ದಾಂಡೇಲಿ (Dandeli) : ಬಿಸಿಎಂ ವಸತಿ ನಿಲಯದಲ್ಲಿದ್ದ (BCM hostel) ಹುಬ್ಬಳ್ಳಿ ಮೂಲದ ವಿದ್ಯಾರ್ಥಿಯೊಬ್ಬ ಅನಾರೋಗ್ಯದಿಂದ ಮೃತಪಟ್ಟ ಘಟನೆ ದಾಂಡೇಲಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನಗರದ ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿ (BCM Hostel) ಈ ಘಟನೆ ನಡೆದಿದೆ. ನಗರದ ಜಿಟಿಟಿಸಿ ಕಾಲೇಜು ವಿದ್ಯಾರ್ಥಿ ಹುಬ್ಬಳ್ಳಿಯ (Hubballi) ಅನೀಶ್ ಬಿ.ಗಾಣಿಗೇರ ಮೃತ ದುರ್ದೈವಿ. ಈತ ಅಂಬೇವಾಡಿಯ ಜಿಟಿಟಿಸಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದ. ಹಲವು ದಿನಗಳಿಂದ ಈತ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ : ಉತ್ತರ ಕನ್ನಡ ಸಹಿತ ಹಲವೆಡೆ ಭಾರೀ ಮಳೆ ಎಚ್ಚರಿಕೆ

ಮಂಗಳವಾರ ಬೆಳಿಗ್ಗೆ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಲೇಜಿಗೆ ಹೋಗದೆ ವಸತಿ ನಿಲಯದಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದನು. ತೀವ್ರ ಅನಾರೋಗ್ಯಗೊಂಡಿದ್ದ ಈತನನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಷ್ಟರೊಳಗೆ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ, ದಾಖಲೆ ಪರಿಶೀಲನೆ