ಕುಮಟಾ (Kumta) : ಊಟ ಮಾಡುತ್ತಿರುವಾಗ ಎದೆ ನೋವು (Chest pain) ಕಾಣಿಸಿಕೊಂಡು ಮಹಿಳೆ ಮೃತಪಟ್ಟ ಘಟನೆ ಕುಮಟಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಧಾರೇಶ್ವರದ (Dhareshwar) ಕಡೇಕೋಡಿಯ ಗೋರೆ ಕ್ರಾಸ್‌ ನಿವಾಸಿ ಪಾರ್ವತಿ ತಿಮ್ಮಪ್ಪ ನಾಯ್ಕ (೬೩) ಮೃತ ದುರ್ದೈವಿ. ನಿನ್ನೆ ನ.೫ರಂದು ಮಧ್ಯಾಹ್ನ ೨ ಗಂಟೆಗೆ ಊಟ ಮಾಡುತ್ತಿರುವಾಗ ಎದೆ ನೋವು ಕಾಣಿಸಿಕೊಂಡಿತ್ತು. ಸೋಪಾ ಮೇಲೆ ಸುಸ್ತಾಗಿ ಕುಳಿತವರಿಗೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯಾಧಿಕಾರಿ ಮೃತಪಟ್ಟ ಬಗ್ಗೆ ತಿಳಿಸಿದ್ದಾರೆ. ಯಾವುದೋ ಕಾಯಿಲೆಯಿಂದಲೋ ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ದೂರು (Complaint) ದಾಖಲಿಸಿರುವ ಮೃತರ ಮಗಳು ಅಕ್ಷತಾ ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (Case Registered) ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : Complaint/ ಮುರ್ಡೇಶ್ವರದ ಮಹಿಳೆ ವಿರುದ್ಧ ಹಲ್ಲೆ ಆರೋಪ