ಭಟ್ಕಳ (Bhatkal): ಆಟೋ ನಿಲ್ದಾಣವನ್ನು  (auto stand)ಅಧಿಕೃತ ಮಾಡುವುದರ ಜೊತೆಗೆ ಇನ್ನು ಮುಂದೆ ಹೊಸ ಆಟೋಗೆ ಪರ್ಮಿಟ್ (auto permit) ಕೊಡುವುದನ್ನು ಸ್ಥಗಿತಗೊಳಿಸುವಂತೆ ಭಟ್ಕಳ ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ಹೊನ್ನಾವರದ (Honavar) ಎಆರ್‌ಟಿಓ (ARTO) ಅಧಿಕಾರಿಗೆ ಮಂಗಳವಾರದಂದು ಮನವಿ (requisition) ಸಲ್ಲಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ಪಟ್ಟಣದಲ್ಲಿ ೧೫೦೦ ಆಟೋ ರಿಕ್ಷಾಗಳಿವೆ. ಪಟ್ಟಣದಲ್ಲಿ ವಿವಿಧ ಕಡೆಗಳಲ್ಲಿ ೩೨ಕ್ಕೂ ಹೆಚ್ಚು ನಿಲ್ಲುವ ಸ್ಥಳಗಳಿವೆ. ಆಟೋ ನಿಲ್ದಾಣವನ್ನು ಒಮ್ಮೆ ಪರಿಶೀಲಿಸಿ ಅಧಿಕೃತಗೊಳಿಸಿದರೆ ನಮಗೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ :  ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ, ದಾಖಲೆ ಪರಿಶೀಲನೆ

ಭಟ್ಕಳ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಆಟೋಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಟೋ ನಿಲ್ಲಿಸಲು ಸ್ಥಳವಕಾಶದ ಕೊರತೆ ಇದೆ. ಈಗಾಗಲೇ ಬಾಡಿಗೆ ಇಲ್ಲದೆ ಆಟೋ ಚಾಲಕರು ಕಂಗಾಲಾಗಿದ್ದಾರೆ. ಹೆಚ್ಚಿನ ಆಟೋ ಚಾಲಕರು ಆಟೋ ಬಾಡಿಗೆಯನ್ನೇ ನಂಬಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೊಸ ಆಟೋಗೆ ಪರ್ಮಿಟ ನೀಡಿದರೆ ಈಗ ಇರುವ ಆಟೋ ಚಾಲಕರಿಗೆ ತೊಂದರೆ ಆಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಉತ್ತರ ಕನ್ನಡ ಸಹಿತ ಹಲವೆಡೆ ಭಾರೀ ಮಳೆ ಎಚ್ಚರಿಕೆ

ಭಟ್ಕಳದ ಸಮಸ್ತ ಆಟೋ ಚಾಲಕರ ಹಿತದೃಷ್ಟಿಯಿಂದ ಭಟ್ಕಳ ಪಟ್ಟಣದಲ್ಲಿ ಹೊಸ ಆಟೋಗೆ ಪರ್ಮಿಟ್ ನೀಡುವುದನ್ನು ಕೆಲವು ವರ್ಷ ಸ್ಥಗಿತಗೊಳಿಸುವುದು ಅಗತ್ಯವಿದೆ. ಪಟ್ಟಣದಲ್ಲಿ ಸರಿಯಾಗಿ ಆಟೋ ಕ್ಯೂಗೆ ಸ್ಥಳವಕಾಶ ಸಿಕ್ಕ ನಂತರದಲ್ಲಿ ಹೊಸ ಪರ್ಮಿಟ್‌ಗೆ ಅವಕಾಶ ಕೊಟ್ಟರೆ ತೊಂದರೆ ಇಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಬಂದೂಕಿನಿಂದ ಗುಂಡು ಹಾರಿ ಸಿಐಎಸ್‌ಎಫ್‌ ಸಿಬ್ಬಂದಿ ಸಾವು

ಇದೇ ವೇಳೆ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ಐ.ಆರ್.ಬಿ. (IRB) ಅಧಿಕಾರಿಗಳಿಗೂ ಮನವಿ ನೀಡಲಾಗಿದೆ. ಭಟ್ಕಳ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ (national highway) ಸನಿಹದಲ್ಲಿ ಆಟೋ ರಿಕ್ಷಾ ನಿಲ್ಲಿಸುವ ಸ್ಥಳ ಇದ್ದು, ಇದನ್ನು ಅಧಿಕೃತಗೊಳಿಸಿ ಆಟೋ ಚಾಲಕರಿಗೆ ಸಮರ್ಪಕ ವ್ಯವಸ್ಥೆ ಮಾಡಿಕೊಡುವುವಂತೆ ಮನವಿ ನೀಡಲಾಗಿದೆ.

ಇದನ್ನೂ ಓದಿ :  ಎಚ್ಚರ ತಪ್ಪಿ ಬಿದ್ದ ಯುವತಿ ಸಾವು

ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಶ್ರೀನಿವಾಸ ನಾಯ್ಕ, ದಾಸ ನಾಯ್ಕ, ಪ್ರಧಾನ ಕಾರ್ಯದರ್ಶಿ ಮಾದೇವ ನಾಯ್ಕ, ರಾಜು ನಾಯ್ಕ, ಮಂಜು ನಾಯ್ಕ, ನಾಗೇಂದ್ರ ದೇವಾಡಿಗ, ಕೃಷ್ಣ ಶಿರಾಲಿ, ಸುಲೇಮಾನ ಮತ್ತಿತರರು ಇದ್ದರು.

ಇದನ್ನೂ ಓದಿ : ನ.೧೩ರಂದು ಭಟ್ಕಳದಲ್ಲಿ ಬೃಹತ್ ಪ್ರತಿಭಟನೆ