ಅಂಕೋಲಾ (Ankola) : ದಿನದಿಂದ ದಿನಕ್ಕೆ ಹೃದಯಾಘಾತ (Heart Attack) ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚುತ್ತಿವೆ. ಕಾರು ಚಲಾಯಿಸುತ್ತಿರುವಾಗ, ಊಟ ಮಾಡುತ್ತಿರುವಾಗ, ಕೃಷಿ ಕಾರ್ಯದಲ್ಲಿದ್ದಾಗ… ಹೀಗೆ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪುವ ಪ್ರಕರಣಗಳು ದಾಖಲಾಗುತ್ತಿರುವ ಬೆನ್ನಲ್ಲೇ, ಅಂಕೋಲಾದಲ್ಲಿ ಲಾರಿಯಲ್ಲಿ ಕುಳಿತಿದ್ದಾಗಲೇ ಎದೆನೋವು ಕಾಣಿಸಿಕೊಂಡು ಕ್ಲೀನರ್ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅಂಕೋಲಾ ತಾಲೂಕಿನ ಶೆಟಗೇರಿಯ ನೀಲಕಂಠ ಶಿವರಾಮ ಗುನಗಾ (೫೫) ಮೃತ ದುರ್ದೈವಿ. ಇವರು ನಿನ್ನೆ ನ.೬ರಂದು ಬೆಳಿಗ್ಗೆ ಎಂದಿನಂತೆ ಶಾಂತಾ ನಾಯಕ ಎಂಬುವವರ ಲಾರಿಯ ಕ್ಲೀನರ್ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ೧ ಗಂಟೆ ಸುಮಾರಿಗೆ ಅಂಕೋಲಾ ಶೆಟಗೇರಿ ಹತ್ತಿರ ಲಾರಿಯಿಂದ ಒಮ್ಮೇಲೆ ಇಳಿದು ತಲೆತಿರುಗುತ್ತಿದೆ ಎಂದಿದ್ದರು.
ಇದನ್ನೂ ಓದಿ : ಯುವತಿ ನಾಪತ್ತೆ, ದೂರು ದಾಖಲು
ಎದೆನೋವು (Heart Attack) ಎಂದು ಹೊರಳಾಡುತ್ತಿದ್ದವರಿಗೆ ಅಂಕೋಲಾ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದಾಗ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತರ ಪತ್ನಿ ರೇಖಾ ಗುನಗಾ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು (complaint) ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (Case Registered) ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಇದನ್ನೂ ಓದಿ : ಇಲಿ ಮದ್ದು ಸೇವನೆ; ಗಂಡ ಸಾವು, ಹೆಂಡತಿ ಚಿಕಿತ್ಸೆಯಲ್ಲಿ