ಕಾರವಾರ (Karwar) : ಮನೆಯ ಬಾಗಿಲಿನ ಕೊಂಡಿ ಮುರಿದು ಒಳಹೊಕ್ಕ ಕಳ್ಳರು ಟ್ರೇಜರಿಯ ಲಾಕರಿನಲ್ಲಿದ್ದ ಚಿನ್ನಾಭರಣ ದೋಚಿ (Gold theft) ಪರಾರಿಯಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನಿನ್ನೆ ನ.೭ರಂದು ಕಾರವಾರದ ಆಶ್ರಮ ರಸ್ತೆಯಲ್ಲಿರುವ ಅಭಿಮಾನಶ್ರೀ ಅಪಾರ್ಟಮೆಂಟಿನ ಮನೆಯೊಂದರಲ್ಲಿ ಘಟನೆ ನಡೆದಿದೆ. ಶಿಕ್ಷಕಿಯಾಗಿರುವ (Teacher) ಪ್ರಿಯಾ ಅಂತೋನಿ ಫರ್ನಾಂಡೀಸ್‌ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ನಿನ್ನೆ ಬೆಳಿಗ್ಗೆ ೮.೩೦ರ ಸುಮಾರಿಗೆ ಕೆಲಸಕ್ಕೆ ಹೋಗುವಾಗ ಬಂಗಾರದ ಆಭರಣಗಳನ್ನು ಮನೆಯ ಮಲಗುವ ಕೋಣೆಯಲ್ಲಿರುವ ಟ್ರೇಜರಿ ಲಾಕರಿನಲ್ಲಿಟ್ಟಿದ್ದರು. ಆದರೆ, ಲಾಕರಿಗೆ ಚಾವಿಯನ್ನು ಹಾಕಿದ ಅವರು ಕೀಯನ್ನು ಅಲ್ಲೇ ಬಿಟ್ಟು ಹೋಗಿದ್ದರು.

ಇದನ್ನೂ ಓದಿ :  ಬಾವಿಗೆ ಬಿದ್ದು ಕೃಷಿಕ ಸಾವು

ಸಂಜೆ ೪.೩೦ರ ಸುಮಾರಿಗೆ ಮನೆಗೆ ಮರಳಿ ಬಂದಾಗ ಬಾಗಿಲಿನ ಕೊಂಡಿ ಮುರಿದಿರುವುದು ಗೊತ್ತಾಗಿದೆ. ಮನೆಯ ಒಳ ಹೋಗಿ ನೋಡಿದಾಗ ಟ್ರೇಜರಿ ತೆಗೆದು ಒಳಗಡೆಯಿದ್ದ ಲಾಕರ್‌ ಕೀ ಬಳಸಿ ಚಿನ್ನಾಭರಣ ಕದ್ದಿರುವುದು (gold theft) ಬೆಳಕಿಗೆ ಬಂದಿದೆ. ಲಾಕರಿನಲ್ಲಿದ್ದ ಅಂದಾಜು ೫.೬೦ ಲಕ್ಷ ರೂ. ಮೌಲ್ಯದ ೧೪೦ ಗ್ರಾಂ ತೂಕದ ಚಿನ್ನಾಭರಣಗಳು ಕಳ್ಳತನ ಮಾಡಲಾಗಿದೆ ಎಂದು ಪ್ರಿಯಾ ಫರ್ನಾಂಡಿಸ್‌ ದೂರಿನಲ್ಲಿ (complaint) ತಿಳಿಸಿದ್ದಾರೆ. ಕಾರವಾರ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case registered).

ಇದನ್ನೂ ಓದಿ :  ನಾಳೆ ಜಿಲ್ಲಾ ಮಟ್ಟದ ಕಬಡ್ಡಿ ತಂಡಕ್ಕೆ ಆಯ್ಕೆ