ಭಟ್ಕಳ (Bhatkal) : ಪಾದಚಾರಿಗೆ ಆಟೋ ರಿಕ್ಷಾವೊಂದು (Auto Rikshaw) ಡಿಕ್ಕಿ ಹೊಡೆದು (Pedestrian hit) ಗಾಯಪಡಿಸಿದ ಘಟನೆ ಮುರ್ಡೇಶ್ವರದಲ್ಲಿ (Murdeshwar) ಇಂದು ನ.೨ರಂದು ನಸುಕಿನ ಜಾವ ೨.೪೫ರ ಸುಮಾರಿಗೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉಡುಪಿ (Udupi) ಜಿಲ್ಲೆಯ ಬೈಂದೂರಿನ (Bynd00r) ಕಿರಿಮಂಜೇಶ್ವರ ನಿವಾಸಿ ಸಾದಿಕ್‌ ಹಸನ್‌ (೩೧) ಗಾಯಗೊಂಡವರು. ಇವರು ನಿನ್ನೆ ನ.೧ರಂದು ರಾತ್ರಿ ಮಡಗಾಂವದಿಂದ (Madgaon) ನೇತ್ರಾವತಿ ಎಕ್ಸ್‌ಪ್ರೆಸ್‌ (Netravati express) ರೈಲಿನಲ್ಲಿ ಹೊರಟಿದ್ದರು. ರೈಲು ತುಂಬಾ ರಷ್‌ ಇದ್ದುದರಿಂದ ಮುರ್ಡೇಶ್ವರದ (Murudeshwar) ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದರು. ಬಸ್ಸಿನಲ್ಲಿ ಪ್ರಯಾಣ ಮಾಡಲು ಮುರ್ಡೇಶ್ವರ ರೈಲ್ವೆ ನಿಲ್ದಾಣದಿಂದ ನಾಕಾ ಕಡೆ ನಡೆದುಕೊಂಡು ಹೊರಟಿದ್ದರು. ರಾಷ್ಟ್ರೀಯ ಹೆದ್ದಾರಿ (National highway) -೬೬ ಪಕ್ಕದ ಸರ್ವಿಸ್‌ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಆಟೋ ರಿಕ್ಷಾವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ (Pedestrian hit).

ಇದನ್ನೂ ಓದಿ :   ಬಸ್‌ ನಿಲ್ದಾಣ ಪಾರ್ಕಿಂಗ್‌ ಸ್ಥಳದಲ್ಲಿದ್ದ ಬೈಕ್‌ ಕಳವು

ಪಾದಚಾರಿ ಸಾದಿಕ್‌ ಹಸನ್‌ ಗಾಯಗೊಂಡು ಮುರ್ಡೇಶ್ವರದ ಆರ್‌.ಎನ್‌.ಎಸ್‌. (RNS) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆಟೋ ರಿಕ್ಷಾ ಚಾಲಕ, ಮುರ್ಡೇಶ್ವರದ ತೆರ್ನಮಕ್ಕಿ ಜನತಾ ಕಾಲೋನಿ ನಿವಾಸಿ ರಾಮಕೃಷ್ಣ ಮಂಜುನಾಥ ನಾಯ್ಕ (೩೯) ವಿರುದ್ಧ ಮುರ್ಡೇಶ್ವರ ಪೊಲೀಸ್‌ ಠಾಣೆಯಲ್ಲಿ ಗಾಯಾಳು ಸಾದಿಕ್‌ ದೂರು (Complaint) ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ (case registered) ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ :  ಪರದಾಡಿದ ಕೊಂಕಣ ರೈಲ್ವೆ ಪ್ರಯಾಣಿಕರು