ಸಾಗರ : ತನ್ನ ಪತ್ನಿ ಜೊತೆ ಎದುರುಮನೆ ಯುವಕ ಮಾತನಾಡಿಸುತ್ತಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಮಾರಣಾಂತಿಕವಾಗಿ ಇಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ಬೆಳಿಗ್ಗೆ ತಾಲೂಕಿನ ಬೆಳಲಮಕ್ಕಿಯಲ್ಲಿ ನಡೆದಿದೆ.
ವಿಡಿಯೋ ನೋಡಿ : https://fb.watch/qkybug9whD/?mibextid=Nif5oz
ಇದನ್ನೂ ಓದಿ : ಕಾನನದ ನಡುವಲ್ಲಿ ಅದ್ಬುತ ವಾಸ್ತುಶಿಲ್ಪ ಚತುರ್ಮುಖ ಬಸದಿ
ನೀರಿನ ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಯಲಕುಂದ್ಲಿಯ ನವೀನ್ ಹಾಗೂ ಆತನ ಸ್ನೇಹಿತ ಧರೇಶ್ ಹಲ್ಲೆಗೊಳಗಾದ ವ್ಯಕ್ತಿಗಳಾಗಿದ್ದಾರೆ.
ತನ್ನ ಪತ್ನಿ ಜೊತೆ ನವೀನ್ ಎಂಬಾತ ಮಾತನಾಡುತ್ತಿದ್ದ ಎಂಬ ವಿಚಾರಕ್ಕೆ ಪತಿ ರವಿ ರೊಚ್ಚಿಗೆದ್ದು ಕತ್ತಿ ಹಾಗೂ ರಾಡ್‌ನಿಂದ ನವೀನ್ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಕಾರಿನ ಗಾಜು ಒಡೆಯುತ್ತಿರುವ ಶಬ್ದ ಕೇಳಿ ನವೀನ್ ಮನೆಯಿಂದ ಹೊರಗೆ ಬಂದಿದ್ದಾರೆ. ತನ್ನ ಕಾರಿನ ಗಾಜು ಏಕೆ ಒಡೆಯುತ್ತಿರುವೆ ಎಂದು ನವೀನ್ ಕೋಪದಿಂದ ರವಿ ಬಳಿ ಕೇಳಿದ್ದಾರೆ. ಆಗ ರವಿ ಕತ್ತಿಯಿಂದ ನವೀನ್ ಮೇಲೆ ದಾಳಿ ಮಾಡಿದ್ದಾರೆ. ಬಿಡಿಸಲು ಬಂದ ಸ್ನೇಹಿತ ಧರೇಶ್ ಮೇಲೂ ರವಿ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: Kuvempu university / ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಂವಿಧಾನ ಜಾಗೃತಿ ಜಾಥಾ
ಘಟನೆಯಲ್ಲಿ ನವೀನ್ ಬೆರಳು ಕಟ್ ಆಗಿದ್ದು ಎದೆಭಾಗಕ್ಕೆ ತೀವ್ರತರವಾದ ಗಾಯವಾಗಿದೆ. ನವೀನ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಧರೇಶ್ ಅವರಿಗೂ ಗಂಭೀರ ಸ್ವರೂಪದ ಗಾಯವಾಗಿದ್ದು ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಪೇಟೆ ಠಾಣೆ ಪೊಲೀಸರು ನವೀನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಿಮ್ಮ ಭಟ್ಕಳ್ ಡೈರಿ ಯಿಂದ ಪ್ರಸಾರ ವಾಗುವ ಸಮಾಚಾರಗಳು ನಿಷ್ಪಕ್ಷ್. ತನದಿಂದ ನೈಜತೆ ಇಂದ ಕೂಡಿದ್ದು ಜನರು ಸಂತೋಷದಿಂದ ಸಮಾಚಾರವನ್ನು ಓದುತ್ತಾರೆ. ಜನರ ಮೆಚ್ಚುಗೆಗೆ ಪಾತ್ರವಾಗಿದೆ ಹೀಗೆ ನಿಮ್ಮ ಕಾರ್ಯ ಇನ್ನೂ ಹೆಚ್ಚು ಜನಪ್ರಿಯವಾಗಿ ಹಿಮಾಲಯದ ಎತ್ತರಕ್ಕೆ ಬೆಳೆಯಲಿ p
ಧನ್ಯವಾದಗಳು ಸರ್