ಭಟ್ಕಳ : ನಗರದ ಮುಖ್ಯ ರಸ್ತೆೆಯ ಹೂವಿನ ಚೌಕನಲ್ಲಿರುವ ಹಮ್ದರ್ದ ಮೆಡಿಕಲ್ ಫಾರ್ಮನ ಶಟರ್ ಮುರಿದು ಒಳನುಗ್ಗಿದ ಕಳ್ಳನೊಬ್ಬ ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ವಿಡಿಯೋ ನೋಡಿ : https://fb.watch/qlKqRcONiP/?mibextid=Nif5oz
ಇದನ್ನೂ ಓದಿ : ನಾಗಮಾಸ್ತಿ ದೇವರ ಭವ್ಯ ಮೆರವಣಿಗೆ
ಮಂಗಳವಾರ ರಾತ್ರಿ 9 ಗಂಟೆಯಿಂದ ಬುಧವಾರ ಬೆಳಿಗ್ಗೆ 9 ಗಂಟೆಯ ನಡುವಿನ ಅವಧಿಯಲ್ಲಿ ನಗರದ ಮುಖ್ಯ ರಸ್ತೆಯ ಹೂವಿನ ಚೌಕನಲ್ಲಿರುವ ಔಷಧಿ ಅಂಗಡಿಯ ಶಟರನ್ನು ಯಾವುದೋ ವಸ್ತುವಿನಿಂದ ಮುರಿಯಲಾಗಿದೆ. ನಂತರ ಒಳಗೆ ನುಗ್ಗಿದ್ದ ಕಳ್ಳ ಕೌಂಟರನಲ್ಲಿ ಇಟ್ಟಿದ್ದ ಒಟ್ಟು 75 ಸಾವಿರ ರೂ. ಕಳ್ಳತನ ಮಾಡಿಕೊಂಡು ಹೋಗಿದ್ದಾನೆ. ಈ ಕಳ್ಳತನದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಕೊನೆಯಲ್ಲಿ ಸಿಸಿಟಿವಿ ಇರುವುದನ್ನು ಗಮನಿಸಿದ ಕಳ್ಳ ಸಿಸಿಟಿಯನ್ನು ಹಾನಿಗೊಳಿಸಿದ್ದಾನೆ.
ಸ್ಥಳಕ್ಕೆ ಬಂದ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಆಯಾಜ ಆಲಂ ಮೊಹಮ್ಮದ ಜಮೀಲ್ ಹಾಜಿಫಕ್ಕಿ ಭಟ್ಕಳ ನಗರ ಠಾಣೆಯಲ್ಲಿ ಸುಮಾರು 75 ಸಾವಿರ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ.