ಭಟ್ಕಳ (Bhatkal): ತಾಲೂಕಿನ ಹೆಬ್ಳೆ ಪಂಚಾಯತ ವ್ಯಾಪ್ತಿಯ ಕುಕನೀರ ಗ್ರಾಮದ ಮಧ್ಯದಲ್ಲಿ ಅರಣ್ಯ ಜಾಗ (Forest Land) ಅತಿಕ್ರಮಿಸಿರುವುದಕ್ಕೆ (Enchroachment) ಸ್ಥಳೀಯ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಹಿಂದೂ ಸಂಘಟನೆಗಳ ಮುಖಂಡರೊಂದಿಗೆ ವಲಯ ಅರಣ್ಯಾಧಿಕಾರಿ (RFO) ಅವರನ್ನು ಭೇಟಿಯಾದ ಗ್ರಾಮಸ್ಥರ ನಿಯೋಗ, ಅತಿಕ್ರಮಿತ (Enchroachment) ಜಾಗ ಖುಲ್ಲಾಪಡಿಸುವಂತೆ ಒತ್ತಾಯಿಸಿದರು. ಅಲ್ಲಿರುವ ಜಾಗದ ಸುತ್ತಲೂ ಗಿಡಗಳನ್ನು ನೆಟ್ಟು, ಜಾಗಕ್ಕೆ ತಂತಿ ಬೇಲಿ ಹಾಕಬೇಕೆಂದು  ಆಗ್ರಹಿಸಿದರು. ಗ್ರಾಮಸ್ಥರ ಅಹವಾಲು ಆಲಿಸಿದ ವಲಯಾರಣ್ಯಾಧಿಕಾರಿ ಒಂದು ದಿನದೊಳಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಮಯದಲ್ಲಿ ಹಿಂದೂ ಸಮಾಜದ ಮುಖಂಡ ಕೃಷ್ಣ ನಾಯ್ಕ,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಹಿಂದೂಳಿದ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಮಾಹಿತಿ ಹಕ್ಕು ಹೋರಾಟಗಾರ ನಾಗೇಶ ನಾಯ್ಕ, ಕುಕನೀರ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ :  ಖ್ಯಾತ ಶಸ್ತ್ರಚಿಕಿತ್ಸಕ ಡಾ.ಮಂಜುನಾಥ ಶೆಟ್ಟಿ ನಿಧನ