ಶಿರಸಿ (Sirsi news) : ಮಾವನ ಮನೆಯಲ್ಲಿ ಉಳಿದುಕೊಂಡಿದ್ದ ಸೊರಬದ (Soraba) ೨೩ ವರ್ಷ ವಯಸ್ಸಿನ ಯುವತಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶಿವಮೊಗ್ಗ (Shivamogga) ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿಯ ಆಜಾದ ನಗರದ ನಿವಾಸಿ ನೇಹಾಬಾನು ಜಾವೀದ್‌ ಸಾಬ್‌ (೨೩) ಮೃತ ಯುವತಿ. ಇವರು ಕಳೆದ  ೩ ವರ್ಷಗಳಿಂದಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಈ ಬಗ್ಗೆ ಶಿವಮೊಗ್ಗ, ಬೆಂಗಳೂರು (Bengaluru) ಮುಂತಾದ ಕಡೆ ವೈಧ್ಯರಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೂ ಅವಳು ಗುಣಮುಖಳಾಗದೇ ಇದ್ದವಳು ನ.೮ರಂದು ತಮ್ಮ ಮಾವನ ಮನೆಯಿರುವ ಶಿರಸಿಯ ಕಸ್ತೂರಬಾ ನಗರಕ್ಕೆ ಬಂದು ಉಳಿದುಕೊಂಡಿದ್ದರು.

ಇದನ್ನೂ ಓದಿ :  ಜಗತ್ತಿನ ಅತ್ಯಂತ ಕಿರಿಯ ಫಿಡೆ ಶ್ರೇಯಾಂಕಿತ ಚೆಸ್‌ ಆಟಗಾರ

ನಿನ್ನೆ ದಿನ ನ.೧೧ರಂದು ಬೆಳಿಗ್ಗೆ ೧೧ಗಂಟೆ ಸಮಯಕ್ಕೆ ಯಾರಿಗೂ ಹೇಳದೆ ಮನೆಯಿಂದ ಹೋದವಳಿಗೆ ಹುಡುಕಾಡಿದರೂ ಸಿಕ್ಕಿರಲಿಲ್ಲ. ಬೆಳಿಗ್ಗೆ ೧೧ಗಂಟೆಯಿAದ ೧೧.೩೦ ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿಯ ಕೋಟೆಕೆರೆಯ ನೀರಿನಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿ ಮೃತರ ತಂದೆ  ಜಾವೀದ್ ಸಾಬ್‌ ದೂರಿನಲ್ಲಿ (Complaint) ತಿಳಿಸಿದ್ದಾರೆ. ಶಿರಸಿ ಹೊಸಮಾರುಕಟ್ಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು (Case Registered) ತನಿಖೆ ಕೈಗೊಂಡಿದ್ದಾರೆ (Sirsi News).

ವಿಡಿಯೋ ಸಹಿತ ಇದನ್ನೂ ಓದಿ : ಆತಂಕ ಮೂಡಿಸಿದ ರಣಹದ್ದು ಹಾರಾಟ