ಕಾರವಾರ (Karwar) : ಪೊಲೀಸ್‌ ಅಧಿಕಾರಿಯ ಸೋಗಿನಲ್ಲಿ ವಿಡಿಯೋ ಕಾಲ್‌ ಮಾಡಿದ ವ್ಯಕ್ತಿಯನ್ನು ನಂಬಿದ ಕಾರವಾರದ ವ್ಯಕ್ತಿ ೩.೮೦ ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ಸಿಇಎನ್‌ (CEN) ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case Registered).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರವಾರದ (Karwar) ಮುಖ್ಯ ರಸ್ತೆಯಲ್ಲಿ ವಾಸವಾಗಿರುವ ವಿಲ್ಸನ್‌ ಫರ್ನಾಂಡಿಸ್‌ ಹಣ ಕಳಕೊಂಡವರು. ಮೊಬೈಲ್ ಸಂಖ್ಯೆ ೮೦೦೦೯೫೭೮೧೫ ದಿಂದ ಕರೆ ಮಾಡಿದ ಅಪರಿಚಿತ ತಾನು ಡಿ.ಎಚ್.ಎಲ್ ಕೋರಿಯರ್ ಸರ್ವಿಸ್ ಮುಂಬೈದಿಂದ ಮಾತನಾಡುತ್ತಿರುವುದಾಗಿ ಹೇಳಿದ್ದಾನೆ. ಅವರ ಹೆಸರಿನಲ್ಲಿರುವ ಪಾರ್ಸಲ್‌ದಲ್ಲಿ MDMA ಮಾದಕವಸ್ತು ಇದೆ. ಕೂಡಲೇ ಆನ್‌ಲೈನ್ ಮೂಲಕ ದೂರು ದಾಖಲು (Online complaint) ಮಾಡಬೇಕಾಗುತ್ತದೆ.  ತಾನು ಮುಂಬೈ (Mumbai) ಪೊಲೀಸರಿಗೆ ಕರೆಯನ್ನು ಫಾರ್ವರ್ಡ್‌ ಮಾಡುವುದಾಗಿ ತಿಳಿಸಿದ್ದಾನೆ.

ಇದನ್ನೂ ಓದಿ : ಮನೆಯಲ್ಲಿಯೇ ಕುಸಿದು ಬಿದ್ದು ಯುವತಿ ಸಾವು

ನಂತರದಲ್ಲಿ ಮೊಬೈಲ್ ಸಂಖ್ಯೆ ೯೫೨೦೨೮೩೦೭೫ದಿಂದ ಒಬ್ಬ ವ್ಯಕ್ತಿಯು ವಾಟ್ಸಪ್ ವಿಡಿಯೋ ಕರೆ ಮಾಡಿದ್ದಾನೆ. ಮುಂಬೈ ಪೊಲೀಸ್‌ ಅಧಿಕಾರಿಯ ಸಮವಸ್ತ್ರ ಧರಿಸಿಕೊಂಡಿದ್ದ ವ್ಯಕ್ತಿಯು, ವಿಲ್ಸನ್‌ ಹೆಸರಿನಲ್ಲಿರುವ ಪಾರ್ಸಲ್‌ದಲ್ಲಿ ೪೦೦ ಗ್ರಾಂ MDMA ಮಾದಕವಸ್ತು, ಬೇರೆ ಬೇರೆ ಹೆಸರಿನಲ್ಲಿರುವ ಏಳು ಪಾಸಪೋರ್ಟಗಳು, ಬೇರೆ ಬೇರೆ ಹೆಸರಿನಲ್ಲಿರುವ ಐದು ಕ್ರೆಡಿಟ್‌ ಕಾರ್ಡಗಳು ಮತ್ತು ೩.೫ ಕೆ.ಜಿ ಬಟ್ಟೆ ಇರುವುದಾಗಿ ತಿಳಿಸಿದ್ದಾನೆ.

ಇದನ್ನೂ ಓದಿ :  ಸಾಮಾಜಿಕ ಕಾರ್ಯಕ್ಕಾಗಿ ರವೀಂದ್ರ ರತ್ನ ಪುರಸ್ಕಾರಕ್ಕೆ ಆಯ್ಕೆ

ವೆರಿಫಿಕೇಶನ್‌ ಮುಗಿಯುವರೆಗೆ ಯಾರಿಗೂ ವಿಷಯವನ್ನು ಹೇಳಬಾರದು. ಯಾರ ಸಂಪರ್ಕಕ್ಕೂ ಸಿಗಬಾರದು. ವಾಟ್ಸಪ್ (Whatsapp) ವಿಡಿಯೋ ಕರೆ (video call) ಕಟ್ ಮಾಡಬಾರದು ಎಂದು ಹೆದರಿಸಿದ್ದಾನೆ. ಹಣದ ಬೇಡಿಕೆ ಇಟ್ಟು ೩.೮೦ ಲಕ್ಷ ರೂ. ಹಣವನ್ನು ತಮ್ಮ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾನೆ ಎಂದು ವಿಲ್ಸನ್‌ ಫರ್ನಾಂಡಿಸ್‌ ಅವರ ಅಣ್ಣ ರಾಫೆಲ್‌ ಫರ್ನಾಂಡಿಸ್‌ ದೂರಿನಲ್ಲಿ (complaint) ತಿಳಿಸಿದ್ದಾರೆ.

ಇದನ್ನೂ ಓದಿ :  ದೇಶದ ಮೊದಲ ಅಧ್ಯಯನಕ್ಕೆ ಸ್ಪಂದಿಸದ ಕರ್ನಾಟಕ