ಭಟ್ಕಳ (Bhatkal) : ತಾಲೂಕಿನ ಮೇಲಿನ ಶೇರುಗಾರಕೇರಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ಶಿಕ್ಷಕರ ಕೊರತೆ ನೀಗಿಸುವಲ್ಲಿ ಯಂಗ್ ಒನ್ ಇಂಡಿಯಾದ ಸಂಸ್ಥಾಪಕ ಮಾಸ್ತಪ್ಪ ನಾಯ್ಕ ಮುಂದಾಗಿದ್ದು, ಓರ್ವ ಅತಿಥಿ ಶಿಕ್ಷಕರ (guest teacher) ತಿಂಗಳ ಸಂಬಳ ನೀಡಲು ಒಪ್ಪಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಶಾಲೆಯಲ್ಲಿ ಒಂದರಿಂದ ಐದನೇ ತರಗರಿಯವರೆಗೆ ೭ ಜನ ವಿದ್ಯಾರ್ಥಿಗಳಿದ್ದಾರೆ. ಇವರಿಗೆಲ್ಲ ಒಬ್ಬರೇ ಶಿಕ್ಷಕರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಒಬ್ಬರೇ ಶಿಕ್ಷಕರು ಪ್ರತಿ ತರಗತಿಯ ಎಲ್ಲಾ ವಿಷಯಗಳನ್ನು ಬೋಧಿಸುತ್ತಿದ್ದಾರೆ. ಜೊತೆಗೆ ಶಾಲೆಯ ಆಡಳಿತಾತ್ಮಕ ಕೆಲಸಗಳನ್ನು ಮತ್ತು ಆನ್ಲೈನ್ ಕೆಲಸಗಳನ್ನು ಮಾಡುವುದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ. ಸರ್ಕಾರವು ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಇನ್ನೋರ್ವ ಶಿಕ್ಷಕರನ್ನು ನೇಮಿಸುತ್ತಿಲ್ಲ.

ಇದನ್ನೂ ಓದಿ : ಅಪರಿಚಿತಗೆ ಎಟಿಎಂ ಕಾರ್ಡ್‌ ಕೊಟ್ಟು ಮೋಸ ಹೋದರು !

೨೦೨೨-೨೩ ಮತ್ತು ೨೦೨೩-೨೪ನೇ ಸಾಲಿನಲ್ಲಿ ಇಷ್ಟೇ ಮಕ್ಕಳ ಸಂಖ್ಯೆ ಇದ್ದಾಗ ಧರ್ಮಸ್ಥಳ (Dharmasthala) ಜ್ಞಾನ ದೀಪ ಯೋಜನೆ ಅಡಿಯಲ್ಲಿ ಗ್ರಾಮದ ಓರ್ವ ಅತಿಥಿ ಶಿಕ್ಷಕರನ್ನು (guest teacher) ನೇಮಿಸಿಕೊಂಡು ೧೦ ತಿಂಗಳ ಕಾಲ ಧನ ಸಹಾಯ ನೀಡಲಾಗಿತ್ತು. ಈ ವರ್ಷ ಮಕ್ಕಳ ಸಂಖ್ಯೆ ಇದ್ದಾಗ ಧರ್ಮಸ್ಥಳ ಜ್ಞಾನ ದೀಪ ಯೋಜನೆಯವರು ನಾವು ಪ್ರತಿ ವರ್ಷ ಒಂದೇ ಶಾಲೆಗೆ ಧನ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :   ಸಾರಿಗೆ ಬಸ್‌ ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲೇ ಸಾವು

ಸದ್ಯ ಈಗ ೫೮ ವರ್ಷದ ಓರ್ವ ಶಿಕ್ಷಕರಿರುವುದರಿಂದ ತೊಂದರೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಶಾಲೆಗೆ ಮಕ್ಕಳ ಶೈಕ್ಷಣಿಕ ಪ್ರಗತಿಯ ಸಲುವಾಗಿ ನಮಗೆ ಸಹಾಯ ಮಾಡುವಂತೆ ಶಾಲೆಯ ಅಧ್ಯಕ್ಷರು ಹಾಗೂ ಸದಸ್ಯರು ಉದ್ಯಮಿ ಮಾಸ್ತಪ್ಪ ನಾಯ್ಕ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿದ ಉದ್ಯಮಿ, ಶಿಕ್ಷಕಿಯ ನೇಮಕ ಮಾಡಲು ತಿಳಿಸಿದ್ದಾರೆ. ಅವರ ತಿಂಗಳ ಸಂಬಳಕ್ಕೆ ಸಹಾಯ ಮಾಡುವುದಾಗಿ ಶಾಲೆಯ ಆಡಳಿತ ಮಂಡಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ :  ಬಿಜೆಪಿ ಮುಖಂಡ ಕೃಷ್ಣ ನಾಯ್ಕ ವಿರುದ್ಧ ದೂರು ದಾಖಲು