ಭಟ್ಕಳ (Bhatkal) : ಮಾರುತಿ ಸ್ವಿಫ್ಟ್ (Maruti swift) ಕಾರಿಗೆ ಬಜಾಜ್ ಅವೆಂಜರ್ (Bajaj Avenger) ಬೈಕ್ ಡಿಕ್ಕಿಯಾಗಿದೆ. ಗಾಯಗೊಂಡ ಬೈಕ್ ಸವಾರನ ವಿರುದ್ಧ ಭಟ್ಕಳ ಶಹರ ಠಾಣೆಯಲ್ಲಿ ದೂರು (Complaint) ದಾಖಲಾಗಿದೆ. ನಿನ್ನೆ, ಅ.೨೧ರಂದು ರಾತ್ರಿ ೮.೩೦ರ ಸುಮಾರಿಗೆ ಸಂಶುದ್ದೀನ್ ವೃತ್ತದ ಬಳಿ ಈ ಅಪಘಾತ (Accident) ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಗಾಯಗೊಂಡ ಬೈಕ್ ಸವಾರ ಪುರವರ್ಗದ ಪ್ರಶಾಂತ ನಾರಾಯಣ ನಾಯ್ಕ ವಿರುದ್ಧ ಕಾರು ಚಾಲಕ ಕುಂಟವಾಣಿಯ ಶ್ರೀಧರ ಮಂಜಯ್ಯ ಶೆಟ್ಟಿ (೬೪) ದೂರು (Complaint) ದಾಖಲಿಸಿದ್ದಾರೆ. ಹೊಸ ಬಸ್ ನಿಲ್ದಾಣದ ಕಡೆಯಿಂದ ಸಾಗರ (Sagar) ರಸ್ತೆ ಕಡೆಗೆ ಸಂಶುದ್ದೀನ್ ವೃತ್ತದ ಬಳಿ ತಿರುಗಿಸಿದಾಗ ಬೈಕ್ ಡಿಕ್ಕಿಯಾಗಿದೆ. ಹೊನ್ನಾವರ (Honnavar) ಕಡೆಯಿಂದ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ ಎಂದು ದೂರಲಾಗಿದೆ. ಘಟನೆಯಲ್ಲಿ ಬೈಕ್ ಸವಾರಗೆ ಗಾಯವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ನ.೧ರಂದು ಝಗಮಗಿಸಲಿದೆ ಉತ್ತರ ಕನ್ನಡ