ಭಟ್ಕಳ (Bhatkal) : ಗಂಡನಿಂದಲೇ ಹಲ್ಲೆಗೊಳಗಾದ ತಾಲೂಕಿನ ಬೈಲೂರು ಗ್ರಾಮದ ಮಹಿಳೆಯೋರ್ವಳು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ. ಈ ಕುರಿತು ಮುರ್ಡೇಶ್ವರ (Murdeshwar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೈಲೂರು ಗ್ರಾಮದ ಮಾರ್ಕಂಡೇಶ್ವರದ ನಿವಾಸಿ ಮುಕ್ತಾ ದಿನೇಶ ನಾಯ್ಕ (೩೮) ಹಲ್ಲೆಗೊಳಗಾದವರು. ಇವರಿಗೆ ೧೫ ವರ್ಷಗಳ ಹಿಂದೆ ಮಾರ್ಕಂಡೇಶ್ವರದ ದಿನೇಶ ವಿಷ್ಣು ನಾಯ್ಕ (೪೧) ಜೊತೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮದುವೆ ಆದಾಗಿನಿಂದ ಗಂಡ ಸಾರಾಯಿ ಕುಡಿದು ಬಂದು ವಿನಾಕಾರಣ ಸಣ್ಣಪುಟ್ಟ ವಿಷಯಕ್ಕೆ ಜಗಳ ಮಾಡಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ಪತ್ನಿ ಮುಕ್ತಾ ದೂರಿನಲ್ಲಿ (complaint) ತಿಳಿಸಿದ್ದಾರೆ.
ಇದನ್ನೂ ಓದಿ : ಕಾರವಾರದಿಂದ ಬೆಂಗಳೂರಿಗೆ ವಿಶೇಷ ರೈಲು
ಅ.೨೮ರಂದು ಬೆಳಿಗ್ಗೆ ೧೧ರ ಸುಮಾರಿಗೆ ಮುಕ್ತಾ ನಾಯ್ಕ ಬ್ಯಾಂಕ್ ಕೆಲಸಕ್ಕೆ ಬೈಲೂರು ರಸ್ತೆಯ ಮುಖಾಂತರ ರಾಷ್ಟ್ರೀಯ ಹೆದ್ದಾರಿ (National Highway) ಕಡೆಗೆ ಹೋಗುತ್ತಿದ್ದಾಗ ಒಮ್ಮೇಲೆ ಗಂಡನಿಂದ ಹಲ್ಲೆಗೊಳಗಾಗಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದ ಆರೋಪಿ, ತಲೆ, ಬೆನ್ನಿಗೆ ಹೊಡೆದಿದ್ದಾನೆ. ಪತ್ನಿ ದೊಡ್ಡದಾಗಿ ಬೊಬ್ಬೆ ಹಾಕಿದಾಗ ಶ್ರೀಧರ ಹರಿಕಂತ್ರ ಎಂಬುವವರು ತಪ್ಪಿಸಿದ್ದಾರೆ. ಆಗ ಆರೋಪಿ ಗಂಡ ದಿನೇಶ, ಮನೆಗೆ ಹೋಗದಿದ್ದಲ್ಲಿ ಸಾಯಿಸಿ ಬಿಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ಮುಕ್ತಾ ದೂರಿನಲ್ಲಿ ಆರೋಪಿಸಿದ್ದಾರೆ. ಮುರ್ಡೇಶ್ವರ (Murdeshwar) ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಅಕ್ಟೋಬರ್ ೨೯ರಂದು ವಿವಿಧೆಡೆ ಅಡಿಕೆ ಧಾರಣೆ