ಕುಮಟಾ (Kumta) : ಬೈಕ್‌ ಸವಾರ ಒಮ್ಮೇಲೆ ಬ್ರೇಕ್‌ ಹಾಕಿದ ಪರಿಣಾಮ (bike accident) ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಗಂಭೀರ ಗಾಯಗೊಂಡು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೊನ್ನಾವರ (Honnavar) ತಾಲೂಕಿನ ಹೊದಿಕೆ ಶಿರೂರ ಗ್ರಾಮದ ಪಾರ್ವತಿ ದತ್ತಾತ್ರೇಯ ನಾಯ್ಕ (೬೩) ಮೃತ ಮಹಿಳೆ. ಬೈಕ್‌ ಸವಾರ ಅತಿ ವೇಗ ಮತ್ತು ಅಜಾಗರೂಕತೆಯಿಂದ ಬೈಕ್‌ ಚಲಾಯಿಸಿಕೊಂಡು ಬಂದ ಪರಿಣಾಮ ಅಪಘಾತ (bike accident) ಸಂಭವಿಸಿದೆ ಎಂದು ದೂರಲಾಗಿದೆ. ಅ.೨೬ರಂದು ಸಂಜೆ ೪ರ ಸುಮಾರಿಗೆ ಊರಕೇರಿ ಕಡೆಯಿಂದ ಕುಮಟಾ ಕಡೆಗೆ ಹೋಗುತ್ತಿರುವಾಗ ಕುಮಟಾ ನಾಮಧಾರಿ ಕಲ್ಯಾಣ ಮಂಟಪ ಸಮೀಪ ಒಮ್ಮೇಲೆ ಬ್ರೇಕ್‌ ಹಾಕಲಾಗಿತ್ತು.

ಇದನ್ನೂ ಓದಿ : ಶಿಕ್ಷಕರ ತರಬೇತಿ ಕಾರ್ಯಾಗಾರ ಯಶಸ್ವಿ

ಇದರಿಂದ ಹಿಂಬದಿಯಲ್ಲಿ ಕುಳಿತಿದ್ದ ಪಾರ್ವತಿ ನಾಯ್ಕ ರಸ್ತೆಯ ಮೇಲೆ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನು ಕುಮಟಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತುರ್ತು ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ (Mangaluru) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ, ಅ.೩೦ರಂದು ರಾತ್ರಿ ೧೧.೨೭ಕ್ಕೆ ಮೃತಪಟ್ಟಿದ್ದಾರೆ. ಹೊದಿಕೆ ಶಿರೂರಿನ ಬೈಕ್‌ ಸವಾರ ಮಂಜುನಾಥ ಸುಬ್ರಾಯ ನಾಯ್ಕ (೪೨) ವಿರುದ್ಧ ಕುಮಟಾ ಪೊಲೀಸ್‌ ಠಾಣೆಯಲ್ಲಿ ದೂರು (complaint) ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ಇದನ್ನೂ ಓದಿ :   ಅಕ್ಟೋಬರ್‌ ೩೦ರಂದು ವಿವಿಧೆಡೆ ಅಡಿಕೆ ಧಾರಣೆ