ಬೆಳಗಾವಿ (Belagavi) : ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ (Rudranna) ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಾಟ್ಸಪ್ (Whatsapp) ಗ್ರೂಪ್‌ಲ್ಲಿ ಸಂದೇಶ ರವಾನಿಸಿದ್ದು, ಸಾವಿನ ಬಗ್ಗೆ ಹಲವು ಶಂಕೆ ವ್ಯಕ್ತವಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೆಳಗಾವಿ ತಹಶೀಲ್ದಾರ ಸ್ಟಾಪ್ ವಾಟ್ಸಪ್ (Whatsapp) ಗ್ರೂಪಲ್ಲಿ ರುದ್ರಣ್ಣ ನಿನ್ನೆ ಸಂಜೆ ೭.೩೧ಕ್ಕೆ ಸಂದೇಶ ರವಾನೆ ಮಾಡಿದ್ದರು. ನಾನು ಆತ್ಮಹತ್ಯೆಗೆ ಶರಣಾಗುವುದಾಗಿ ಗ್ರೂಪ್‌ನಲ್ಲಿ ಮೆಸೇಜ್ ಮಾಡಿದ್ದರು. ನನ್ನ ಸಾವಿಗೆ ತಹಶೀಲ್ದಾರ ಬಸವರಾಜ ನಾಗರಾಳ ಹಾಗೂ ಸೋಮು ಅವರೇ ಕಾರಣ ಎಂದು ಮೆಸೇಜ್‌ ಮಾಡಿದ್ದಾರೆ. Ashok Kabbaliger also ಎಂದೂ ಮೆಸೇಜ್‌ ಮಾಡಿದ್ದಾರೆ.  ನಮ್ಮ ತಹಶೀಲ್ದಾರ ಕಚೇರಿಯಲ್ಲಿ ‌ತುಂಬಾ ಅನ್ಯಾಯ ನಡೆಯುತ್ತಿದೆ.  ಎಲ್ಲರೂ ಒಟ್ಟಾಗಿ ಹೋರಾಡಿ ಎಂದು ಮೆಸೇಜ್ ಮೂಲಕ‌ ರುದ್ರಣ್ಣ ಮನವಿ ಮಾಡಿದ್ದಾರೆ.ಇದರ ಬೆನ್ನಲ್ಲೇ ತಹಶೀಲ್ದಾರ  ಸೋಮು ದೊಡವಾಡ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಆಪ್ತ ಕಾರ್ಯದರ್ಶಿಯಾಗಿದ್ದಾರೆ.

ಇದನ್ನೂ ಓದಿ :  ತಹಶೀಲ್ದಾರ ಕಚೇರಿಯಲ್ಲಿ ಎಫ್‌ಡಿಸಿ ಆತ್ಮಹತ್ಯೆಗೆ ಶರಣು

ಪ್ರಕರಣದ ಬಗ್ಗೆ ಡಿಸಿಪಿ (DCP) ರೋಹನ ಜಗದೀಶ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ನಮಗೆ ತಹಶೀಲ್ದಾರರ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಬೆಳಿಗ್ಗೆ ಮಾಹಿತಿ ಬಂತು. ೩೫ ವರ್ಷದ ರುದ್ರಣ್ಣ ಎಂಬುವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೇಲ್‌ ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪಿಐ ಸೇರಿ ನಾನು ಭೇಟಿ ನೀಡಿದ್ದೇವೆ. ಈವರೆಗೂ ಯಾವುದೇ ಡೆತ್‌ ನೋಟ್ ಇರುವ ಬಗ್ಗೆ ಮಾಹಿತಿ ಇಲ್ಲ. ಈಗ ಏನು ನಮಗೆ ಮಾಹಿತಿ‌ ಇಲ್ಲ, ಸಿಸಿ ಕ್ಯಾಮೆರಾ (CC Camera) ಚೆಕ್ ಮಾಡುತ್ತೇವೆ. ಸಿಸಿ ಕ್ಯಾಮೆರಾದಲ್ಲಿ ಏನೇನು ರಿಕಾರ್ಡ ಆಗಿದೆ ಅನೋದನ್ನ ಪರಿಶೀಲನೆ ಮಾಡ್ತೀವಿ ಎಂದು ರೋಹನ ಜಗದೀಶ ಹೇಳಿದ್ದಾರೆ.

ಇದನ್ನೂ ಓದಿ : ಒಂದೇ ದಿನ ಎರಡು ಕಡೆ ಹೆಜ್ಜೇನು ದಾಳಿ