ಭಟ್ಕಳ (Bhatkal) : ಮಹಾರಾಷ್ಟ್ರದ (Maharashtra) ಪುಣೆಯಲ್ಲಿ (Pune) ನಡೆದ ರಾಷ್ಟ್ರ ಮಟ್ಟದ (National level) ಪ್ರತಿಷ್ಠಿತ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಸ್ಪರ್ಧೆ “ಗುಣಿಜ ಬಂದೀಶ್ ರಾಷ್ಟ್ರೀಯ ಪ್ರತಿಯೋಗಿತಾ” ಸ್ಪರ್ಧೆಯಲ್ಲಿ ಕುಮಟಾದ (Kumta) ವಿದುಷಿ ತೇಜಸ್ವಿನಿ ದಿಗಂಬರ ವೆರ್ಣೇಕರ್ ಪ್ರಥಮ ಸ್ಥಾನಕ್ಕೆ ಪಾತ್ರರಾಗಿದ್ದಾರೆ (Music Award).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪದ್ಮಭೂಷಣ (Padmabhushan) ಪಂಡಿತ ಸಿ.ಆರ್.ವ್ಯಾಸ್ (CR Vyas) ಇವರ ಜನ್ಮ ಶತಮಾನೋತ್ಸವದ ಅಂಗವಾಗಿ ಗ್ರೇಸ್ ಫೌಂಡೇಶನ್ ಮತ್ತು ಪಂಚಮ್ ನಿಷಾದ್ ಈ ಸ್ಪರ್ಧೆಯನ್ನು ಆಯೋಜಿಸಿದ್ದರು. ಈ ಸ್ಪರ್ಧೆಯಲ್ಲಿ ಪಂಡಿತ ಸಿ.ಆರ್.ವ್ಯಾಸ್ ರಚಿಸಿದ ಬಂದೀಶ್ ಗಳನ್ನು ಹಾಡಬೇಕಾಗಿತ್ತು. ದೇಶದ ವಿವಿಧ ರಾಜ್ಯಗಳಿಂದ ಆಯ್ದ ೩೦ ಸ್ಪರ್ಧಿಗಳ ನಡುವೆ ಸ್ಪರ್ಧೆಯು ಪುಣೆಯಲ್ಲಿ ಸತತ ೩ ಹಂತಗಳಲ್ಲಿ ನಡೆಯಿತು.

ವಿಡಿಯೋ ವರದಿ ಸಹಿತ ಇದನ್ನೂ ಓದಿ : ಪ್ರತಿ ವಾರ ಭಟ್ಕಳ, ಹೊನ್ನಾವರದಲ್ಲಿ ಜನಸ್ಪಂದನ

ಈ ಸ್ಪರ್ಧೆಯ ನಿರ್ಣಾಯಕರಾಗಿ ಸಂಗೀತ ಜಗತ್ತಿನ ದಿಗ್ಗಜರಾದ ಪದ್ಮಭೂಷಣ ಪಂ.ಸಾಜನ್ ಮಿಶ್ರ, ಪದ್ಮಶ್ರೀ ಪಂ.ಸತೀಶ ವ್ಯಾಸ, ಪದ್ಮಶ್ರೀ ಪಂಡಿತ ಉಲ್ಹಾಸ್ ಕಶಾಲ್ಕರ್, ವಿದುಷಿ ಅಶ್ವಿನಿ ಭಿಡೆ ದೇಶಪಾಂಡೆ, ಪದ್ಮಶ್ರೀ ಪಂ.ಸುರೇಶ ತಲ್ವಾಲ್ಕರ್, ವಿದುಷಿ ದೇವಕಿ ಪಂಡಿತ,  ಪದ್ಮಶ್ರೀ ಪಂ.ಸತೀಶ ವ್ಯಾಸ, ಪಂ.ಸುಹಾಸ ವ್ಯಾಸ, ವಿದುಷಿ ನಿರ್ಮಲಾ ಗೋಗಟೆ ಆಗಮಿಸಿದ್ದರು. ಎಲ್ಲ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದ ತೇಜಸ್ವಿನಿ ವೆರ್ಣೇಕರ್ ಪ್ರಥಮ ಸ್ಥಾನ ವಿಜೇತರಾಗಿ ೧.೨೫ ಲಕ್ಷ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಪಡೆದಿರುತ್ತಾರೆ. ಬಹುಮಾನ ವಿತರಣಾ ಸಮಾರಂಭವು ಪುಣೆಯ ಶ್ರೀರಾಮ್ ಲಾಗೂ ಅವಕಾಶ ರಂಗ ಭವನದಲ್ಲಿ ನಡೆಯಿತು.

ವಿಡಿಯೋ ವರದಿ ಸಹಿತ ಇದನ್ನೂ ಓದಿ : ಮಗನ ಸಾವಿನ‌‌ ಸುದ್ದಿ ಕೇಳಿ ತಂದೆಯೂ ಹೃದಯಾಘಾತದಿಂದ ಸಾವು

ತೇಜಸ್ವಿನಿಯವರು ಕಾಶಿ ಹಿಂದೂ ವಿಶ್ವವಿದ್ಯಾಲಯದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚಿನ ಅಂಕಗಗಳೊಂದಿಗೆ ೪ ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ. ಅಖಿಲ ಭಾರತ ಗಂಧರ್ವ ಮಹಾಮಂಡಳಿ ನಡೆಸುವ ಅಲಂಕಾರ ಪರೀಕ್ಷೆಯಲ್ಲಿ ರಾಷ್ಟಮಟ್ಟದಲ್ಲಿ ಪ್ರಥಮ ಸ್ಥಾನ ಮತ್ತು ಆಲ್ ಇಂಡಿಯಾ ರೇಡಿಯೋ  ನಡೆಸುವ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಕರ್ನಾಟಕ ಸರ್ಕಾರದ (Karnataka Government) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ ಕೆಳದಿ ಚೆನ್ನಮ್ಮ ಪ್ರಶಸ್ತಿ, ಸೊಲ್ಲಾಪುರದ ದುರ್ಲಭ ಸುಂದ್ರಿ ವಾದ್ಯ ಕಲಾ ಅಕಾಡೆಮಿಯ “ಸುಂದ್ರಿ ಸಾಮ್ರಾಟ್ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಇದನ್ನೂ ಓದಿ : ಅಕ್ಟೋಬರ್‌ ೨೨ರಂದು ವಿವಿಧೆಡೆ ಅಡಿಕೆ ಧಾರಣೆ

ತೇಜಸ್ವಿನಿಯವರು ಕೇಂದ್ರ ಸರ್ಕಾರ (Central Government)ನೀಡುವ “ಯಂಗ್ ಆರ್ಟಿಸ್ಟ್” ಶಿಷ್ಯವೇತನ, ಕರ್ನಾಟಕ ನೃತ್ಯ ಮತ್ತು ಸಂಗೀತ ಅಕಾಡೆಮಿಯ ಶಿಷ್ಟವೇತನಕ್ಕೂ ಪಾತ್ರರಾಗಿರುತ್ತಾರೆ. ಇವರು ತಿರುಪತಿ (Tirupati), ಪ್ರಯಾಗ, ತ್ರಿಪುರ, ಕೊಲ್ಕತ್ತಾ, ಮುಂಬೈ, ಜಲಂಧರ್, ವಾರಾಣಸಿ, ಸೋನಭದ್ರ, ತಲೇಗಾಂವ್, ಸೊಲ್ಲಾಪುರ, ಬೆಂಗಳೂರು (Bengaluru) , ಗಾಣಗಾಪುರ, ಅಗರ್ತಲಾ ಅಲ್ಲದೆ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ವೇಳೆ ಅಯೋಧ್ಯೆ (Ayodhya) ಶ್ರೀ ರಾಮಮಂದಿರದಲ್ಲೂ ಸಂಗೀತ ಕಚೇರಿ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರಗಿದ್ದಾರೆ. ಇವರು ಕುಮಟಾದ ಶಂಕರ ಲಕ್ಷ್ಮಣ ವೆರ್ಣೇಕರ್ ಮತ್ತು ಸುಮಿತ್ರಬಾಯಿ ಇವರ ಮೊಮ್ಮಗಳಾಗಿದ್ದಾರೆ.

ವಿಡಿಯೋ ವರದಿ ಸಹಿತ ಇದನ್ನೂ ಓದಿ : ಸಂರಕ್ಷಣೆಗೆ ಮುಂದಾಗದ ಅಧಿಕಾರಿಗಳ ಮೇಲೆ ಶಂಕೆ