ಯಲ್ಲಾಪುರ (Yallapur) : ಬಾವಿಯಲ್ಲಿ ಬಿದ್ದು ಕೂಲಿ ಕಾರ್ಮಿಕನೊಬ್ಬ (labour) ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲ್ಲಾಪುರ ತಾಲೂಕಿನ ಬಾರೆ ಮರಹಳ್ಳಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕೂಲಿ ಕಾರ್ಮಿಕ (labour) ತಮ್ಮಯ್ಯ ಕೆರಗು ಕುಣಬಿ (೫೪) ಮೃತ ವ್ಯಕ್ತಿ. ಇವರು ನಿನ್ನೆ ನ.೮ರಂದು ಸಾಯಂಕಾಲ ೪ರಿಂದ ಕಾಣೆಯಾಗಿದ್ದರು. ಇಂದು ಮಧ್ಯಾಹ್ನ ೨ ಗಂಟೆ ಸುಮಾರಿಗೆ ಇವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ವಿಪರೀತ ಸಾರಾಯಿ ಕುಡಿಯುತ್ತಿದ್ದ ಇವರು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಅಳಿಯ ಮಹಾಬಲೇಶ್ವರ ನಾರಾಯಣ ಕುಣಬಿ ದೂರಿನಲ್ಲಿ (complaint) ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (Case Registered) ಯಲ್ಲಾಪುರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : ಎಸ್‌ಡಿಪಿಐ ವಿರುದ್ಧ ಬಿಜೆಪಿ ದೂರು