ಶಿರಸಿ (Sirsi) : ಬೈಕ್ ಟಯರ್ ಪಂಕ್ಚರ್ (Tyre puncture) ಆದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿದ ಪರಿಣಾಮ ಹಿಂಬದಿ ಸವಾರ ಗಂಭೀರ ಗಾಯಗೊಂಡು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶಿರಸಿ ತಾಲೂಕಿನ ಬಿಳೂರು ವಾಸಿ ಸೂರ್ಯಕಾಂತ ಮಹಾಬಲೇಶ್ವರ ನಾಯ್ಕ (೫೪) ಮೃತ ದುರ್ದೈವಿ. ಬೈಕ್ ಸವಾರ ಬಿಳೂರಿನವರಾದ ಜಯಾನಂದ ರುದ್ರಪ್ಪ ನಾಯ್ಕ (೪೫) ವಿರುದ್ಧ ದೂರು ದಾಖಲಾಗಿದೆ. ಮಳಗಿಯಿಂದ ಬಿಸಲಕೊಪ್ಪ ಕಡೆಗೆ ಬರುತ್ತಿರುವಾಗ ಶಿರಸಿ – ಹುಬ್ಬಳ್ಳಿ (Hubballi) ರಸ್ತೆಯಲ್ಲಿ ಅಪಘಾತ ನಡೆದಿದೆ. ಬೈಕ್ನ ಮುಂದಿನ ಟಯರ್ ಪಂಕ್ಚರ್ (Tyre puncture) ಆದ ಪರಿಣಾಮ ಬೈಕ್ ಸಮೇತ ಸವಾರರು ರಸ್ತೆ ಮೇಲೆ ಬಿದ್ದಿದ್ದಾರೆ. ಅ.೨೭ರಂದು ಸಂಜೆ ೬.೩೦ರ ಸುಮಾರಿಗೆ ಈ ಘಟನೆ ನಡೆದಿದೆ.
ಇದನ್ನೂ ಓದಿ : ಮೀನು ಹಿಡಿಯಲು ಹೋದವ ಸಮುದ್ರ ಪಾಲು
ಹಿಂಬದಿ ಸವಾರ ಸೂರ್ಯಕಾಂತ ಅವರ ತಲೆಯ ಹಿಂಬದಿಗೆ ಪೆಟ್ಟಾಗಿದ್ದ ಪರಿಣಾಮ ಕಾರವಾರ (Karwar) ಕಿಮ್ಸ್ (KIMS)ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ (Mangaluru) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ನ.೧ರಂದು ಗಾಯಾಳು ಸೂರ್ಯಕಾಂತ ಕೊನೆಯುಸಿರು ಎಳೆದಿದ್ದಾರೆ. ಮೃತರ ಪುತ್ರ ಪ್ರವೀಣ ಸೂರ್ಯಕಾಂತ ನಾಯ್ಕ (೧೯) ಬನವಾಸಿ (Banavasi) ಪೊಲೀಸ್ ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (Case Registered) ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಪಟಾಕಿ ವಿರೋಧಿಸಿದ ವೃದ್ಧನನ್ನು ಹೊಡೆದು ಕೊಂದ ದುಷ್ಕರ್ಮಿಗಳು !