ಭಟ್ಕಳ (Bhatkal) : ಬೆಂಗಳೂರಿನ (Bengaluru) ವೆಯಿಲ್ ಫೌಂಡೇಶನ್ ಬೆಂಗಳೂರು ಅವರು ಕೊಡಮಾಡುವ ೨೦೨೪ರ ಪ್ರತಿಷ್ಠಿತ ರವೀಂದ್ರ ರತ್ನ ಪುರಸ್ಕಾರಕ್ಕೆ (Award) ಉಮೇಶ ಮುಂಡಳ್ಳಿ ಆಯ್ಕೆಯಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಾಮಾಜಿಕ ಕ್ಷೇತ್ರದಲ್ಲಿ ಅವರ ಮಹತ್ವದ ಕೊಡುಗೆ, ಸೇವೆಗಳನ್ನು ಪರಿಗಣಿಸಿ ಉತ್ತಮ ಸಮಾಜ ಸೇವಕ ಎಂದು ೨೦೨೪ರ ರವೀಂದ್ರ ರತ್ನ ಪುರಸ್ಕಾರಕ್ಕೆ (Award) ಆಯ್ಕೆ ಮಾಡಲಾಗಿದೆ. ವಿಶೇಷವಾಗಿ ಸಮುದಾಯ ಜಾಗೃತಿಯಲ್ಲಿ ಅವರ ನಿನೂತನ ಪ್ರಯೋಗಗಳು, ೨೦೦೩ರಿಂದ ೨೦೦೮ರವರೆಗೆ ಸುಸ್ಥಿರ ಅರಣ್ಯ ಹಾಗೂ ಸಾವಯವ ಕೃಷಿ, ಸ್ವಸಹಾಯ ಸಂಘಗಳ ಮಹತ್ವ ಪ್ರಚುರಪಡಿಸಿರುವ ರೀತಿ ಮತ್ತು ದಶಕಗಳಿಂದ ಹಲವಾರು ಸರ್ಕಾರಿ ಯೋಜನೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಾಹಿತಿ ನೀಡುವಲ್ಲಿ ತಮ್ಮನ್ನು ತೊಡಗಿಸಿಕೊಂಡ ವಿಧಾನ ಇವುಗಳನ್ನು ಪರಿಗಣಿಸಲಾಗಿದೆ.

ಇದನ್ನೂ ಓದಿ : ದೇಶದ ಮೊದಲ ಅಧ್ಯಯನಕ್ಕೆ ಸ್ಪಂದಿಸದ ಕರ್ನಾಟಕ

೨೦೦೯ ರಿಂದ ಉಮೇಶ ಅವರು ಕರ್ನಾಟಕ ಸರ್ಕಾರದ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದಲ್ಲಿ ಸಾಮಾಜಿಕ ಪರಿಶೋಧನಾ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರ ಸ್ಥಾನವನ್ನು ಹೊಂದಿದ್ದಾರೆ. ಅನೇಕ ಯೋಜನೆಗಳಲ್ಲಿ ಸಕ್ರಿಯವಾಗಿ ಸಾಮಾಜಿಕ ಪರಿಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಗ್ರಾಮೀಣ ಸಮುದಾಯಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಜಾಗೃತಿಯನ್ನು ಉತ್ತೇಜಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ : ಉತ್ತರ ಕನ್ನಡವೇ ಹೆಮ್ಮೆ ಪಡುವಂತಹ ಯುವಕರ ಸಾಧನೆ !

ಸಮಾಜ ಸೇವೆಯಲ್ಲಿನ ಬದ್ಧತೆ ಹಾಗೂ ಕ್ರಿಯಾಶೀಲ ಮನೋಭಾವನೆ ಪರಿಗಣಿಸಿ ಬೆಂಗಳೂರಿನ ವೆಯಿಲ್ ಫೌಂಡೇಶನ್ ಉತ್ತಮ ಸಮಾಜ ಸೇವಕ ಎಂಬ ಬಿರುದು ಸೇರಿದಂತೆ ೨೦೨೪ರ ರವೀಂದ್ರ ರತ್ನ ಪುರಸ್ಕಾರವನ್ನು ಘೋಷಿಸಿದೆ ಎಂದು ಪ್ರಶಸ್ತಿ ಸಮಿತಿಯ ಮುಖ್ಯಸ್ಥ ಚಂದ್ರಶೇಖರ ಕೆ.ಎನ್.ಹಾಗೂ ಸಂಸ್ಥೆಯ ಅಧ್ಯಕ್ಷ ಜಾನ್ ಥಾಮಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಡಿಯೋ ಸಹಿತ ಇದನ್ನೂ ಓದಿ : ಕಾರವಾರದಲ್ಲಿ ಹೊತ್ತಿ ಉರಿದ ಬಸ್ಸು

ಉಮೇಶ ಮುಂಡಳ್ಳಿ ಬಿಡುವಿನ ವೇಳೆಯನ್ನೂ ಸದುಪಯೋಗ ಪಡಿಸಿಕೊಳ್ಳುತ್ತಾ ಬರುತ್ತಿದ್ದಾರೆ. ಕವಿ, ಲೇಖಕ ಹಾಗೂ ಸುಗಮ ಸಂಗೀತ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಉಮೇಶ ಮುಂಡಳ್ಳಿಯವರಿಗೆ ಈಗಾಗಲೇ ಕರ್ನಾಟಕ ಸರ್ಕಾರದ (Karnataka government) ಯುವ ಪ್ರಶಸ್ತಿ (Yuva Award) ಸೇರಿದಂತೆ ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ, ನ್ಯಾಷನಲ್ ಐಕಾನ್ ಅವಾರ್ಡ್, ಬಸವ ಚೇತನ ಪ್ರಶಸ್ತಿ, ಕರುನಾಡ ಸಾಧಕ ರತ್ನ ಮೊದಲಾದ ಹತ್ತಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿ ಗಳು ಲಭಿಸಿದೆ.

ಇದನ್ನೂ ಓದಿ : ಕಾರವಾರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ