ಭಟ್ಕಳ (Bhatkal) : ವಿಜಯ ದಶಮಿ (Vijayadashami) ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ (RSS) ಭಟ್ಕಳ ನಗರದಲ್ಲಿ ಸೆ. ೨೭ರಂದು ಭವ್ಯ ಪಥ ಸಂಚಲನ ಆಯೋಜಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶಿಸ್ತುಬದ್ಧ ಗಣವೇಷಧಾರಿಗಳ ಪಥ ಸಂಚಲನ ನೋಡುವುದೇ ಒಂದು ಆಕರ್ಷಕ. ಅದರಲ್ಲೂ ಈ ಬಾರಿಯ ಪಥಸಂಚಲನ ಹೊಸ ದಾಖಲೆ ಮಾಡಲು ಹೊರಟಿದೆ. ಭಟ್ಕಳದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಆರ್‌ಎಸ್‌ಎಸ್‌ (RSS) ಪಥ ಸಂಚಲನ ಎರಡು ದಿಕ್ಕಿನಲ್ಲಿ ನಡೆಯಲಿದೆ. ಒಂದು ಸ್ಥಳದಿಂದ ಹೊರಡುವ ಪಥ ಸಂಚಲನ ಎರಡು ಭಾಗವಾಗಲಿದೆ. ನಂತರ ಎರಡೂ ಪಥ ಸಂಚಲನ ಮತ್ತೆ ಸಂಗಮವಾಗಲಿದೆ. ಇಂತಹ ಸುಂದರ, ಐತಿಹಾಸಿಕ ಕ್ಷಣಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸ್ವೇವಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಸುಪ್ರೀಂ ಕೋರ್ಟನಲ್ಲಿ ಸರ್ಕಾರ ನಿಲುವು ಪ್ರಕಟಿಸಲಿ

ಸೆ.೨೭ರಂದು ಮಧ್ಯಾಹ್ನ ೩.೧೫ ಗಂಟೆಗೆ ಗಣವೇಷಧಾರಿಗಳ ಪಥಸಂಚಲನ ನಗರದ ನ್ಯೂ ಇಂಗ್ಲೀಷ್‌ ಶಾಲೆಯಿಂದ ಹೊರಡಲಿದೆ. ಬಂದರ ರಸ್ತೆಯ ಮಾರ್ಗವಾಗಿ ಬರುವ ಪಥ ಸಂಚಲನ ಸಂಶುದ್ದೀನ್‌ ವೃತ್ತದಲ್ಲಿ ಎರಡು ಭಾಗವಾಗಲಿದೆ. ಒಂದು ಪಥ ಸಾಗರ ರಸ್ತೆ, ಹುರುಳಿಸಾಲು ಕಡೆ ಸಾಗಿದರೆ, ಇನ್ನೊಂದು ಪಥ ನಗರದ ಮುಖ್ಯ ರಸ್ತೆಯ ಕಡೆ ಸಂಚರಿಸಲಿದೆ. ಎರಡೂ ಪಥಗಳು ಮತ್ತೆ ಮುಖ್ಯ ರಸ್ತೆಯಲ್ಲಿ ಸಂಗಮವಾಗಿ ಮತ್ತೆ ನ್ಯೂ ಇಂಗ್ಲೀಷ್‌ ಸ್ಕೂಲಿನತ್ತ ತೆರಳಲಿದೆ. ಸಂಜೆ ೫.೧೫ಕ್ಕೆ ನ್ಯೂ ಇಂಗ್ಲೀಷ್‌ ಸ್ಕೂಲ್‌ ಆವರಣದಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ. ಸಂಘದ ೧೦೦ ವರ್ಷಗಳ ಹೊಸ್ತಿಲ್ಲಿ ಇಂಥದ್ದೊಂದು ಅದ್ಭುತ ಕಾರ್ಯಕ್ರಮವನ್ನು ಭಟ್ಕಳದಲ್ಲಿ ಆಯೋಜಿಸಲಾಗಿದೆ.

ಇದನ್ನೂ ಓದಿ : ಅರಣ್ಯ ಜಾಗ ಅತಿಕ್ರಮಣಕ್ಕೆ ಗ್ರಾಮಸ್ಥರ ವಿರೋಧ