವಿಧ ಸಂಘಸಂಸ್ಥೆಗಳ ಮುಖಂಡರ ನಿಯೋಗವೊಂದು ಸೋಮವಾರ ಭಟ್ಕಳ ನಗರ ಠಾಣೆಗೆ ಭೇಟಿ ನೀಡಿ ಯತಿ ನರಸಿಂಹಾನಂದ ಸ್ವಾಮಿ ವಿರುದ್ಧ ದೂರನ್ನು ದಾಖಲಿಸಿದರು. ಈ ಸಂದರ್ಭದಲ್ಲಿ ತಂಜೀಮ್ ಆಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರವೀಬ್ ಎಂ.ಜೆ., ಹಾಗೂ ವಿವಿಧ ಜಮಾತ್ ನ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ :  ‘ಭಟ್ಕಳ ಬಂದ್’ ಕರೆಕೊಟ್ಟ ತಂಜೀಮ್