ಕಾರವಾರ (Karwar): ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ/ ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆಯ (GP Election) ಮತದಾನ ನ.೨೩ರಂದು ನಡೆಯಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮತದಾನ ಸುಸೂತ್ರವಾಗಿ ನಡೆಯಲು ಹಾಗೂ ಮತದಾನದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಹಾಗೂ ಮುಕ್ತ ಮತ್ತು ನ್ಯಾಯೋಚಿತ ಚುನಾವಣೆಯನ್ನು ನಡೆಸುವುದಕ್ಕಾಗಿ ಮತದಾನ (voting) ನಡೆಯಲಿರುವ ಜಿಲ್ಲೆಯ ೧೫ ಗ್ರಾಮ ಪಂಚಾಯತಗಳಲ್ಲಿ (GP election) ಅಂದು ಸಂತೆ ಮತ್ತು ಜಾತ್ರೆ ನಿಷೇಧಿಸಲಾಗಿದೆ.
ಇದನ್ನೂ ಓದಿ : ಭಟ್ಕಳ ಸಹಿತ ೭ ತಾಲೂಕುಗಳಲ್ಲಿ ನೋಂದಣಿ ಕೇಂದ್ರ ಸ್ಥಾಪನೆ
ಕಾರವಾರ (Karwar) ತಾಲೂಕಿನ ಚಿತ್ತಾಕುಲಾ, ಅಂಕೋಲಾ (Ankola) ತಾಲೂಕಿನ ಸಗಡಗೇರಿ, ಕುಮಟಾ (Kumta) ತಾಲೂಕಿನ ಹನೇಹಳ್ಳಿ, ಬರ್ಗಿ, ಹೊನ್ನಾವರ (Honnavar) ತಾಲೂಕಿನ ಮಾಗೋಡು, ಭಟ್ಕಳ (Bhatkal) ತಾಲೂಕಿನ ಶಿರಾಲಿ, ಶಿರಸಿ (Sirsi) ತಾಲೂಕಿನ ಬಿಸಲಕೊಪ್ಪ, ಹುತ್ತಗಾರ, ಸಿದ್ದಾಪುರ (Siddapur) ತಾಲೂಕಿನ ದೊಡ್ಮನೆ, ಮುಂಡಗೋಡ (Mundgod) ತಾಲೂಕಿನ ಹುನಗುಂದ, ಹಳಿಯಾಳ (Haliyal) ತಾಲೂಕಿನ ಬೆಳವಟಗಿ, ಜನಗಾ, ಅರ್ಲವಾಡ, ದಾಂಡೇಲಿ (Dandeli) ತಾಲೂಕಿನ ಅಂಬಿಕಾನಗರ ಮತ್ತು ಜೋಯಿಡಾ (Joida) ತಾಲೂಕಿನ ಕಾತೇಲಿ (ಕುಂಬಾರವಾಡ) ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನ.೨೩ ರಂದು ಸಂತೆ, ಜಾತ್ರೆ ಇತರೆ ಎಲ್ಲ ಜನಸಂದಣಿಯನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಕೆ.ಲಕ್ಷೀಪ್ರಿಯಾ ಆದೇಶಿದ್ದಾರೆ.
ಇದನ್ನೂ ಓದಿ : ಪ್ರಾಂಶುಪಾಲರಾಗಿ ಮರುನೇಮಕಕ್ಕೆ ಆದೇಶ