ಭಟ್ಕಳ (Bhatkal) : ಇಲ್ಲಿನ ಅಂಜುಮನ್ (Anjuman) ಹಾಮೀ-ಎ-ಮುಸ್ಲಿಮೀನ್ ಸಂಸ್ಥೆಯ ವತಿಯಿಂದ ಆಯೋಜಿಸಲಾದ “ಕ್ರಿಯೇಟಿಂಗ್ ಎ ಪಾಸಿಟಿವ್ ಕ್ಲಾಸ್ ರೂಂ” ಎಂಬ ಅರ್ಧ ದಿನದ ಶಿಕ್ಷಕರ ತರಬೇತಿ (Teacher training) ಕಾರ್ಯಾಗಾರವು ಎಐಟಿಎಂ (AITM) ಸೆಮಿನಾರ್ ಸಭಾಂಗಣದಲ್ಲಿ ನಡೆಯಿತು. ಮಂಗಳೂರಿನ ಡಾ.ಅನಂತ ಪ್ರಭು ನೇತೃತ್ವದಲ್ಲಿ ನಡೆದ ಈ ಕಾರ್ಯಾಗಾರವು ತರಗತಿ ನಿರ್ವಹಣೆ, ಸಂವಹನ ಕೌಶಲ್ಯ, ತಂತ್ರಜ್ಞಾನ ಏಕೀಕರಣ, ಮೌಲ್ಯಮಾಪನದಂತಹ ವಿಷಯಗಳನ್ನು ಒಳಗೊಂಡ ಆಧುನಿಕ ಬೋಧನಾ ವಿಧಾನಗಳೊಂದಿಗೆ ಶಿಕ್ಷಕರನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿತ್ತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ವಿವಿಧ ಅಂಜುಮನ್ ಪ್ರೌಢಶಾಲೆಗಳ ಸುಮಾರು ೬೦ ಶಿಕ್ಷಕರು ಶಿಕ್ಷಕರ ತರಬೇತಿ (Teacher training) ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವು ಹಿರಿಯ ಪ್ರಾಧ್ಯಾಪಕ ಮುಷ್ತಾಕ್ ಬಾವಿಕಟ್ಟೆಯವರ ಸ್ವಾಗತದೊಂದಿಗೆ ಪ್ರಾರಂಭವಾಯಿತು. ಅವರು ಕಾರ್ಯಾಗಾರದ ಉದ್ದೇಶಗಳನ್ನು ವಿವರಿಸಿದರು. ಡಾ.ಪ್ರಭು ಅವರನ್ನು ಅಫ್ತಾಬ್ ಹುಸೇನ್ ಕೋಲ ಪರಿಚಯಿಸಿದರು. ಕಾರ್ಯದರ್ಶಿ ಸಾದುಲ್ಲಾ ರುಕ್ನುದ್ದೀನ್ ಸ್ಮರಣಿಕೆ ನೀಡಿ ಗೌರವಿಸಿದರು.
ಇದನ್ನೂ ಓದಿ : Deepavali/ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಜೋರು