ಭಟ್ಕಳ (Bhatkal) : ತಾಲೂಕಿನ ಹೆಗ್ಗಲ ಮ್ಯಾಂಗೋ ಫಾರ್ಮ್ ಹತ್ತಿರದ ಮಹಿಳೆಯೋರ್ವಳು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾರೆ (missing).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅ.೪ರಂದು ಫಾಮಿದಾ (೩೩) ತನ್ನ ಮಕ್ಕಳಾದ ಫಾತಿಮಾ ಸಿಮ್ರಾ (೯), ಅಬ್ದುಲ್ ಸುಮೇರ (೭) ಇವರನ್ನು ಕರೆದುಕೊಂಡು ಎಲ್ಲಿಯೋ ಹೋಗಿ ಈವರೆಗೂ ಮನೆಗೆ ಮರಳಿ ಬಾರದೇ ಹೋಗಿ ಕಾಣೆಯಾಗಿದ್ದಾರೆ (missing). ಮಹಿಳೆಯು ಬಿಳಿ ವರ್ಣ, ದುಂಡನೆಯ ಮುಖ, ತೆಳ್ಳನೆಯ ಮೈಕಟ್ಟು, ೪.೯ ಅಡಿ ಎತ್ತರ ಇದ್ದಾರೆ. ಉರ್ದು ಮತ್ತು ಕನ್ನಡ ಭಾಷೆ ಮಾತನಾಡುತ್ತಾರೆ.
ಇದನ್ನೂ ಓದಿ : ನಾಳೆ ಮುರ್ಡೇಶ್ವರಕ್ಕೆ ಆರ್.ವಿ.ದೇಶಪಾಂಡೆ ಭೇಟಿ
ಮಗಳು ಫಾತಿಮಾ ಬಿಳಿ ವರ್ಣ, ಸಣ್ಣ ಮುಖ, ತೆಳ್ಳನೆಯ ಮೈಕಟ್ಟು, ೩ ಅಡಿ ಎತ್ತರ ಇದ್ದಾಳೆ. ಉರ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ಲೆಗ್ಗಿನ್ಸ್ ಟಾಪ್ ಧರಿಸಿರುತ್ತಾಳೆ. ಮಗ ಅಬ್ದುಲ್ ಸುಮೇರ ಬಿಳಿ ವರ್ಣ, ಸಣ್ಣ ಮುಖ, ತೆಳ್ಳನೆಯ ಮೈಕಟ್ಟು, ೨.೫ ಅಡಿ ಎತ್ತರ ಇದ್ದಾನೆ. ಉರ್ದು, ಕನ್ನಡ, ಭಾಷೆ ಮಾತನಾಡುತ್ತಾನೆ. ಜಿನ್ಸ್ ಟೀ ಶರ್ಟ್ ಧರಿಸಿರುತ್ತಾನೆ.
ಇದನ್ನೂ ಓದಿ : ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ
ಈ ಮಹಿಳೆಯ ಹಾಗೂ ಮಕ್ಕಳ ಬಗ್ಗೆ ಸಾರ್ವಜನಿಕರಿಗೆ ತಿಳಿದು ಬಂದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ೦೮೩೮೫-೨೨೭೩೩, ಪಿ.ಐ. ಮೊ.ನಂ: ೯೪೮೦೮೦೫೨೫೨ ಸಂಪರ್ಕಿಸಬಹುದು ಎಂದು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ನವೆಂಬರ್ ೫ರಂದು ವಿವಿಧೆಡೆ ಅಡಿಕೆ ಧಾರಣೆ