ಭಟ್ಕಳ (Bhatkal): ಪ್ರತಿಭಟನೆ ಹತ್ತಿಕ್ಕಿದ್ದನ್ನು ಪ್ರಶ್ನಿಸಿ ತಹಶೀಲ್ದಾರರ (Tahasildar) ವಿರುದ್ಧ ಕಾನೂನು ಮೊರೆ ಹೋಗಿದ್ದ ರಾಜ್ಯ ಮಾಹಿತಿ ಹಕ್ಕು (RTI) ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಗೆ ಜಯ ಸಿಕ್ಕಿದೆ. ಶಾಂತಿಯುತ ಮತ್ತು ಕಾನೂನುಬದ್ಧ ಪ್ರತಿಭಟನೆಗೆ ಹೈಕೋರ್ಟ್‌ (High Court) ಅಸ್ತು ಎಂದಿದೆ. ಇದರಿಂದ ವೇದಿಕೆಯ ಪ್ರತಿಭಟನೆ ಹಕ್ಕಿಕ್ಕಲು ಹೋಗಿದ್ದ ತಹಶೀಲ್ದಾರರಿಗೆ ಮುಖಭಂಗವಾದಂತಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಒಂದೇ ಕಡೆ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ವರ್ಗಾವಣೆಗಾಗಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಕಳೆದ ತಿಂಗಳು ಪ್ರತಿಭಟನೆ ನಡೆಸಿತ್ತು. ಹಳೇ ತಹಶೀಲ್ದಾರ ಕಚೇರಿ ಎದುರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಪ್ರತಿಭಟನಾಕಾರರನ್ನು ತಹಶೀಲ್ದಾರರ ಆದೇಶದ ಮೇರೆಗೆ ನಗರ ಠಾಣೆಯ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದರು.

ಇದನ್ನೂ ಓದಿ : ಬೈಕ್‌ ಅಪಘಾತದಲ್ಲಿ ಮಹಿಳೆ ಸಾವು

ಈ‌ ಪ್ರತಿಭಟನೆಗೂ ಪೂರ್ವದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಪ್ರತಿಭಟನೆಗೆ ಅವಕಾಶ ಕೋರಿ‌ ಮನವಿ ನೀಡಿತ್ತು. ಇದಕ್ಕೆ ಪ್ರತಿಭಟನೆಯ ಜಾಗವನ್ನು ಹಳೆ‌ ತಹಸೀಲ್ದಾರ ಕಚೇರಿ ಬಳಿಯಲ್ಲಿ‌ ಜಿಲ್ಲಾಧಿಕಾರಿಗಳು ನಿಗದಿ ಪಡಿಸಿದ್ದಾರೆಂದು ಸೂಚಿಸಿ ಧರಣಿಗೆಗೆ ಒಪ್ಪಿಗೆ ಸೂಚಿಸಲಾಗಿತ್ತು. ಆದರೆ ಧರಣಿಗೆ ಅವಕಾಶ ನೀಡಿ ಪರವಾನಿಗೆ ನೀಡಿದ ತಹಸೀಲ್ದಾರರು ಎರಡನೇ ದಿನದಂದು ಸ್ಥಳಕ್ಕೆ ತೆರಳಿ ನೋಟೀಸ್‌ ನೀಡಿತ್ತು.

ಇದನ್ನೂ ಓದಿ :   ಶಿಕ್ಷಕರ ತರಬೇತಿ ಕಾರ್ಯಾಗಾರ ಯಶಸ್ವಿ

ಧರಣಿಗೆ ಅನುಮತಿ ನೀಡಿರುವುದನ್ನು ರದ್ದು ಪಡಿಸಿತ್ತು. ಧರಣಿ ನಡೆಸುತ್ತಿರುವ ಸ್ಥಳವು ತಾಲೂಕಿನ ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವವಿರುವುದರಿಂದ ಧರಣಿ ತೆರವುಗೊಳಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರರು ಪೊಲೀಸರಿಗೆ ಪತ್ರ ಬರೆದಿದ್ದರು. ಆದರೆ, ಸಹಾಯಕ ಆಯುಕ್ತರು, ತಹಶೀಲ್ದಾರರು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಕೈಬಿಡಲು ಹೇಳಿದರು ಕಾರ್ಯಕರ್ತರು ಒಪ್ಪಿರಲಿಲ್ಲ. ಇದರಿಂದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡಿದ್ದರು.

ಇದನ್ನೂ ಓದಿ :   ಅಕ್ಟೋಬರ್‌ ೩೦ರಂದು ವಿವಿಧೆಡೆ ಅಡಿಕೆ ಧಾರಣೆ

ತಹಶೀಲ್ದಾರ ಕ್ರಮ ವಿರುದ್ಧ ಹೈಕೋರ್ಟ್‌ ಮೊರೆ :  ಮತೀಯ ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆ ಪ್ರತಿಭಟನೆಗೆ ಅವಕಾಶ ಇಲ್ಲವೆಂದು ಹಿಂಬರಹ ನೀಡಿದ ತಹಸೀಲ್ದಾರ ಕಚೇರಿಯ ಪತ್ರವನ್ನು ಪ್ರಶ್ನಿಸಿ ವೇದಿಕೆ ಕಾರ್ಯಕರ್ತರು ಹೈಕೋರ್ಟ್‌ (High Court) ಮೊರೆ ಹೋಗಿದ್ದರು.  ಈ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್ “ಕಾನೂನು ಬದ್ಧ ಪ್ರತಿಭಟನೆಗೆ ಅವಕಾಶ ನೀಡುವಂತೆ” ಆದೇಶ ನೀಡಿದೆ. ಇದು ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಅವರ ಹೋರಾಟಕ್ಕೆ ಸಿಕ್ಕ ಮೊದಲ ಜಯವಾಗಿದೆ.

ಇದನ್ನೂ ಓದಿ : Deepavali Special/ ಕಾರವಾರದಿಂದ ಬೆಂಗಳೂರಿಗೆ ವಿಶೇಷ ರೈಲು

ಇದಕ್ಕೆ ಪ್ರತಿಕ್ರಿಯಿಸಿರುವ ವೇದಿಕೆ ಜಿಲ್ಲಾಧ್ಯಕ್ಷ ಶಂಕರ ನಾಯ್ಕ, ಹೈಕೋರ್ಟ್ ನಮಗೆ ನೀಡಿದ ಈ ಅವಕಾಶವನ್ನು ಸೂಕ್ತ ರೀತಿಯಲ್ಲಿ ಕಾನೂನು ಬದ್ದವಾಗಿ ಬಳಸಿಕೊಳ್ಳಲಿದ್ದೇವೆ. ಕೆಲವೇ ದಿನಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡುವಂತೆ ಮತ್ತೆ ಭಟ್ಕಳದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ನಮ್ಮ ಹೋರಾಟಕ್ಕೆ ನ್ಯಾಯ ಸಿಗುವ ತನಕ ಧರಣಿ ಮುಂದುವರೆಸಲಿದ್ದೇವೆ. ನ.೧೪ರಿಂದ ಪ್ರತಿಭಟನೆ ನಡೆಸಲು ಯೋಜಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಗಂಡನಿಂದ ಹಲ್ಲೆಗೊಳಗಾದ ಮಹಿಳೆ ಆಸ್ಪತ್ರೆಗೆ ದಾಖಲು