ಭಟ್ಕಳ (Bhatkal): ರಾಜ್ಯದ ರೈತರ ಹಾಗೂ ಜನಸಾಮಾನ್ಯರ ಜಮೀನನ್ನು ವಕ್ಫ್ (Waqf board) ಮೂಲಕ ಸರ್ಕಾರ ಕಬಳಿಸುತ್ತಿರುವುದನ್ನು ಖಂಡಿಸಿ ನಾಳೆ ಸೋಮವಾರ ನ.೪ರಂದು ಪ್ರತಿಭಟನೆ ನಡೆಸಲಾಗುವುದು. ಬೆಳಿಗ್ಗೆ ೧೧ ಗಂಟೆಗೆ ತಹಶೀಲ್ದಾರ್ ಕಚೇರಿ ಎದುರು ಬಿಜೆಪಿ (BJP) ಭಟ್ಕಳ ಮಂಡಳ, ನಾಗರಿಕರು, ರೈತ ಮಿತ್ರರು, ದೇವಾಲಯಗಳ ಪ್ರಮುಖರು ಸೇರಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ತಿಳಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಇಲ್ಲಿನ ಮಣ್ಕುಳಿಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಲ್ಪಸಂಖ್ಯಾತರ ಸಚಿವ (Minority minister) ಜಮೀರ್ ಅಹಮ್ಮದ್ (Zameer Ahmed) ಹಾಗೂ ಕಾಂಗ್ರೆಸ್ಸಿನವರು (Congress) ಷರಿಯಾ ಕಾನೂನು ಅಡಿಯಲ್ಲಿ ನಮಗೆ ಬೋಧನೆ ಮಾಡಿದರೆ ನಾವು ದೇಶದ ಸಂವಿಧಾನದ ಕಾನೂನಿನ ಪಾಠ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ನಗರ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ಘೋಷಣೆ
ನಾಳೆಯಿಂದಲೇ ಜಿಲ್ಲೆಯ (Uttara Kannada) ಹಾಗೂ ತಾಲೂಕಿನ ರೈತರು ತಮ್ಮ ಜಮೀನಿನ ಪಹಣಿ ಪರೀಕ್ಷಿಸಿಕೊಳ್ಳಬೇಕು. ವಕ್ಫ್ ಬೋರ್ಡ ಹೆಸರಿದೆಯಾ ಎಂದು ಪರೀಕ್ಷಿಸಿಕೊಳ್ಳಿ. ರಾಜ್ಯದಲ್ಲಿ ರೈತರ ಸಾವಿರಾರು ಎಕರೆ ಜಮೀನಿನಲ್ಲಿ ವಕ್ಸ್ ಬೋರ್ಡ್ ಆಸ್ತಿ ಎಂದು ನಮೂದಿಸುವ ಮೂಲಕ ರೈತರ ಅನ್ನಕ್ಕೆ ಕೊಳ್ಳಿ ಇಡುತ್ತಿರುವ ಸರಕಾರದ ನಡೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇಲ್ಲವಾದಲ್ಲಿ ಮುಂದೊಂದು ದಿನ ಹಿಂದೂಗಳ ದೇವಾಲಯಗಳು ಕೂಡಾ ವಕ್ಸ್ ಆಸ್ತಿ ಎಂದು ನಮೂದಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದರು.
ಇದನ್ನೂ ಓದಿ : ಕಾರು ಚಲಾಯಿಸುತ್ತಿರುವಾಗಲೇ ಅಸ್ವಸ್ಥರಾಗಿ ಸಾವು
ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಪ್ರಕರಣದ ತನಿಖೆಗೆ ಭಾರತೀಯ ಜನತಾ ಪಾರ್ಟಿಯ ಸಂಸದ ಗೋವಿಂದ ಕಾರಜೋಳ (Govind Karjol) ನೇತೃತ್ವದಲ್ಲಿ ೫ ಜನರ ತಂಡ ನೇಮಕ ಮಾಡಲಾಗಿತ್ತು. ತಂಡದಿಂದ ಪರಿಶೀಲನೆ ಮಾಡಿದಾಗ ಜಿಲ್ಲಾಧಿಕಾರಿ ಸ್ಪಷ್ಟವಾಗಿ ಉಲ್ಲೇಖ ಮಾಡಿದಂತೆ, ಸಚಿವರಾದ ಜಮೀರ್ ಅಹಮದ್ ಏನು ಹೇಳಿದ್ದಾರೋ ಅದರ ಅನುಗುಣವಾಗಿ ನಾವು ನಡೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ (Siddaramaiah) ಅವರ ಅವಧಿಯಲ್ಲಿ ಈ ಬಾರಿ ಒಂದಾದರೊಂದರಂತೆ ಹಗರಣ ನಡೆಯುತ್ತ ಬಂದಿದೆ ಎಂದರು.
ಇದನ್ನೂ ಓದಿ : ನೇಣು ಬಿಗಿದು ಸಾವಿಗೆ ಶರಣಾದ ಯುವಕ
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಡಿಗ ಮಾತನಾಡಿ, ವಕ್ಖ ಬೋರ್ಡ್ ಅನ್ನು ಕಾಂಗ್ರೆಸ್ ಹಾಗೂ ಜವಾಹರಲಾಲ್ ನೆಹರು (Jawaharlal Nehru) ಹುಟ್ಟು ಹಾಕಿದ ಪಾಪದ ಕೂಸು. ಪ್ರಪಂಚದ ಯಾವುದೇ ದೇಶದಲ್ಲಾಗಲಿ ಮತ್ತು ಮುಸ್ಲಿಂ ರಾಷ್ಟ್ರಗಳಲ್ಲಿ ಕೂಡ ವಕ್ಫ್ ಬೋರ್ಡ (Waqf board) ಎನ್ನುವುದು ಇಲ್ಲ. ೧೯೪೭ರಲ್ಲಿ ದೇಶ ವಿಭಜನೆಯಾದ ಬಳಿಕ ಪಾಕಿಸ್ತಾನದಿಂದ (Pakistan) ಎಷ್ಟೋ ಹಿಂದುಗಳು ಭಾರತಕ್ಕೆ ಬಂದರು. ಭಾರತದಿಂದ ಎಷ್ಟೋ ಮುಸ್ಲಿಮರು ಪಾಕಿಸ್ತಾನಕ್ಕೆ ಹೋದರು. ಆ ವೇಳೆ ಇಲ್ಲಿಂದ ಬಿಟ್ಟು ಹೋದ ಮುಸ್ಲಿಮರ ಆಸ್ತಿಯನ್ನು ಇಲ್ಲಿನ ಸರ್ಕಾರ ಎನಿಮಿ ಆಸ್ತಿ ಎಂದು ಘೋಷಣೆ ಮಾಡಿದ್ದರು ಎಂದರು.
ಇದನ್ನೂ ಓದಿ : ಸಾವು ತಂದ ಬೈಕ್ ಟಯರ್ ಪಂಕ್ಚರ್ !
ಈ ಸಂದರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈಶ್ವರ ಎನ್. ನಾಯ್ಕ, ಜಿಲ್ಲಾ ಕಾನೂನು ಪ್ರಕೋಷ್ಠದ ಸಂಚಾಲಕ ಸುರೇಶ ನಾಯ್ಕ, ಜಿಲ್ಲಾ ಮೀನುಗಾರಿಕಾ ಪ್ರಕೋಷ್ಠದ ಸಂಚಾಲಕ ಭಾಸ್ಕರ ದೈಮನೆ, ಜಿಲ್ಲಾ ಪಂ.ರಾಜ್ ಪ್ರಕೋಷ್ಠದ ಸಹಸಂಚಾಲಕ ಮೋಹನ ನಾಯ್ಕ, ಮಂಡಳದ ಪ್ರ. ಕಾರ್ಯದರ್ಶಿ ಶ್ರೀಧರ ನಾಯ್ಕ, ಉಪಾಧ್ಯಕ್ಷ ಮಂಜಪ್ಪ ನಾಯ್ಕ, ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಉಪಸ್ಥಿತರಿದ್ದರು.
ಇದನ್ನೂ ಓದಿ : ಮೀನು ಹಿಡಿಯಲು ಹೋದವ ಸಮುದ್ರ ಪಾಲು