ಭಟ್ಕಳ (Bhatkal): ತಾಲೂಕು ಎಲ್ಲಾ ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ತಾಲೂಕಿನ ಮರಳು ಸಮಸ್ಯೆಯನ್ನು (sand problem) ಶಾಶ್ವತವಾಗಿ ಪರಿಹರಿಸಬೇಕೆಂದು ಆಗ್ರಹಿಸಿ “ಬೃಹತ್ ಪ್ರತಿಭಟನಾ ಮೆರವಣಿಗೆ” ನ.೧೩ರಂದು ಬುಧವಾರ ಬೆಳಿಗ್ಗೆ ೯ ಗಂಟೆಗೆ ನಡೆಯಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮೆರವಣಿಗೆಯು ಭಟ್ಕಳ ಹಳೆ ಬಸ್ ನಿಲ್ದಾಣದ ಆಟೋ ಚಾಲಕರ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಮೈದಾನದಿಂದ ಮುಖ್ಯ ರಸ್ತೆ ಮಾರ್ಗವಾಗಿ ಸಂಶುದ್ದೀನ್ ಸರ್ಕಲ್ ಮೂಲಕ ತಾಲೂಕು ಆಡಳಿತ ಸೌಧಕ್ಕೆ ಸಾಗಿ ಸಹಾಯಕ ಆಯುಕ್ತರಿಗೆ ಮನವಿ ನೀಡಲಿದ್ದೇವೆ ಎಂದು ಭಟ್ಕಳ ಇಂಜಿನಿಯರ್ ಹಾಗೂ ಆರ್ಕಿಟೆಕ್ಚರ್ ಅಸೋಸಿಯೇಷನ್ ಕಾರ್ಯದರ್ಶಿ, ತಾಲೂಕಿನ ಎಲ್ಲಾ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಸುರೇಶ ಪೂಜಾರಿ ತಿಳಿಸಿದ್ದಾರೆ.
ಇದನ್ನೂ ಓದಿ : ಆಟೋರಿಕ್ಷಾದಿಂದ ಕೆಳಗೆ ಬಿದ್ದ ಬಾಲಕಗೆ ಗಾಯ
ಅವರು ಸೋಮವಾರದಂದು ಇಲ್ಲಿನ ಅಮೀನಾ ಪ್ಯಾಲೇಸ್ ಪಾರ್ಕಿಂಗ್ ಹಾಲ್ ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ಕಳೆದ ೬ ತಿಂಗಳಿನಿಂದ ಮರಳು ಸಮಸ್ಯೆಯಿಂದ (sand problem) ಸಾಕಷ್ಟು ಸಮಸ್ಯೆ ಆಗಿದೆ. ಈ ಹಿಂದೆ ನಮ್ಮ ಭಟ್ಕಳ ತಾಲೂಕು ಇಂಜಿನಿಯರ್ ಹಾಗೂ ಆರ್ಕಿಟೆಕ್ಚರ್ ಅಸೋಸಿಯೇಷನ್ ವತಿಯಿಂದ ಪತ್ರಿಕಾಗೋಷ್ಠಿ ಮಾಡಿದರೂ ಸರಕಾರದ ಮಟ್ಟದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ನಮ್ಮ ಪಕ್ಕದ ಜಿಲ್ಲೆ ಉಡುಪಿಯಲ್ಲಿ (udupi) ಮರಳಿನ ಕೆಲಸಕ್ಕೆ ತಯಾರಿಸಿ ನಡೆಸಲಾಗಿದೆ. ನಮ್ಮ ಜಿಲ್ಲೆಗೆ ಮರಳು ಬಾರದೇ ಇರಲು ಸಮಸ್ಯೆಗಳೇನು ಎನ್ನುವುದು ಸರಕಾರ ಮತ್ತು ಸಚಿವರು ಗಮನ ಹರಿಸಬೇಕಿದೆ ಎಂದರು.
ವಿಡಿಯೋ ಸಹಿತ ಇದನ್ನೂ ಓದಿ : ಭಟ್ಕಳ ಪೊಲೀಸರ ಮತ್ತೊಂದು ಕ್ಷಿಪ್ರ ಕಾರ್ಯಾಚರಣೆ
ತಾಲೂಕಿನಲ್ಲಿ ತಲೆತಲಾಂತರದಿಂದ ಸರ್ಕಾರದ ನೀತಿಯಂತೆ ಜಿಲ್ಲೆಯ ಹಾಗೂ ತಾಲೂಕಿನ ಅಧಿಕಾರಿಗಳ ಮಾರ್ಗದರ್ಶನ ಮುಖೇನ ನಡೆಯುತ್ತಿರುವ ಮರಳುಗಾರಿಕೆ ಒಂದೇ ಸಮನೆ ನಿಂತಿದೆ. ಕಟ್ಟಡ ನಿರ್ಮಾಣ ಕಾಮಗಾರಿಯನ್ನೇ ಜೀವನ ನಿರ್ವಹಣೆಯ ಕಾಯಕವನ್ನಾಗಿಸಿಕೊಂಡಿರುವ ಅಂದಾಜು ೩೦ ಸಾವಿರ ಕುಟುಂಬಗಳು ಮತ್ತು ಸರಿಸುಮಾರು ೮೦ ಸಾವಿರ ಜನರ ಜೀವನ ಅಸ್ತವ್ಯಸ್ತವಾಗಿದೆ ಎಂದರು.
ಇದನ್ನೂ ಓದಿ : ಕೆರೆಗೆ ಹಾರಿ ಸೊರಬದ ಯುವತಿ ಆತ್ಮಹತ್ಯೆ
ಭಟ್ಕಳ ಸೆಂಟ್ರಿಂಗ್ ಸಂಘದ ಸಹ ಕಾರ್ಯದರ್ಶಿ ರಾಮ ಹೆಬಳೆ ಮಾತನಾಡಿ, ‘ ಈ ಹಿಂದೆ ಜಿಲ್ಲಾಧಿಕಾರಿಗಳಿಗೆ, ಉಸ್ತುವಾರಿ ಸಚಿವರಿಗೆ ಮನವಿ ನೀಡಿದ್ದೇವೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ, ಸ್ಪಂದನೆ ಸಿಕ್ಕಿಲ್ಲ. ಫರ್ನಿಚರ ಅಸೋಸಿಯೇಷನ್ ಸಂಘ ಜೊತೆಗೆ ತಾಲೂಕಿನ ಎಲ್ಲಾ ಕಟ್ಟಡ ಸಂಬಂಧಿತ ಎಲ್ಲಾ ಸಂಘಟನೆಗಳು ಸಹ ಈ ಪ್ರತಿಭಟನೆಗೆ ಸಹ ಬೆಂಬಲ ಸೂಚಿಸಿವೆ. ಸಹಾಯಕ ಆಯುಕ್ತರ ಮೂಲಕ ಮನವಿ ಸಲ್ಲಿಸಿ ಮರಳಿಗೆ ಶಾಶ್ವತ ಪರಿಹಾರದ ಬೇಡಿಕೆ ಮತ್ತು ಮನವರಿಕೆ ಮಾಡಲಿದ್ದೇವೆ ಎಂದರು.
ಇದನ್ನೂ ಓದಿ : ಜಗತ್ತಿನ ಅತ್ಯಂತ ಕಿರಿಯ ಫಿಡೆ ಶ್ರೇಯಾಂಕಿತ ಚೆಸ್ ಆಟಗಾರ
ಭಟ್ಕಳ ಕಟ್ಟಡ ಕೂಲಿ ಕಾರ್ಮಿಕ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ ಹೆಬಳೆ ಮಾತನಾಡಿ, ಸದ್ಯಕ್ಕೆ ಚಿಂತಾಜನಕ ಸ್ಥಿತಿಯಲ್ಲಿ ಕಾರ್ಮಿಕರಿದ್ದೇವೆ. ಕಾರ್ಮಿಕ ಇಲಾಖೆಗೂ ಸಹ ಮನವಿ ಪತ್ರ ಕಳುಹಿಸಿದ್ದೇವೆ. ಆದರೆ ಸರಕಾರದ ಮಟ್ಟದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಪ್ರತಿಭಟನೆ ಕೇವಲ ಸಾಂಕೇತಿಕವಾಗಿದ್ದು ಮುಂದೆ ಕಾರ್ಮಿಕರ ಆತ್ಮಹತ್ಯೆಯೊಂದೇ ಕೊನೆಯ ದಾರಿಯಾಗಲಿದೆ ಎಂದರು.
ವಿಡಿಯೋ ಸಹಿತ ಇದನ್ನೂ ಓದಿ : ಆತಂಕ ಮೂಡಿಸಿದ ರಣಹದ್ದು ಹಾರಾಟ
ಕೆಲ ದಿನದ ಹಿಂದೆ ಮರಳಿನ ಲಭ್ಯತೆಯ ಬಗ್ಗೆ ಫೇಕ್ ಸುದ್ದಿ ಹರಡಿಸಿದ್ದಾರೆ. ಇದರಲ್ಲಿ ಕೆಲವೊಂದು ಜನರಿಂದ ನಮ್ಮ ಹೋರಾಟದ ದಿಕ್ಕು ತಪ್ಪಿಸುವ ವಿಚಾರದಲ್ಲಿ ನಡೆಯುತ್ತಿದೆ. ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಹುನ್ನಾರ ಸಹ ನಡೆಸುತ್ತಿದ್ದಾರೆ. ಈ ಕುರಿತು ಸಚಿವರಲ್ಲಿ ಮನವಿ ನೀಡಿದ್ದು ಈ ಪ್ರಕರಣ ನ್ಯಾಯಾಲಯದಲ್ಲಿದೆ. ಇದಾದ ಬಳಿಕ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಇಲ್ಲಿಯ ತನಕ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.
ವಿಡಿಯೋ ಸಹಿತ ಇದನ್ನೂ ಓದಿ : ಭಟ್ಕಳ ಪೊಲೀಸರ ಭರ್ಜರಿ ಕಾರ್ಯಾಚರಣೆ
ಭಟ್ಕಳ ಇಂಜಿನಿಯರ್ ಹಾಗೂ ಆರ್ಕಿಟೆಕ್ಚರ್ ಅಸೋಸಿಯೇಷನ್ ಸದಸ್ಯ ಮಿಸ್ಬ ಉಲ್ ಹಕ್ ಮಾತನಾಡಿ, ಕಳೆದ ಆರು ತಿಂಗಳುಗಳ ಕಾಲ ಎಲ್ಲಾ ಕಾರ್ಮಿಕರು ತುಂಬಾ ನಷ್ಟ ಅನುಭವಿಸಿದ್ದಾರೆ. ಇದನ್ನು ಸರಿದೂಗಿಸಲು ಯಾರಿಂದಲೂ ಕೂಡ ಸಾಧ್ಯವಿಲ್ಲ. ಆದರೂ ಅಲ್ಪ ಪ್ರಮಾಣದಲ್ಲದರೂ ರಾಜ್ಯ ಸರ್ಕಾರ ನಷ್ಟ ಪರಿಹಾರವನ್ನು ನೀಡಿ ಎಲ್ಲಾ ಕಾರ್ಮಿಕ ವರ್ಗದವರಿಗೆ ವಿಶೇಷ ಪ್ಯಾಕೇಜ್ ಬಿಡುಗಡೆಗೆ ಜಿಲ್ಲಾ ಉಸ್ತುವಾರಿ ಸಚಿವರು ಸರಕಾರದ ಗಮನಕ್ಕೆ ತರಬೇಕೆಂಬ ಆಗ್ರಹ ಕಾರ್ಮಿಕರ ಸಂಘಟನೆಗಳ ಒಕ್ಕೂಟದ ಆಗ್ರಹವಾಗಿದೆ ಎಂದರು.
ವಿಡಿಯೋ ಸಹಿತ ಇದನ್ನೂ ಓದಿ : ತರಕಾರಿಗೆ ಉಗುಳಿದ ವ್ಯಾಪಾರಿ ಬಂಧನ
ಈ ಸಂದರ್ಭದಲ್ಲಿ ಭಟ್ಕಳ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ಅಶೋಸಿಯೇಶನ್ ಸಂಘದ ಅಧ್ಯಕ್ಷ ನಾಗೇಂದ್ರ ನಾಯ್ಕ, ಭಟ್ಕಳ ಸೆಂಟ್ರಿಂಗ್ ಸಂಘದ ಅಧ್ಯಕ್ಷ ಲೋಕೇಶ ನಾಯ್ಕ, ಕಾರ್ಯದರ್ಶಿ ಶಿವರಾಮ ನಾಯ್ಕ, ಭಟ್ಕಳ ಕಟ್ಟಡ ಕೂಲಿ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಶ್ರೀಧರ ನಾಯ್ಕ ಚೌಥನಿ, ಭಟ್ಕಳ ಕಟ್ಟಡ ಕೂಲಿ ಪೇಂಟಿಂಗ್ ಸಂಘದ ರಾಮ ನಾಯ್ಕ, ಮಂಜುನಾಥ ಗೊಂಡ, ಭಟ್ಕಳ ಟಿಪ್ಪರ್ ಮಾಲಕರ ಸಂಘದ ಅಜೀಜ್, ಮುಂತಾದವರು ಇದ್ದರು.
ಇದನ್ನೂ ಓದಿ : ಅಪರಿಚಿತಗೆ ಎಟಿಎಂ ಕಾರ್ಡ್ ಕೊಟ್ಟು ಮೋಸ ಹೋದರು !