ಭಟ್ಕಳ (Bhatkal) : ಅಝರ್ ನಗರದ ಅಮರಶಾ ಕರಾಟೆ ಮತ್ತು ಫಿಟ್ನೆಸ್ ಅಕಾಡೆಮಿ (AKFA) ಸಂಸ್ಥೆಯು ಕರಾಟೆ ಪಟು ದಿ.ಕಾಸಿತ್ ರುಕ್ನುದ್ದೀನ ಸ್ಮರಣಾರ್ಥ ಅ.2೨೦ರಂದು ಭಟ್ಕಳದ ಅಮೀನ ಪ್ಯಾಲೇಸ್ ನಲ್ಲಿ ತನ್ನ ಮೊದಲ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ (Karate Championship) ಆಯೋಜಿಸುತ್ತಿದೆ ಎಂದು ಎ.ಕೆ.ಎಫ್.ಎ. ಸಂಸ್ಥಾಪಕ ಅಮರ್ ಶಾಬಂದ್ರಿ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಬುಧವಾರದಂದು ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ‘ಈ ಚಾಂಪಿಯನ್ ಶಿಪ್ನಲ್ಲಿ ಕರ್ನಾಟಕ(Karnataka), ಕೇರಳ(Kerala), ತೆಲಂಗಾಣ(Telangana), ಮಹಾರಾಷ್ಟ್ರ (Maharashtra) ಮತ್ತು ಗೋವಾ (Goa) ರಾಜ್ಯಗಳಿಂದ ೧೦೦೦ಕ್ಕಿಂತ ಹೆಚ್ಚು ಸ್ಪರ್ಧಾಳುಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ೧೫ಕ್ಕೂ ಹೆಚ್ಚು ರಾಜ್ಯ ಮತ್ತು ರಾಷ್ಟ್ರೀಯ ಚಾಂಪಿಯನ್ಗಳು ಈ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸುತ್ತಾರೆ. ಇದರೊಂದಿಗೆ ಕರಾಟೆ ಇಂಡಿಯಾ ಆರ್ಗನೈಸೇಶನ್ (KIO) ನಿಂದ ಪ್ರಮಾಣಿತ ೨೦ಕ್ಕೂ ಹೆಚ್ಚು ರೆಫರಿಗಳನ್ನು ಆಹ್ವಾನಿಸಲಾಗಿದೆ ಎಂದರು.
ಇದನ್ನೂ ಓದಿ : ಅಕ್ಟೋಬರ್ ೧೬ರಂದು ವಿವಿಧೆಡೆ ಅಡಿಕೆ ಧಾರಣೆ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ(Mankal Vaidya), ಗೌರವ ಅತಿಥಿಯಾಗಿ ಹಾಂಗ್ಯೋ ಐಸ್ ಕ್ರೀಮ್ (Hangyo Icecream) ಪ್ರೈ ಲಿ. ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಪೈ, ತಂಝೀಮ್ (Tanzeem) ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಭಟ್ಕಳ ಪುರಸಭಾ ಉಪಾಧ್ಯಕ್ಷ ಮುಹಿದ್ದೀನ್ ಅಲ್ತಾಫ್ ಖರೂರಿ, ಜಾಲಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಸೈಯ್ಯದ್ ಇಮ್ರಾನ್ ಲಂಕಾ, ಭಟ್ಕಳ ಅರ್ಬನ್ ಬ್ಯಾಂಕ್ ಅಧ್ಯಕ್ಷ ಜಾಫರ್ ಸಾದಿಖ್ ಶಾಬಂದ್ರಿ, ಭಟ್ಕಳ ಕಮ್ಯುನಿಟಿ ಜಿದ್ದಾ ಅಧ್ಯಕ್ಷ ಖಮರ್ ಸಾದಾ, ಸಮಾಜ ಸೇವಕ ನಝೀರ್ ಕಾಶಿಮಜಿ, ಲೈಫ್ ಕೇರ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಸಲ್ಮಾನ್ ಅಹ್ಮದ್ ಜುಬಾಪು, ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಮಾಜಿ ಅಧ್ಯಕ್ಷ ಅಝೀಝುಬ್ರಹ್ಮಾನ್ ರುಕ್ನುದ್ದೀನ್, ರೋಟರಿ ಕ್ಲಬ್ ಅಧ್ಯಕ್ಷ ಇಪ್ತಿಯಾಕ್ ಹಸನ್, ಕರ್ನಾಟಕ ಕರಾಟೆ ಅಸೋಸಿಯೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾರ್ಗವ ರೆಡ್ಡಿ, ಆಡಳಿತಾತ್ಮಕ ಕಾರ್ಯದರ್ಶಿ ಕೀರ್ತಿ ಜಿ.ಕೆ ಭಾಗವಹಿಸಲಿದ್ದಾರೆ ಎಂದರು.
ಇದನ್ನೂ ಓದಿ : ಅ.೨೧ರಂದು ಅರಣ್ಯ ಅತಿಕ್ರಮಣದಾರರ ಸಭೆ
ಚಾಂಪಿಯನ್ಶಿಪ್ (Karate Championship) ಒಂದು ದಿನದ ಈವೆಂಟ್ ಆಗಿದ್ದು, ಬೆಳಿಗ್ಗೆ ೮.೩೦ಕ್ಕೆ ಪ್ರಾರಂಭವಾಗಿ, ಸಂಜೆ ೭ ಗಂಟೆಗೆ ಸಮಾರೋಪಗೊಳ್ಳುತ್ತದೆ. ೫ ವರ್ಷದಿಂದ ಹಿಡಿದು ಎಲ್ಲಾ ವಯೋಮಾನದ ಹುಡುಗರು ಮತ್ತು ಹುಡುಗಿಯರು ‘ಕಟಾ’ ಮತ್ತು ಕುಮಿಟೆ ವಿಭಾಗಗಳಲ್ಲಿ ಭಾಗವಹಿಸಲಿದ್ದಾರೆ. ಆಯಾ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದವರು, ಗ್ರಾಂಡ್ ಚಾಂಪಿಯನ್ಶಿಪ್’ ಈವೆಂಟ್ನಲ್ಲಿ ಪ್ರದರ್ಶನ ನೀಡಲು ಅವಕಾಶವನ್ನು ಪಡೆಯುತ್ತಾರೆ. ಈ ವಿಭಾಗದಲ್ಲಿ ವಿಜೇತರಿಗೆ ೩೩ ಇಂಚು ಎತ್ತರದ ಟ್ರೋಫಿ ಮತ್ತು ರೂ. ೫೦೦೦ ನಗದು ಬಹುಮಾನ ನೀಡಲಾಗುತ್ತದೆ. ಗ್ರಾಂಡ್ ಚಾಂಪಿಯನ್ಶಿಪ್ 14 ವರ್ಷದೊಳಗಿನ ಬಾಲಕರು 14 ವರ್ಷಕ್ಕಿಂತ ಮೇಲ್ಪಟ್ಟ ಬಾಲಕರು ಮತ್ತು ಮಹಿಳಾ ವಿಭಾಗ ಎಂಬ ಮೂರು ವಿಭಿನ್ನ ವಿಭಾಗಗಳನ್ನು ಒಳಗೊಂಡಿದೆ ಎಂದು ಅಮರ್ ಶಾಬಂದ್ರಿ ವಿವರಿಸಿದರು.
ಇದನ್ನೂ ಓದಿ : ಉತ್ತಮ ಮುಖ್ಯ ಶಿಕ್ಷಕ ಶಿಕ್ಷಣ ಪ್ರಕಾಶ ಪ್ರಶಸ್ತಿ ಪ್ರದಾನ
ಸುದ್ದಿಗೋಷ್ಠಿಯಲ್ಲಿ ಉತ್ತರ ಕನ್ನಡ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಅರವಿಂದ ನಾಯ್ಕ ಕುಮಟಾ, ಜಿಲ್ಲಾ ಕರಾಟೆ ಅಸೋಸಿಯೇಷನ್ ಉಪಾಧ್ಯಕ್ಷ ಈಶ್ವರ ನಾಯ್ಕ ಆಸರಕೇರಿ, ಇಸ್ತಿಯಾಕ ಹಸನ್, ನದೀಮ್ ಶಾಬಂದ್ರಿ, ಅರ್ಬನ ಬ್ಯಾಂಕ್ ಮ್ಯಾನೇಜರ್ ಜಾಪರ ಅಲಿ ಮುಂತಾದವರು ಇದ್ದರು.
ವಿಡಿಯೋ ಸಹಿತ ಇದನ್ನೂ ಓದಿ : ಆತಂಕ ಸೃಷ್ಟಿಸಿದ ಹೆಬ್ಬಾವು