ಕುಮಟಾ (Kumta):  ವಾಕರಸಾ ಸಂಸ್ಥೆಯ (NWKRTC) ಬಸ್‌ ಡಿಕ್ಕಿ ಹೊಡೆದ (Bus hit) ಪರಿಣಾಮ  ರಾಷ್ಟ್ರೀಯ ಹೆದ್ದಾರಿ (National Highway) ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಧಾರೇಶ್ವರ ಮೂಲದ ನಿವೃತ್ತ ನೌಕರ, ಹಾಲಿ ಹೆಗಡೆ ಗುನಗನಕೊಪ್ಪ ನಿವಾಸಿ ನಾಗು ಬಾಳಾ ಮುಕ್ರಿ (೬೮) ಮೃತ ದುರ್ದೈವಿ. ಮಣಕಿ ಗಾಂಧಿನಗರದ ಶ್ರೀರಾಮ ಲೀಲಾ ಆಸ್ಪತ್ರೆಯ ಹತ್ತಿರ ನಿನ್ನೆ ರಾತ್ರಿ ೮.೧೫ರ ಸುಮಾರಿಗೆ ಅಪಘಾತ ನಡೆದಿದೆ. ದಿವಗಿ ಕಡೆಯಿಂದ ಕುಮಟಾ ಕಡೆಗೆ ಬರುತ್ತಿದ್ದ ವಾಕರಸಾ ಸಂಸ್ಥೆಯ ಬಸ್‌ ಡಿಕ್ಕಿ ಹೊಡೆದಿತ್ತು (Bus hit). ಬಸ್‌ ಚಾಲಕ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್‌ ನಿವಾಸಿ ಕೆ.ರವಿಕುಮಾರ ಕುಟ್ಟಪ್ಪನ್‌ (೫೨) ವಿರುದ್ಧ ದೂರು ದಾಖಲಾಗಿದೆ. ಮೃತರ ಪುತ್ರಿ ನೇತ್ರಾವತಿ ಪ್ರದೀಪ ಮುಕ್ರಿ ಕುಮಟಾ ಪೊಲೀಸ್‌ ಠಾಣೆಯಲ್ಲಿ ದೂರು (complaint) ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ :  ಬಿಜೆಪಿ ಮುಖಂಡ ಕೃಷ್ಣ ನಾಯ್ಕ ವಿರುದ್ಧ ದೂರು