ADVT/ ಮುರುಡೇಶ್ವರದ ಹೆಲೆನ್ ಗೊಂಮ್ಸ್ ಅವರ ಶೇರ್ ಮಾರ್ಕೆಟ್ ಮೋಸದ ಆರೋಪ ಪ್ರಕರಣಕ್ಕೆ ಸ್ಪಷ್ಟನೆ

ಘಟನೆಯ ಹಿನ್ನಲೆ: ಸ್ನೇಹಿತರೆ ಹೆಲೆನ್ ಫ್ರಾನ್ಸಿಸ್ ಗೊಂಮ್ಸ್ ಮುರ್ಡೇಶ್ವರ ಮತ್ತು ಅವರ ಮಗಳು ನಿತ್ಯ ಫ್ರಾನ್ಸಿಸ್ ಗೊಂಮ್ಸ್ ಇವರು ಸುಳ್ಳು ದಾಖಲೆಗಳನ್ನು ಸ್ರಷ್ಟಿಸಿ ಮತ್ತು ವ್ಯವಸ್ಥಿತ ಪಿತೂರಿ ಮಾಡಿ ತಮಗೆ ಸಚಿನ್ ಮತ್ತು ಅವನ ಸ್ನೇಹಿತ ಗುರುರಾಜ್ ತಮ್ಮಿಂದ ಸುಮಾರು ರೂಪಾಯಿ 50,00,000 ವನ್ನು ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿ ಅಧಿಕ ಲಾಭ ಕೊಡಿಸುವುದಾಗಿ ಹೇಳಿ ಈಗ ಲಾಭ ಮತ್ತು ಮೂಲ ಬಂಡವಾಳ ಎರಡನ್ನೂ ವಾಪಸು ಕೊಡದೆ ಮೋಸ ಮಾಡಿದ್ದಾರೆ ಅಂತ ಆಧಾರರಹಿತ ಪ್ರಕರಣವನ್ನು ಕಾರವಾರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುತ್ತಾರೆ ಹಾಗೂ ಇದನ್ನ ನ್ಯೂಸ್ ಪೇಪರ್ ಮತ್ತು ವಾಟ್ಸಾಪ್ಪ್ ನಲ್ಲಿ ಸಚಿನ್ ಮತ್ತು ಗುರುರಾಜ್ ಅವರ ಫೋಟೋ ಸಹಿತ ಸಂದೇಶ ಹರಿದು ಬಿಟ್ಟಿದ್ದು ಸಾಮಾಜಿಕವಾಗಿ ಮಾನಹನಿ ಮಾಡುವ ದುಷ್ಟ ಹಾದಿಯನ್ನು ಹಿಡಿದಿದ್ದರು.

ಸ್ನೇಹಿತರೆ, ಈ ಕುರಿತಾದ ಸುಳ್ಳು ಮಾಹಿತಿ ಈಗಾಗಲೇ ನಿಮ್ಮೆಲ್ಲರ ವಾಟ್ಸಪ್ಪ್ ನಲ್ಲಿ ಫಾರ್ವರ್ಡ್ ಮಾಡಿದ್ದಾರೆ, ಇದನ್ನು ನೀವು ಬೇರೆಯವರಿಗೆ ಪ್ರಸಾರ ಮಾಡಬೇಡಿ.

ಈ ಕುರಿತು ಸಚಿನ್ ಕರ್ನಲ್ ಅವರು ಸ್ಪಷ್ಟತೆ ಕೊಟ್ಟಿದ್ದು ಪ್ರಕರಣಕ್ಕೂ ಮತ್ತು ನನ್ನ ಸ್ನೇಹಿತ ಗುರುರಾಜ್ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟನೇ ನೀಡಿದ್ದಾರೆ. ಹಾಗೂ ಸಚಿನ್ ಅವರು ನನಗೆ ವ್ಯಯಕ್ತಿಕವಾಗಿ ಹೆಲೆನ್ ಗೊಂಮ್ಸ್ ಮತ್ತು ನಿತ್ಯ ಗೊಂಮ್ಸ್ ಇವರಿಬ್ಬರದೂ ಪರಿಚಯ ಇಲ್ಲ ಮತ್ತು ನಾವು ಎಂದಿಗೂ ಇವರಿಗೆ ಕಾಲ್ ಮತ್ತು sms ಮೆಸೇಜ್ ಮುಖಾಂತರ ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆಮಾಡಿ ಎಂದು ಯಾವತ್ತೂ ಸಂಪರ್ಕಿಸಿಲ್ಲ ಎಂದೂ ಕ್ರೈಂಬ್ರಾಂಚ್ ಪೊಲೀಸರಿಗೆ ಮನವಿ ಮಾಹಿತಿ ಕೊಟ್ಟಿದ್ದಾರೆ.

ಹೆಲೆನ್ ಗೊಂಮ್ಸ್ ಅವರ ಮಗ ಸುನಿಲ್ ಗೊಂಮ್ಸ್ ಎನ್ನುವವನು ಇಸ್ರೇಲ್ ದೇಶದಲ್ಲಿ ಕೆಲಸ ಮಾಡಿಕೊಂಡಿದ್ದು ಹಾಗೂ ಅವನ ಜೊತೆ ಸಚಿನ್ ಅವರ ಸಂಬಂದಿಕರು ಕೂಡ ಅಲ್ಲೇ ಕೆಲಸಮಾಡಿಕೊಂಡಿದ್ದಾರೆ. ಸಚಿನ್ ಅವರು ಶೇರ್ ಮಾರ್ಕೆಟ್ನಲ್ಲಿ ತಕ್ಕಮಟ್ಟಿಗೆ ಉತ್ತಮ ಜ್ಞಾನಹೊಂದಿದ್ದು ಇವರು ಇಸ್ರೇಲ್ ದೇಶ ದಲ್ಲಿರುವ ಸಂಬಂಧಿಕರಿಗೆ ಶೇರ್ ಮಾರ್ಕೆಟ್ ಹೂಡಿಕೆಯಲ್ಲಿ ಉತ್ತಮ ಲಾಭಗಳಿಸಿ ಕೊಡಿಸಿದ್ದನ್ನು ಅರಿತ ಸುನಿಲ್ ಗೊಂಮ್ಸ್ ಎನ್ನುವತ ಸಚಿನ್ ಅವರ ಸಂಬಂದಿಕರ ಮೂಲಕ ಪರಿಚಯ ಮಾಡಿಸಿಕೊಂಡು ತನಗೂ ಒಳ್ಳೆಯ ಲಾಭ ಮಾಡಿಸಿಕೊಡು ನಾನು ಹೂಡಿಕೆ ಮಾಡಲು ಸಿದ್ದನಿರುವುದಾಗಿ ಕಾಲ್ ಮಾಡಿ ಬೇಡಿಕೊಂಡಿದ್ದ, ಆದರೆ ಸಚಿನ್ ಅವರು ಶೇರ್ ಮಾರ್ಕೆಟ್ ನಲ್ಲಿ ಲಾಭ ಗಳಿಸುವುದು ತುಂಬಾ ಕಷ್ಟ ಹಾಗೂ ಲಾಭ ನಷ್ಟ ಎರಡು ಸಂಭವಿಸುತ್ತದೆ ಎಂದು ಮನವರಿಕೆ ಮಾಡಿದ್ದರು. ಎಷ್ಟೇ ಸಮಾಜಯಿಸಿ ಹೇಳಿದ್ದರು ಹಠ ಬಿಡದ ಸುನಿಲ್ ಗೊಂಮ್ಸ್ ನಷ್ಟ ಆದರೆ ತಾನೇ ಭರಿಸುವ ಭರವಸೆ ಕೊಟ್ಟು ಸಚಿನ್ ಅವರ ಮನವಲಿಸಿ ನಂತರ ತನ್ನ ಮತ್ತು ತಾಯಿ ಹೆಲೆನ್ ಗೊಂಮ್ಸ್ ಹಾಗೂ ತಂಗಿಯ ಹೆಸರಿನಲ್ಲಿ ಸುಮಾರು ರೂಪಾಯಿ 50,00,000 ದ ಮೊತ್ತವನ್ನು ಚೆಕ್ ಮುಖಾಂತರ ಕೊಟ್ಟಿದ್ದನು. ಆ ಸಮಯದಲ್ಲಿ ಸಚಿನ್ ಅವರು ಚೆಕ್ ದೊಡ್ಡ ಮೊತ್ತದಾಗಿರುವುದರಿಂದ ಮತ್ತು ಅವರ ಬ್ಯಾಂಕ್ ಕಾತೆಯಲ್ಲಿ ತಾಂತ್ರಿಕ ದೋಷ ಇದ್ದಾಗಿ ಪಡೆದ ಚೆಕ್ ನ ಅಲ್ಪ ಮೊತ್ತವನ್ನು ತನ್ನ ಆತ್ಮೀಯ ಸ್ನೇಹಿತನಾದ ಗುರುರಾಜ್ ಅವರ ಬ್ಯಾಂಕ್ ಖಾತೆಗೆ ಜಮಯಿಸಿ ಆ ನಂತರ ಹಣವನ್ನು ತನ್ನ ಬ್ಯಾಂಕ್ ಕಾತೆ ಗೆ ವರ್ಗಯಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದನ್ನ ಅರಿತಿದ್ದ ಸುನಿಲ್ ಗೊಂಮ್ಸ್ ಈ ವಿಷಯವನ್ನು ದುರುಪಯೋಗ ಪಡಿಸಿಕೊಂಡು ಹೆಚ್ಚಿನ ಹಣ ಲಪಟಾಯಿಸಲು ಗುರುರಾಜ್ ಅವರನ್ನು ಈ ಪ್ರಕರಣದಲ್ಲಿ ಎಳೆದು ತಂದಿದ್ದಾರೆ.

ಇದೆಲ್ಲದರ ಮಧ್ಯೆ ಸಚಿನ್ ರವರ ಮನೆಗೆ ಹೋಗಿದ್ದ ಹೆಲೆನ್ ಗೊಂಮ್ಸ್ ಮತ್ತು ಅವರ ಪರ ವ್ಯಕ್ತಿಯೊಬ್ಬ ಸುನಿಲ್ ಗೊಂಮ್ಸ್ ಶೀಘ್ರದಲ್ಲಿ ಊರಿಗೆ ರಜೆಗೆ ಬರಲಿದ್ದು ಆಗ ಮತ್ತೊಮ್ಮೆ ಇವರ ವಿರುದ್ಧ ಕೇಸ್ ದಾಖಲಿಸುವುದಾಗಿ ಧಮ್ಕಿ ನೀಡಿದ್ದಾಳೆ ಎನ್ನಲಾಗಿದೆ.

ಇಲ್ಲಿ ನಾವೆಲ್ಲರೂ ತಿಳಿದು ಕೊಳ್ಳಬೇಕಾದ ಅಂಶ ಏನಂದರೆ ಶೇರ್ ಮಾರ್ಕೆಟ್ನಲ್ಲಿ ಯಾವುದೇ ನಿಗದಿತ ಲಾಭ ನಷ್ಟದ ಭರವಸೆ ಇರುವುದಿಲ್ಲ. ಇಂತಹ ಕಷ್ಟದ ಮಾರುಕಟ್ಟೆಯಲ್ಲಿ ಸಚಿನ್ ಅವರು ಲಾಭ ಗಳಿಸಿ ಮೂಲ ಬಂಡವಾಳ ಸಹಿತ ಇವರಿಗೆ ಸುಮಾರು ರೂಪಾಯಿ 60,00,000 ಮೊತ್ತವನ್ನು ಸುನಿಲ್ ಗೊಂಮ್ಸ್ ಅವರ ಮಾರ್ಗಸುಚಿಯಂತೆ ಹೆಲೆನ್ ಗೊಂಮ್ಸ್ ಮತ್ತು ಅವರ ಮಗಳು ನಿತ್ಯ ಗೊಂಮ್ಸ್ ಹಾಗೂ ಇತರ ಬ್ಯಾಂಕ್ ಖಾತೆಗಳಿಗೆ 10 ತಿಂಗಳ ಹಿಂದೆಯೇ ಬ್ಯಾಂಕ್ ವರ್ಗಾವಣೆ ಮಾಡಿದ್ದಾಗಿ ಮತ್ತು ಇದಕ್ಕೆ ಸಂಬಂಧಿಸಿರುವ ಎಲ್ಲ ಅಗತ್ಯ ದಾಖಲೆಗಳನ್ನು ಸೈಬರ್ ಕ್ರೈಂ ಇಲಾಖೆಗೆ ಈಗಾಗಲೇ ಇಮೇಲ್ ಹಾಗೂ ವಾಟ್ಸಾಪ್ಪ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಸಚಿನ್ ಅವರು ತಿಳಿಸಿದ್ದಾರೆ.

ಈ ಪ್ರಕರಣ ಈಗಾಗಲೇ ತನಿಖೆ ಹಂತದಲ್ಲಿದ್ದು ಶೀಘ್ರದಲ್ಲಿ ತಮ್ಮನ್ನು ಈ ಮೇಲೆ ಮಾಡಿರುವ ಆರೋಪದಲ್ಲಿ ನಿರಪರಾಧಿ ಎಂದು ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಸ್ನೇಹಿತರೆ ನಾವು ನಿಮ್ಮಲ್ಲಿ ಈ ಮುಖಂತರ ಕೇಳಿಕೊಳ್ಳುವುದು ಏನೆಂದರೆ ಈ ತರಹದ ಸ್ವಾರ್ಥಿ ಹಾಗೂ ಮೋಸ ಮನೋಭಾವದ ವ್ಯಕ್ತಿಗಳಿಂದ ದೂರವಿರಿ ಈ ಮೂಲಕ ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ.

ಸಹಿ ಇದೆ/-

ಪ್ರೊ.ಕೆ.ನಾರಾಯಣ ಶೆಟ್ಟಿ, 

ವಕೀಲ, ನೋಟರಿ, ಆರ್ಬಿಟ್ರೇಟರ್‌,

ಮೈನಾ ಸದನ, ಕಲ್ಯಾಣಪುರ-576114

ADVT

(ADVT)