ಭಟ್ಕಳ (Bhatkal): ಜಾಲಿ ಪಟ್ಟಣ ಪಂಚಾಯತ್ ಮತ್ತು ಭಟ್ಕಳ ಸುತ್ತಮುತ್ತ ವ್ಯಾಪಕವಾಗುತ್ತಿರುವ ಗೋವುಗಳ ಕಳ್ಳತನವು ಸ್ಥಳೀಯ ರೈತ ಮತ್ತು ಕಾರ್ಮಿಕ ಸಮುದಾಯಕ್ಕೆ ಆರ್ಥಿಕ ಹಾಗೂ ಸಾಮಾಜಿಕ ಹೊಡೆತ ನೀಡಿದೆ. ಜನರಲ್ಲಿ ಆತಂಕ ಮತ್ತು ಅಶಾಂತಿಯನ್ನು ಹೆಚ್ಚಿಸಿದೆ. ಇತ್ತೀಚಿನ ಸಿಸಿಟಿವಿ ದೃಶ್ಯಗಳಲ್ಲಿ ಗೋವುಗಳ ಕಳ್ಳತನ ದೃಢಪಟ್ಟ ಹಿನ್ನೆಲೆಯಲ್ಲಿ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ (Tanzeem) ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಟ್ಕಳ ವ್ಯಾಪ್ತಿಯಲ್ಲಿ ಪದೇ ಪದೇ ಗೋ ಕಳ್ಳತನದ ಪ್ರಕರಣಗಳು ಬೆಳಕಿಗೆ ಬಂದರೂ ಪೋಲೀಸರಿಂದ ಸೂಕ್ತ ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ, ಇಸ್ಲಾಮಿನ ದೃಷ್ಟಿಯಿಂದ ಕಳ್ಳತನ ಮಾಡಿದ ಜಾನುವಾರುಗಳ ಮಾಂಸ ಸೇವನೆಯು ನಿಷಿದ್ಧವಾಗಿದ್ದು, ಇದು ದೊಡ್ಡ ಅನ್ಯಾಯ ಎಂದು ಅಬ್ದುಲ್ ರಖೀಬ್ ಎಂ.ಜೆ. ತಿಳಿಸಿದ್ದಾರೆ.
ಇದನ್ನೂ ಓದಿ : ಗೂಡಂಗಡಿಕಾರರು-ಆಟೋ ಚಾಲಕರ ನಡುವೆ ಶೀತಲ ಸಮರ
ಜಾಲಿ ಪಟ್ಟಣ ಪಂಚಾಯತ್ ಹಾಗೂ ಭಟ್ಕಳದ ಸುತ್ತಮುತ್ತ ಹೆಚ್ಚುತ್ತಿರುವ ಗೋವುಗಳ ಕಳ್ಳತನವು ಸ್ಥಳೀಯ ಸಮುದಾಯವನ್ನು ತೀವ್ರ ಸಂಕಟಕ್ಕೆ ತಳ್ಳುತ್ತಿದೆ. ಈ ಕಳ್ಳತನದ ಘಟನೆಗಳು ಹಸಿವು ತೀರಿಸುವ ಜಾನುವಾರುಗಳ ಮೇಲೆ ಅವಲಂಬಿತರಾದ ರೈತರು ಮತ್ತು ದೈನಂದಿನ ಕೆಲಸಗಾರರಿಗೆ ಆರ್ಥಿಕ ನಷ್ಟವನ್ನುಂಟುಮಾಡಿದೆ. ಇದರಿಂದ ಸ್ಥಳೀಯ ಸಮುದಾಯದ ಸಾಮಾಜಿಕ ಶಾಂತಿಗೆ ದೊಡ್ಡ ಹೊಡೆತವನ್ನು ನೀಡಿದೆ. ಇತ್ತೀಚೆಗಷ್ಟೇ ಸಿಸಿಟಿವಿಯಲ್ಲಿ ಸೆರೆಯಾಗಿರುವ ಗೋವು ಕಳ್ಳತನದ ಘಟನೆ ಸಮಾಜದಲ್ಲಿ ಹೆಚ್ಚು ಆತಂಕ ಮತ್ತು ಅಶಾಂತಿಯನ್ನು ಹೆಚ್ಚಿಸಿದೆ. ಇವು ನೇರವಾಗಿ ನಮ್ಮ ಸಮಾಜದ ಶಾಂತಿ ಮತ್ತು ಸಾಮರಸ್ಯವನ್ನು ಹಾಳುಮಾಡುತ್ತವೆ. ಗೋವುಗಳ ಕಳ್ಳತನವು ಕೇವಲ ಆರ್ಥಿಕ ಹಾನಿಯಲ್ಲ, ಇದರಿಂದ ಜನರ ಮನಸ್ಸುಗಳಲ್ಲಿ ಭಯ ಮತ್ತು ಅಶಾಂತಿ ಮೂಡುತ್ತದೆ ಎಂದು ಅವರು ತಿಳಿಸಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : ಉ.ಕ. ಜಿಲ್ಲೆಯಲ್ಲಿ ರಥಯಾತ್ರೆ ಆರಂಭ
ಆರೋಪಿಗಳು ಯಾರೇ ಇರಲಿ, ಎಷ್ಟೇ ಪ್ರಭಾವಿತರಿರಲಿ, ಯಾವುದೇ ವರ್ಗ ಅಥವಾ ಧರ್ಮಕ್ಕೆ ಸೇರಿದವನೂ ಆಗಿರಲಿ, ತಕ್ಷಣವೇ ಕೃತ್ಯ ಎಸಗಿದವರನ್ನು ಗುರುತಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಮತ್ತೆಂದೂ ಇಂತಹ ಕೃತ್ಯಕ್ಕೆ ಕೈಹಾಕಕೂಡದು. ಸಮಾಜದಲ್ಲಿ ಶಾಂತಿ, ಮತ್ತು ನ್ಯಾಯವನ್ನು ಭದ್ರಪಡಿಸಲು, ಈ ಕಾನೂನು ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಎಂದು ಮಜ್ಜಿಸೆ ಇಸ್ಲಾಹ್-ವ-ತಂಝೀಮ್ (Tanzeem) ಆಗ್ರಹಿಸಿದೆ.
ಇದನ್ನೂ ಓದಿ : ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ