ಭಟ್ಕಳ (Bhatkal) : ಭಟ್ಕಳದಿಂದ ಹೊನ್ನಾವರದ (Honavar) ತನಕ ನನ್ನ ಅಭಿವೃದ್ಧಿ ಕೆಲಸ ಜನರ ಮುಂದಿಡಲಿದ್ದೇನೆ. ಬೇಕಾಬಿಟ್ಟಿ ಮಾತನಾಡುವವರಿಗೆ ನನ್ನ ಸವಾಲು. ನಿಮ್ಮ ಅಭಿವೃದ್ಧಿ ಕೆಲಸವನ್ನು ಜನರಿಗೆ ತೋರಿಸಿರಿ. ಹೀಗೆಂದು ಆಕ್ರೋಶಭರಿತರಾಗಿ ಸಚಿವ ಮಂಕಾಳ ವೈದ್ಯ (Mankal Vaidya) ಸವಾಲೆಸೆದಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
೫ ವರ್ಷ ಮಾಡಿದ ಕೆಲಸ ಏನು ಎಂದು ಅವರು ತೋರಿಸಲಿ. ಮಾನ ಮರ್ಯಾದೆ ಇದ್ದಲ್ಲಿ ಬಾಯಿ ಮುಚ್ಚಿ ಇರಬೇಕು. ಇಲ್ಲವಾದರೆ ಜನರಿಂದಲೇ ನಾಚಿಕೆ ಕಳೆದುಕೊಳ್ಳಲಿದ್ದಾರೆ. ರಸ್ತೆಯಲ್ಲಿ, ಪತ್ರಿಕೆಯಲ್ಲಿ ಬೊಬ್ಬಿರಿಯುವುದಲ್ಲ. ಅವರ ಅವಧಿಯಲ್ಲಿ ಮಾಡಿದ ಕೆಲಸ ಏನು ಎನ್ನುವುದು ಜನರ ಮುಂದಿಡಬೇಕು ಎಂದು ಮಾಜಿ ಶಾಸಕ ಸುನೀಲ ನಾಯ್ಕ ವಿರುದ್ಧ ಅವರ ಹೆಸರೇಳದೆ ಸಚಿವ ಮಂಕಾಳ ವೈದ್ಯ ವಾಗ್ದಾಳಿ ನಡೆಸಿದರು.
ವಿಡಿಯೋ ಸಹಿತ ಇದನ್ನೂ ಓದಿ : ಬೇಕಾಬಿಟ್ಟಿ ಕಾರು ಚಲಾಯಿಸಿದವನಿಗೆ ಬಿತ್ತು ದಂಡ!
ಇಲ್ಲಿನ ಮಾರುಕೇರಿ ಗ್ರಾಮ ಪಂಚಾಯತನಲ್ಲಿ ೫ನೇ ಜನಸ್ಪಂದನಾ ಸಭೆ ಹಾಗೂ ಜನರ ಬಳಿಗೆ ಸಚಿವ ಮಂಕಾಳ ವೈದ್ಯರ ನಡೆ ಕಾರ್ಯಕ್ರಮ ನಿನ್ನೆ ಮಂಗಳವಾರ ನಡೆದಿತ್ತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಮಂಕಾಳ ವೈದ್ಯ, ಮಾಜಿ ಶಾಸಕ ಸುನೀಲ ನಾಯ್ಕ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದರು.
ವಿಡಿಯೋ ಸಹಿತ ಇದನ್ನೂ ಓದಿ : ಭಟ್ಕಳದಲ್ಲಿ ಭೀಕರ ಅಪಘಾತ; ಟ್ರಾಫಿಕ್ ಜಾಮ್
ತಾಲೂಕಿನಲ್ಲಿ ಒಟ್ಟು ೧೨೫ ಕಿ.ಮೀ. ರಸ್ತೆ ಕ್ಷೇತ್ರದಲ್ಲಿ ಮಾಡಲೇಬೇಕಾದ ಪರಿಸ್ಥಿತಿ ಎದುರಿಗಿದೆ. ೧೫೦೦ ಕೋಟಿ ರೂ. ಶಾಸಕನಾಗಿದ್ದ ವೇಳೆ ಸರಕಾರದಿಂದ ಅನುದಾನ ತಂದಿದ್ದೇನೆ. ಈಗ ಸಚಿವನಾದ ಮೇಲೆ ಅದಕ್ಕಿಂತಲೂ ಹೆಚ್ಚಿನ ಅನುದಾನ ತರಲೇಬೇಕಾದ ನಿರೀಕ್ಷೆ ಜನರಲ್ಲಿದೆ. ಜನರ ನಿರೀಕ್ಷೆಯಂತೆ ಕೆಲಸ ಮಾಡಬೇಕು ಹೊರತು ಭಾಷಣ ಮಾಡುವುದಲ್ಲ ಎಂದರು.
ಇದನ್ನೂ ಓದಿ : ಜನಸ್ಪಂದನ ಕಾರ್ಯಕ್ರಮದಲ್ಲಿ ಸಮಸ್ಯೆಗಳ ಸುರಿಮಳೆ
ಸಾಗರ ರಸ್ತೆಯಲ್ಲಿ ಸದ್ಯ 200 ಕೆವಿ. ವಿದ್ಯುತ್ ಘಟಕ ನಿರ್ಮಾಣ ಕೆಲಸ ನಡೆಯುತ್ತಿದೆ. ಜನವರಿ – ಫೆಬ್ರವರಿ ಬಳಿಕ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಭಟ್ಕಳ ಬ್ಲಾಕ್ ಅಧ್ಯಕ್ಷ ವೆಂಕಟೇಶ ನಾಯ್ಕ, ಗ್ರಾಮ ಹಿರಿಯ ಶ್ರೀಕಂಠ ಹೆಬ್ಬಾರ, ಮಾರುಕೇರಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಎಂ.ಡಿ. ನಾಯ್ಕ ಸಚಿವ ಮಂಕಾಳ ವೈದ್ಯರ (Mankal Vaidya) ಕಾರ್ಯವೈಖರಿ ಶ್ಲಾಘಿಸಿದರು.
ಇದನ್ನೂ ಓದಿ : ಗ್ರಾಪಂ ಮಟ್ಟದಲ್ಲೂ ವಸತಿಗೃಹ ನಿರ್ಮಾಣ
ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ರಾಜು ನಾಯ್ಕ, ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಜನಾರ್ದನ ದೇವಾಡಿಗ, ಮಾರುಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗವೇಣಿ ಗೊಂಡ, ಸದಸ್ಯೆ ಸುಧಾ ಹೆಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಶಿರಾಲಿ ಸಹಿತ ೧೫ ಗ್ರಾಪಂಗಳಲ್ಲಿ ಸಂತೆ, ಜಾತ್ರೆ ನಿಷೇಧ