ಭಟ್ಕಳ (Bhatkal) : ಜೀವನದಲ್ಲಿ ಜೀವನೋತ್ಸಾಹ (Zeal) ಇಲ್ಲದಿದ್ದರೆ ಪ್ರತಿಯೊಂದೂ ನೀರಸವಾಗಿ ಗೋಚರವಾಗುತ್ತದೆ. ಅದರಲ್ಲೂ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವನೋತ್ಸಾಹ ನಮ್ಮಲ್ಲಿ ಪುಟಿಯದಿದ್ದರೆ ಜೀವನ ಅಲ್ಲಿಗೆ ತಟಸ್ಥವಾಗಿ ನಿಂತು ಬಿಡುತ್ತದೆ. ಹೀಗಾಗಿ ಮನುಷ್ಯನಿಗೆ ಜೀವನೋತ್ಸಾಹ ಎಂಬುದು ದಿವ್ಯೌಷಧಿ ಇದ್ದ ಹಾಗೆ. ೮೦ರ ಹರೆಯದ ಡಿ.ಬಿ.ನಾಯ್ಕರ (DB Naik) ಜೀವನ ನಮ್ಮೊಳಗಿನ ಜೀವನೋತ್ಸಾಹ ಎಂದೂ ಬತ್ತದಂತೆ‌ ಸದಾ ಸ್ಫೂರ್ತಿ (inspiration) ಆಗಬಲ್ಲದು ಎಂದರೆ ಅತಿಶಯೋಕ್ತಿಯಲ್ಲ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೌದು….. ಶಿಕ್ಷಕರಾಗಿ (Teacher) ೩೪ ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಡಿ.ಬಿ.ನಾಯ್ಕರು (DB naik) ನಿವೃತ್ತಿ ನಂತರ ಸುಮ್ಮನೆ ಕುಳಿತವರಲ್ಲ. ಶಿಕ್ಷಣ,(Education) ಸಹಕಾರಿ (cooperative), ಸಾಮಾಜಿಕ (social), ಧಾರ್ಮಿಕ ಕ್ಷೇತ್ರ (religious) ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅವರು ಸಾರ್ಥಕ ಸೇವೆಯನ್ನು ಸಲ್ಲಿಸಿದ್ದಾರೆ. ಶಿಕ್ಷಕರಾಗಿ ದಿ ನ್ಯೂ ಇಂಗ್ಲೀಷ್ ಸ್ಕೂಲಿನಲ್ಲಿ ೩೪ ವರ್ಷಗಳ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಗೌರವ ಆದರಗಳಿಗೆ ಪಾತ್ರರಾಗಿದ್ದಾರೆ. ಸೇವಾ ನಿವೃತ್ತಿಯ ನಂತರ ಗುರು ಸುಧೀಂದ್ರ (Guru Sudhindra) ಕಾಲೇಜಿನಲ್ಲಿ ಕಚೇರಿ ಅಧೀಕ್ಷಕರಾಗಿ ೬ ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಭಟ್ಕಳದ ಸರ್ಕಾರಿ ಪದವಿ ಕಾಲೇಜಿನ ಅಭಿವೃದ್ದಿ ಸಮಿತಿ ಸದಸ್ಯರಾಗಿ, ಜಾಲಿ ಸರ್ಕಾರಿ ಪ್ರೌಢಶಾಲೆಯ ಅಭಿವೃದ್ಧಿ ಸಮಿತಿ ಸದಸ್ಯರಾಗಿಯೂ ಈ ಇಳಿವಯಸ್ಸಿನಲ್ಲೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ : ದೋಣಿಯಲ್ಲಿಯೇ ಮೀನುಗಾರ ಸಾವು

ಸಹಕಾರಿ ಧುರೀಣರಾಗಿ ಡಿ.ಬಿ.ನಾಯ್ಕರ ಸಾಧನೆ ಅನುಪಮವಾದುದು. ಜಾಲಿ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ಸಂಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿ ೨೧ ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ಇಂದು ಜಾಲಿ ವ್ಯವಸಾಯ ಸೇವಾ ಸಹಕಾರಿ ಸಂಘ ಸದೃಢವಾಗಿ ಬೆಳೆದು ಜಿಲ್ಲೆ, ರಾಜ್ಯದಲ್ಲಿ ಗುರುತಿಸಿಕೊಳ್ಳುವಂಥ ಸಂಸ್ಥೆಯಾಗುವಲ್ಲಿ ಡಿ.ಬಿ.ನಾಯ್ಕರ ಸೇವೆ ಗಮನಾರ್ಹವಾದುದು.

ಇದನ್ನೂ ಓದಿ :  ವಕ್ಫ್ ತಿದ್ದುಪಡಿ ಕಾಯ್ದೆಯ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಹುಬ್ಬಳ್ಳಿಗೆ

ಇನ್ನು, ಜಾಲಿ ಯುವಕ ಸಂಘದ ಸಂಸ್ಥಾಪಕ ಕಾರ್ಯದರ್ಶಿಯಾಗಿ, ಜಾಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ೬ ವರ್ಷಗಳ ಕಾಲ, ಹೆಬಳೆ ಗ್ರಾಮ ಪಂಚಾಯತ್ ಸೆಕ್ರೆಟರಿಯಾಗಿ ೧ ವರ್ಷ ಸೇವೆ ಸಲ್ಲಿಸಿದ್ದಾರೆ. ಧಾರ್ಮಿಕ ಕ್ಷೇತ್ರದ ಇವರ ಸೇವೆಯೂ ಸದಾ ಸ್ಮರಿಸುವಂಥದ್ದು. ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇಗುಲದ ನೂತನ ಶಿಲಾಮಯ ಗರ್ಭಗುಡಿ ಲೋಕಾರ್ಪಣೆಗೊಂಡಿರುವುದು ಭಟ್ಕಳದ ಇತಿಹಾಸದಲ್ಲಿ‌ ಸುವರ್ಣಾಕ್ಷರದಲ್ಲಿ ದಾಖಲಾದ ಸಂಗತಿ. ಜಾಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ, ಹೊಟ್ಗಾಣಿ ಜಟಗೇಶ್ವರ ದೇವಾಲಯದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂಓದಿ :  ಲಾರಿಯಲ್ಲಿಯೇ ಎದೆನೋವಿನಿಂದ ಕ್ಲೀನರ್‌ ಸಾವು

ಹೀಗೆ ಹತ್ತು ಹಲವು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಿ.ಬಿ.ನಾಯ್ಕರವರನ್ನು ಈ ಬಾರಿಯ ರಾಜ್ಯೋತ್ಸವದಲ್ಲಿ ಗೌರವಿಸಿದ್ದು ಸೂಕ್ತ ವ್ಯಕ್ತಿಗೆ ಸಂದ ಗೌರವವಾಗಿದೆ. ಮಾತ್ರವಲ್ಲ ಇದರಿಂದ ಪ್ರಶಸ್ತಿಯ ಮೌಲ್ಯವೂ ಹೆಚ್ಚಾಗಿದೆ ಎಂಬುದು ಸಾರ್ವಜನಿಕ ವಲಯದಲ್ಲಿ, ಪ್ರಜ್ಞಾವಂತರ ವಲಯದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ. ಎಂಭತ್ತರ ಇಳಿವಯಸ್ಸಿನಲ್ಲಿಯೂ ತಮ್ಮ ಜೀವನೋತ್ಸಾಹವನ್ನು ಕಾಪಾಡಿಕೊಂಡು, ನಿರಂತರ‌ ಅಧ್ಯಯನ, ಅಧ್ಯಾಪನ‌ ಸಾಮಾಜಿಕ ಚಿಂತನೆಯನ್ನು ಜಾಗೃತವಾಗಿರಿಸಿಕೊಂಡ ಸರಳ ಸಜ್ಜನಿಕೆಯ ಇವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ.

ಇದನ್ನೂ ಓದಿ :  ಯುವತಿ ನಾಪತ್ತೆ, ದೂರು ದಾಖಲು