ಭಟ್ಕಳ: ನಗರದ ಸೋನಾರಕೇರಿಯ ದೈವಜ್ಞ ಬ್ರಾಹ್ಮಣರ ಶ್ರೀ ಗಣಪತಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಭಜನಾ ಸಪ್ತಾಹ ಫೆ.20ರಂದು ಆರಂಭಗೊಂಡಿದ್ದು, ಮಾ.1ರವರೆಗೆ ಪ್ರತಿಷ್ಠಾ ವರ್ಧಂತಿ ಉತ್ಸವ, ಆಗಮೋಕ್ತ ಭೌತಿಕೋತ್ಸವ (ರಜತ ಮಹೋತ್ಸವ) ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಇದನ್ನೂ ಓದಿ : ಮಹಿಳಾ ಭಜನಾ ತಂಡದಿಂದ 8 ಗಂಟೆಗೂ ಅಧಿಕ ಕಾಲ ಕುಣಿತ
ಫೆ.20ರಂದು ಬೆಳಿಗ್ಗೆ ದೀಪಾರಾಧನೆಯೊಂದಿಗೆ ಭಜನಾ ಸಪ್ತಾಹ ಆರಂಭಗೊಂಡಿದೆ. ಫೆ.27ರವರೆಗೆ ವಸಂತಪೂಜೆ, ಅಹೋರಾತ್ರಿ ಭಜನೆ ನಡೆಯಲಿದೆ. ಫೆ.27ರಂದು ಬೆಳಿಗ್ಗೆ 9 ಘಂಟೆಗೆ ಸರಿಯಾಗಿ ಸಪ್ತಾಹ ಭಜನಾ ಮಂಗಲ ನಂತರ ಮಂಗಲೋದಕ ಸ್ನಾನ, ಸತ್ಯನಾರಾಯಣ ವ್ರತ, ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ ರಜತ ಲಾಲಕಿ ಉತ್ಸವ ಅಷ್ಟಾವಧಾನ ಸೇವೆ, ವಸಂತ ಪೂಜೆ ಇತ್ಯಾದಿ ನಡೆಯಲಿದೆ.
ಈ ವಿಡಿಯೋ ನೋಡಿ : ವಾರದ ಸಂತೆ ಮೀರಿಸಿದ ಮಕ್ಕಳ ಸಂತೆ https://fb.watch/qlfa67TxNc/?mibextid=Nif5oz
ಫೆ.26ರಂದು ಪ್ರತಿಷ್ಠಾ ವರ್ಧಂತಿ ಉತ್ಸವ ಮತ್ತು ರಥೋತ್ಸವದ ನಡೆಯಲಿದ್ದು, ಬೆಳಿಗ್ಗೆಯಿಂದ ಶ್ರೀ ಗಣೇಶ ಪೂಜೆ, ಪುಣ್ಯಾಹ, ಧ್ವಜಾರೋಹಣ, ಮೃತ್ತಿಕಾಹರಣ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ಮಂಟಪ ಸಂಸ್ಕಾರ, ಬೀಜ ವಾಪನ, ಬೇರಿತಾಡನ, ಬಲಿದಾನ ಇತ್ಯಾದಿ ನಡೆಯಲಿವೆ.
ಫೆ.27ರಂದು ಶ್ರೀ ಗಣೇಶಪೂಜೆ, ಪುಣ್ಯಾಹ, ಅಧಿವಾಸ ಪೂಜೆ, ಅಧಿವಾಸ ಹೋಮ, ಹವನಗಳು, ರಾತ್ರಿ ಬಲಿದಾನ ಉತ್ಸವ ಅಲಂಕಾರ ಪೂಜೆ ಇತ್ಯಾದಿ ನಡೆಯಲಿವೆ.
ಫೆ.28ರಂದು ಶ್ರೀ ಗಣೇಶಪೂಜಾ, ಪುಣ್ಯಾಹ, ಗಣಹವನ, ಪವಮಾನಹೋಮ, ಅಧಿವಾಸ ಪೂಜೆ, ಮತ್ತು ಹೋಮ ಲಘು ವಿಷ್ಣುಯಾಗ, ತತ್ವಕಲಾ ಹವನ, ರಾತ್ರಿ ಬಲಿದಾನೋತ್ಸವ, ಅಲಂಕಾರ ಪೂಜೆ ಇತ್ಯಾದಿ ಜರುಗಲಿವೆ.
ಫೆ.29ರಂದು ಬೆಳಿಗ್ಗೆ 6.00 ಘಂಟೆಗೆ ಶ್ರೀ ದೇವರಿಗೆ ಫಲ ಪಂಚಾಮೃತ ಅಭಿಷೇಕ ಸುಹಾಸಿನಿಯರಿಂದ ಕುಂಕುಮಾರ್ಚನೆ, ಗಣೇಶ ಪೂಜಾ, ಪುಣ್ಯಾಹ ಅಧಿವಾಸ ಪೂಜೆ ಮತ್ತು ಹೋಮ ರಥ ಶುದ್ಧಿ ಸಂಸ್ಕಾರಹವನ, ಮಹಾಪೂಜೆ, ದಂಡಬಲಿ ನಡೆಯಲಿವೆ. ಮಧ್ಯಾಹ್ನ 12.30ಕ್ಕೆ ಶ್ರೀ ದೇವರ ರಥಾರೋಹಣ, ರಥಕಾಣಿಕೆ, ಅನ್ನಸಂತಸರ್ಪಣೆ, ಸಂಜೆ ರಥೋತ್ಸವ, ಮೃಗಯಾತ್ರೆ ಸಂವಾದ ಪೂಜೆ ಇತ್ಯಾದಿ ಜರುಗಲಿವೆ. ರಾತ್ರಿ 7.30ಕ್ಕೆ ಮೃಗಬೇಟೆ ಪ್ರಯುಕ್ತ ಅಷ್ಠಾವಧಾನ ಸೇವೆ ಮತ್ತು ಸಿಡಿಮದ್ದು ಪ್ರದರ್ಶನ ಇಟ್ಟುಕೊಳ್ಳಲಾಗಿದೆ.
ಮಾ.1ರಂದು ಶ್ರೀ ಗಣೇಶ ಪೂಜೆ, ಪುಣ್ಯಾಹ, ಅಧಿವಾಸ ಪೂಜೆ ಹೋಮ, ವಸಂತಪೂಜೆ, ಅವಧೃತ ಸ್ನಾನ ಧ್ವಜಾವರೋಹಣ, ಮಹಾಪುರ್ಣಾಹುತಿ, ಕುಂಬಾಭಿಷೇಕ, ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಇತ್ಯಾದಿ ಹಮ್ಮಿಕೊಳ್ಳಲಾಗಿದೆ. ಅಂದು ರಾತ್ರಿ 10ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸುಧಾಕರ ಪಾಂಡುರಂಗ ಶೇಟ್ ತಿಳಿಸಿದ್ದಾರೆ.