ಬೆಳಗಾವಿ (Belagavi) : ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಎಸ್‌ಡಿಸಿ (SDC) ಆಗಿದ್ದ ರುದ್ರಣ್ಣ (Rudranna) ದಿಢೀರ್‌ ವರ್ಗಾವಣೆಯಿಂದ (transfer) ಬೇಸತ್ತು ಆತ್ಮಹತ್ಯೆ ಮಾಡಿಕೊಂಡ್ರಾ ಎಂಬ ಪ್ರಶ್ನೆ ಎದ್ದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ದ್ವಿತೀಯ ದರ್ಜೆ ಗುಮಾಸ್ತರಾಗಿದ್ದ ರುದ್ರಣ್ಣರ‌ನ್ನು ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರಕ್ಕೆ (savadatti)  ಜಿಲ್ಲಾಡಳಿತ ವರ್ಗಾವಣೆ (Transfer) ಮಾಡಿತ್ತು. ವರ್ಗಾವಣೆಗೆ ತಡೆ ನೀಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ (Laxmi Hebbalkar) ಅವರ ಆಪ್ತ ಕಾರ್ಯದರ್ಶಿ ಸೋಮು ದೊಡವಾಡ ಅವರಿಗೆ ರುದ್ರಣ್ಣ ಮನವಿ ಮಾಡಿದ್ದರು ಎನ್ನಲಾಗಿದೆ. ವರ್ಗಾವಣೆ ತಡೆಗೆ ರುದ್ರಣ್ಣ ೨ ಲಕ್ಷ ರೂ. ಹಣವನ್ನು ನೀಡಿರುವುದು ಪ್ರಾಥಮಿಕ ಪೊಲೀಸರ ತನಿಖೆಯಿಂದ ಗೊತ್ತಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಆ ಹಣ ಪಡೆದವರು ಯಾರು? ಎಲ್ಲಿ ಪಡೆದಿದ್ದರು? ಎಂಬಿತ್ಯಾದಿ ಪ್ರಶ್ನೆಗಳ ಮೇಲೆ ಪೊಲೀಸರು ಉತ್ತರ ಹುಡುಕುತ್ತಿದ್ದಾರೆ.

ಇದನ್ನೂ ಓದಿ :  ಸಾವಿಗೆ ತಹಶೀಲ್ದಾರ, ಹೆಬ್ಬಾಳಕರ ಆಪ್ತ ಕಾರ್ಯದರ್ಶಿ ಕಾರಣರಾದ್ರಾ?

ರುದ್ರಣ್ಣ ಪತ್ನಿ ಗಿರಿಜಾ ಬೆಳಗಾವಿ ತಾಲೂಕಿನ ‌ಅನಗೋಳದಲ್ಲಿ ಗ್ರಾಮ ಲೆಕ್ಕಾಧಿಕಾರಿ (Village Accountant) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ವರ್ಗಾವಣೆ ಆದರೆ ಕೌಟುಂಬಿಕ ಸಮಸ್ಯೆ ಆಗಬಹುದೆಂದು ವರ್ಗಾವಣೆ ತಡೆಗೆ ಮನವಿ ಮಾಡಿದ್ದರು ಎನ್ನಲಾಗಿದೆ. ರುದ್ರಣ್ಣ ತಂದೆ ದುಂಡಪ್ಪ ‌ಕೂಡ ವಿಲೇಜ್ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸಿದ್ದರು. ದುಂಡಪ್ಪ ಅವರ ಅಕಾಲಿಕ‌ ನಿಧನದಿಂದ ಅನುಕಂಪದ ಆಧಾರದ ಮೇಲೆ ರುದ್ರಣ್ಣಗೆ ಸರ್ಕಾರಿ ನೌಕರಿ ಸಿಕ್ಕಿತ್ತು. ಕಳೆದ ೧೦ ವರ್ಷಗಳಿಂದ ತಹಶೀಲ್ದಾರ ‌ಕಚೇರಿಯಲ್ಲಿ ಎಸ್‌ಡಿಸಿ ಆಗಿ ರುದ್ರಣ್ಣ ಸೇವೆ ಸಲ್ಲಿಸುತ್ತಿದ್ದರು.

ಇದನ್ನೂ ಓದಿ : Belagavi/ ತಹಶೀಲ್ದಾರ ಕಚೇರಿಯಲ್ಲಿ ಎಸ್‌ಡಿಸಿ ಆತ್ಮಹತ್ಯೆಗೆ ಶರಣು