ಹೊನ್ನಾವರ (Honnavar) : ಬೊಲೆರೊ ವಾಹನ ಡಿಕ್ಕಿ (bolero collision) ಹೊಡೆದ ಪರಿಣಾಮ ಬೈಕಿನಲ್ಲಿದ್ದ ಇಬ್ಬರು ಶಿಲ್ಪಿಗಳು ಗಾಯಗೊಂಡ ಘಟನೆ ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹೊನ್ನಾವರ ತಾಲೂಕಿನ ಹೊಸಗದ್ದೆ ಮಾಗೋಡು ವಾಸಿ ಪ್ರಜ್ವಲ್ ಪ್ರಕಾಶ ನಾಯ್ಕ (೨೧) ಮತ್ತು ಭಟ್ಕಳ (Bhatkal) ತಾಲೂಕಿನ ಕಾಯ್ಕಿಣಿ ಗೌಡರಗದ್ದೆಯ ಮಂಜುನಾಥ ರಂಗ ನಾಯ್ಕ (೧೯) ಗಾಯಗೊಂಡವರು. ಇವರಿಬ್ಬರೂ ಶಿಲ್ಪಿ ಕೆಲಸ ಮಾಡಿಕೊಂಡಿದ್ದು, ಗೇರಸೊಪ್ಪ ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿದ್ದರು.
ವಿಡಿಯೋ ಸಹಿತ ಇದನ್ನೂ ಓದಿ : ವಕ್ಫ್ ಆಸ್ತಿ ಮಾಡಲು ಬಂದ್ರೆ ಜನರೆಲ್ಲಾ ಸೇರಿ ಓಡಿಸಿ
ಭಾಸ್ಕೇರಿ ವರ್ನಕೇರಿ ಕ್ರಾಸ್ ಹತ್ತಿರ ಎದುರಿನಿಂದ ಬಂದ ಬೊಲೆರೋ ವಾಹನ ಬೈಕಿಗೆ ಡಿಕ್ಕಿ ಹೊಡೆದು (bolero collision), ಸವಾರರಿಬ್ಬರೂ ಗಾಯಗೊಂಡಿದ್ದಾರೆ. ನಿನ್ನೆ ಸಂಜೆ ೩.೩೦ರ ಸುಮಾರಿಗೆ ಈ ಅಪಘಾತ ನಡೆದಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಬೈಕ್ ಸವಾರ ಪ್ರಜ್ವಲ್ ನಾಯ್ಕ ದೂರು (complaint) ದಾಖಲಿಸಿದ್ದಾರೆ. ಬೊಲೆರೊ ಚಾಲಕರಾಗಿರುವ ಕುಮಟಾ (kumta) ತಾಲೂಕಿನ ಕತಗಾಲ ಗ್ರಾಮದ ಆಳ್ಕೋಡ ನಿವಾಸಿ ಚಂದ್ರು ಮಾರುತಿ ಗೌಡ (೨೬) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ (Case Registered).
ಇದನ್ನೂ ಓದಿ : ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ೩.೮೦ ಲಕ್ಷ ರೂ. ವಂಚನೆ