ಬೆಳಗಾವಿ (Belagavi) : ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ (Belagavi Airport) ಬಾಂಬ್ ಬೆದರಿಕೆ (Bomb Threat) ಎದುರಾಗಿದೆ. ಇಮೇಲ್ ಮೂಲಕ ಏರ್ಪೋಟ್ ಸ್ಪೋಟಿಸುವ ಬೆದರಿಕೆ ಹಾಕಿರುವ ಅಪರಿಚಿತರುಆತಂಕ ಸೃಷ್ಟಿಸಿದ್ದು, ಇದು ಹುಸಿಯಾಗಿರಬಹುದೇ ? ಎಂಬ ಸಂದೇಹವೂ ಇದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸಾಂಬ್ರಾ ವಿಮಾನ ನಿಲ್ದಾಣದ (Belagavi Airport) ನಿರ್ದೇಶಕ ತ್ಯಾಗರಾಜ್ ಅವರ ಇಮೇಲ್ಗೆ ಈ ಬೆದರಿಕೆ ಪತ್ರ ಬಂದಿದೆ. ಚೆನ್ನೈನಿಂದ (Chennai) ಬಾಂಬ್ ಬೆದರಿಕೆ ಇಮೇಲ್ ಬಂದಿರುವ ಬಗ್ಗೆ ಮಾಹಿತಿ ಲಭಿಸಿದೆ. ಬಾಂಬ್ ಬೆದರಿಕೆ ಪತ್ರದ ಬೆನ್ನಲ್ಲೇ ವಿಮಾನ ನಿಲ್ದಾಣಕ್ಕೆ ಭದ್ರತೆ ಹೆಚ್ಚಳ ಮಾಡಲಾಗಿದೆ. ಶ್ವಾನದಳ (Dog Squad), ಬಾಂಬ್ ಸ್ಕಾಡ್ನಿಂದ (Bomb Squad) ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ಮಾಡಲಾಗಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ತ್ಯಾಗರಾಜ್ ಅವರು ಈ ಬಗ್ಗೆ ಪೊಲೀಸರಿಗೆ ಅಗತ್ಯ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಕೃಷಿ ಭೂಮಿಗೆ ಆಧಾರ ಲಿಂಕ್ ಯಾಕೆ?