ಭಟ್ಕಳ (Bhatkal) : ಕೋಮು ಪ್ರಚೋದಿತ ಭಾಷಣ ಮಾಡಿದ ಆರೋಪದ ಮೇಲೆ ಬಿಜೆಪಿ ಮುಖಂಡ (BJP Leader) ಕೃಷ್ಣ ನಾಯ್ಕ ಆಸರಕೇರಿ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ (Case Registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳದ ನವಾಯತ್ ಕಾಲೋನಿಯ ಮೊಹಿದ್ದೀನ್ ರುಕ್ನುದ್ದೀನ್ ದೂರು (Complaint) ದಾಖಲಿಸಿದವರು. ನ.೮ರಂದು ರಾತ್ರಿ ೯.೧೫ರ ಸುಮಾರಿಗೆ ದೂರು ದಾಖಲಿಸಲಾಗಿದೆ. ನ.೧೧ರಂದು ಭಟ್ಕಳದ ಸಹಾಯಕ ಆಯುಕ್ತರ ಕಚೇರಿ ಎದುರು ರಾಜ್ಯ ಸರ್ಕಾರದ ವಕ್ಫ್ ಮಂಡಳಿ (Waqf board) ವಿರುದ್ಧ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ (BJP Leader) ಕೃಷ್ಣ ನಾಯ್ಕ ಕೋಮು ಪ್ರಚೋದಿತ ಭಾಷಣ ಮಾಡಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಭಟ್ಕಳ ಶಹರ ಠಾಣೆ ಪಿಎಸ್‌ಐ ಶಿವಾನಂದ ನಾವದಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಆಸ್ಪತ್ರೆ ಅಲೆದಾಟದಲ್ಲೇ ಯುವಕನ ಜೀವ ಹೋಯ್ತು !