ಭಟ್ಕಳ (Bhatkal): ಮೇವು ತಿನ್ನಲು ಬಂದ ಗೋವೊಂದನ್ನು ದುಷ್ಕರ್ಮಿಗಳು ವಧೆ ಮಾಡಿ ರುಂಡ ಮತ್ತು ಅದರ ಅವಶೇಷಗಳನ್ನು ಅಲ್ಲೇ ಸಮೀಪವಿದ್ದ ಬಾವಿಯಲ್ಲಿ ಎಸೆದು ಪರಾರಿಯಾಗಿರುವ ಘಟನೆ ಮುಟ್ಟಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ತಲಾಂದಗೆ ತೆರಳುವ ರಸ್ತೆ ಸಮೀಪ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಂಜುನಾಥ ಸೋಮಯ್ಯ ಗೊಂಡ ಎನ್ನುವರಿಗೆ ಸೇರಿದ ಗೋವು ಇದಾಗಿದೆ. ನಿನ್ನೆ ಸಂಜೆ ಅಷ್ಟೇ ಅಲ್ಲೇ ಸಮೀಪವಿದ್ದ ಹೊಳೆ ಬಳಿ ಮೇವು ತಿನ್ನುತ್ತಿರುವುದನ್ನು ನೋಡಿದ್ದರು. ನಂತರ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಬಳಿಕ ರಾತ್ರಿ ಪೂರ್ತಿ ಹುಡುಕಾಡಿದರು ಎಲ್ಲಿಯೂ ಪತ್ತೆಯಾಗಿರಲಿಲ್ಲ. ಇಂದು ಮತ್ತೆ ಹುಡುಕಿದಾಗ ಗೋವುಗಳು ಮೇವು ತಿನ್ನಲು ಬರುವ ಸ್ಥಳದಲ್ಲಿ ವಧೆ ಮಾಡಿ ರುಂಡ ಹಾಗೂ ಅದರ ಅವಶೇಷಗಳನ್ನು ಅಲ್ಲೇ ಸಮೀಪವಿದ್ದ ಬಾವಿಗೆ ಎಸೆದಿರುವುದು ಪತ್ತೆಯಾಗಿದೆ. ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : ಕಾರಿನಲ್ಲಿ ಗೋವನ್ನು ಕದ್ದು ಪರಾರಿಯಾದ ಮುಸುಕುಧಾರಿಗಳು
ಕಳೆದ ೨ ವಾರಗಳ ಹಿಂದಷ್ಟೇ ನಗರದ ಆಸರಕೇರಿಯಲ್ಲಿ ಕಳ್ಳತನ ಮಾಡಿಕೊಂಡು ಬಂದ ಗೋವನ್ನು ಇದೇ ರೀತಿ ವಧೆ ಮಾಡಿ ರುಂಡ ಮತ್ತು ಅವಶೇಷಗಳನ್ನು ಅಲ್ಲೇ ಬಿಟ್ಟು ಹೋಗಿರುವುದು ಪತ್ತೆಯಾಗಿತ್ತು. ಮೊನ್ನೆಯಷ್ಟೇ ಜಾಲಿ ಪಂಚಾಯತ ವ್ಯಾಪ್ತಿಯಲ್ಲಿ ಗೋವನ್ನು ಮೂವರು ದುಷ್ಕರ್ಮಿಗಳು ಕಾರಿನಲ್ಲಿ ಕದ್ದೊಯ್ದಿದ್ದರು. ಒಟ್ಟಾರೆ ಭಟ್ಕಳದಲ್ಲಿ (Bhatkal) ಗೋ ಕಳ್ಳರ ಅಟ್ಟಹಾಸ ಹೆಚ್ಚಾಗಿದೆ. ಪೊಲೀಸರು ಈ ನಿಟ್ಟಿನಲ್ಲಿ ತೀಕ್ಷ್ಣ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದರು.
ವಿಡಿಯೋ ವರದಿಯನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.
ವಿಡಿಯೋ ಸಹಿತ ಇದನ್ನೂ ಓದಿ : ಅಜ್ಞಾತ ಸ್ಥಳದಲ್ಲಿ ಗೋವಿನ ಅವಶೇಷಗಳು ಪತ್ತೆ