ಬೆಳಗಾವಿ : ನಗರದ ಕಾಹೇರನ ಶತಮಾನೋತ್ಸವ ಸಭಾಂಗಣದಲ್ಲಿ ಕೆ ಎಲ್ ಇ ಔಷಧ ವಿಜ್ಞಾನ ವಿದ್ಯಾಲಯದ ಫಾರ್ಮಾಸ್ಯುಟಿಕ್ಸ್ ವಿಭಾಗವು ‘3-ಡಿ ಪ್ರಿಂಟಿಂಗ್ ಇನ್ ಫಾರ್ಮಸಿಯುಟಿಕಲ್ ರಿಸರ್ಚ್ ಆಂಡ್ ಡೆವಲಪ್ಮೆಂಟ್’’ ಎಂಬ ವಿಷಯದ ಕುರಿತು ಎರಡು ದಿನಗಳ ಕಾರ್ಯಗಾರ ಆರಂಭವಾಗಿದೆ.

ಇದನ್ನೂ ಓದಿ : ಗಮನಸೆಳೆದ ‘ಅಧಿನಿಯಮ್ ದರ್ಶನ್’ ಕಾನೂನು ಪ್ರದರ್ಶನ
ಕಾರ್ಯಕ್ರಮವನ್ನು ಕರ್ನಾಟಕ ಔಷಧ ನಿಯಂತ್ರಣ ಇಲಾಖೆಯ ಔಷಧ ಅಧಿಕಾರಿ ದಯಾನಂದ ಕಾಡುದೇವರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಭವಿಷ್ಯದಲ್ಲಿ ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಅವಶ್ಯವಿರುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಒಳಗೊಂಡ ತಂತ್ರಜ್ಞಾನ, 3D ನೆರವಿನ ರೊಬೊಟಿಕ್ಸ್ ತಂತ್ರಜ್ಞಾನ, 3D ಬಯೋಪ್ರಿಂಟಿಂಗ್ ಅಪ್ಲಿಕೇಶನ್ ಗಳ ಕುರಿತು ವಿವರಿಸಿದರು.

ಇದನ್ನೂ ಓದಿ : ಬೆಳಗಾವಿ ರಾಮಕೃಷ್ಣ ಮಿಶನ್ ಆಶ್ರಮದ ವಿಶ್ವಭಾವೈಕ್ಯ ಮಂದಿರದ ವಾರ್ಷಿಕೋತ್ಸವ : ಆಧ್ಯಾತ್ಮಿಕ ಸಮ್ಮೇಳನ, ಗೀತ ರಾಮಾಯಣ ಸಂಪನ್ನ
ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಂ ಎಸ್ ಗಣಾಚಾರಿ ಮಾತನಾಡಿ, ಪ್ರಸ್ತುತ ವಿದ್ಯಮಾನದಲ್ಲಿ ರೋಗ ಚಿಕಿತ್ಸೆಯಲ್ಲಿ ಬಳಕೆಯಾಗುತ್ತಿರುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, 3D ಪ್ರಿಂಟಿಂಗ್ ನ ಮಹತ್ವದ ಕುರಿತು ವಿವರಿಸಿದರು. ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆ ಹಾಗು ನಾವಿನ್ಯತೆಯನ್ನು ಉತ್ತೇಜಿಸಲು ವಿಶ್ವವಿದ್ಯಾಲಯ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಇದನ್ನೂ ಓದಿ : ವಿದುಷಿ ಪಲ್ಲವಿಗೆ ಗಂಧರ್ವದ “ಅಲಂಕಾರ”
ನಂತರ ಮಾತನಾಡಿದ ಪ್ರಾಂಶುಪಾಲ ಡಾ. ಸುನೀಲ. ಜಲಾಲಪುರೆ, ಔಷಧ ಸಂಶೋಧನಾ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವಲ್ಲಿ 3D ಪ್ರಿಂಟಿಂಗ್ ತಂತ್ರಜ್ಞಾನದ ಪ್ರಮುಖ್ಯತೆ ಮತ್ತುಈ ನಿಟ್ಟಿನಲ್ಲಿ ಅದರ ತರಬೇತಿಯ ಅವಶ್ಯಕತೆಯ ಕುರಿತು ವಿವರಿಸಿದರು.
ಉಪ-ಪ್ರಾಂಶುಪಾಲ ಡಾ. ಎಂ ಬಿ ಪಾಟೀಲ, ಫಾರ್ಮಾಸ್ಯುಟಿಕ್ಸ್ ವಿಭಾಗ ಮುಖ್ಯಸ್ಥ ಡಾ. ಪಿ ಎಂ ದಂಡಗಿ, ಅಧ್ಯಾಪಕರು ಹಾಗೂ ಬೆಂಗಳೂರಿನ ಅಲ್ಟೆಮ್ (ALTEM) ಟೆಕ್ನಾಲಜಿಸ್ ನ ತಜ್ಞರು ಉಪಸ್ಥಿತರಿದ್ದರು.

ಇದನ್ನೂ ಓದಿ : ಔಷಧಿ ಅಂಗಡಿಗೆ ನುಗ್ಗಿ ಕಳ್ಳತನ
ಫಾರ್ಮಾಸ್ಯುಟಿಕ್ಸ್ ವಿಭಾಗ ಮುಖ್ಯಸ್ಥ ಡಾ. ಪಿ ಎಂ ದಂಡಗಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ರವಿಕಿರಣ ಕಣಬರ್ಗಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸಹ ಪ್ರಾಧ್ಯಾಪಕಿ ಅರ್ಚನಾ ಪಾಟೀಲ ವಂದಿಸಿದರು
ಕಾರ್ಯಗಾರದ ಮೊದಲನೆಯ ದಿನದಂದು ಅಲ್ಟೆಮ್ ಟೆಕ್ನಾಲಜಿಸ್ ನ ಅಪ್ಲಿಕೇಶನ್ ಸ್ಪೆಷಲಿಸ್ಟ್ ಮಾರಿಯ ಸಿಮ್ರಾನ 3D ಬಯೋಪ್ರಿಂಟರ್ ಕಾರ್ಯಶೈಲಿ, ಕಾರ್ಯವಿಧಾನದಲ್ಲಿನ ವಿವಿಧ ಹಂತಗಳು ಹಾಗೂ ಸಂಶೋಧನಾ ಕ್ಷೇತ್ರದಲ್ಲಿನ ಅದರ ಅನ್ವಯಗಳು ಕುರಿತು ವಿವರಿಸಿದ್ದಾರೆ. ಇಂದಿನ ಎರಡನೆಯ ದಿನದ ಕಾರ್ಯಗಾರದಲ್ಲಿ ಅಲ್ಟೆಮ್ ಟೆಕ್ನಾಲಜಿಸ್ ನ ಅಪ್ಲಿಕೇಶನ್ ಸೈಂಟಿಸ್ಟ್ ಡಾ. ಸಾಕ್ಷಿ ಭಾರದ್ವಾಜ 3D ಪ್ರಿಂಟಿಂಗ್ ನ ಹಲವಾರು ಸಾಫ್ಟ್ ವೇರ್ ಗಳ ಬಳಕೆಯ ಕುರಿತು ತರಬೇತಿ ನೀಡಲಿದ್ದಾರೆ.
ಕರ್ನಾಟಕದಾದ್ಯಂತದ ಫಾರ್ಮಸಿ ಕಾಲೇಜುಗಳ, ಬೋಧಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 130 ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಈ ವಿಡಿಯೋ ನೋಡಿ : https://fb.watch/qmwNsP-Hab/?mibextid=Nif5oz