ಭಟ್ಕಳ (Bhatkal) : ತಾಲೂಕಿನ ಮಾರುಕೇರಿಯಲ್ಲಿ ನಡೆದ ಜನಸ್ಪಂದನ (Janaspandana) ಸಭೆಯಲ್ಲಿ ಉಪ ಮುಖ್ಯಮಂತ್ರಿ (DCM) ಡಿ.ಕೆ.ಶಿವಕುಮಾರ (DK Shivakumar) ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ (Mankal Vaidya) ಹಾಡಿ ಹೊಗಳಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನನಗೆ ಅಭಿವೃದ್ಧಿ ಎಂದರೆ ನಮ್ಮ ಉಪಮುಖ್ಯಮಂತ್ರಿ ಡಿಕೆಶಿ (DK Shivakumar) ಅವರು ನೆನಪಾಗುತ್ತಾರೆ. ಕಾರಣ ಜನಸಾಮಾನ್ಯರ ಅನುಕೂಲ ಅವರ ಮೂಲ ಮಂತ್ರ ಎಂದಿದ್ದಾರೆ.

ಇದನ್ನೂ ಓದಿ : ಹೆಸರೇಳದೆ ಸುನೀಲ ನಾಯ್ಕ ವಿರುದ್ಧ ಮಂಕಾಳ ವೈದ್ಯ ವಾಗ್ದಾಳಿ

ಬದುಕಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ರಾಜ್ಯದ ಜನರನ್ನು ರಾಜ್ಯ ಬಿಜೆಪಿ (BJP) ಮತ್ತು ಕೇಂದ್ರದಲ್ಲಿ ೧೧ ವರ್ಷ ಜನರನ್ನು ದುಸ್ಥಿತಿಗೆ ತಲುಪಿಸಿದ್ದಾರೆ. ಈ ಕಾರಣದಿಂದ ನಮ್ಮ (congress) ಸರಕಾರ ಬಂದ ಮೇಲೆ ಅವರಿಗೆ ಗ್ಯಾರಂಟಿ ಯೋಜನೆಗಳ ಮೂಲ ಆಧಾರವಾಗಿದ್ದೇವೆ ಎಂದರು.

ಇದನ್ನೂ ಓದಿ : ಜನಸ್ಪಂದನ ಕಾರ್ಯಕ್ರಮದಲ್ಲಿ ಸಮಸ್ಯೆಗಳ ಸುರಿಮಳೆ

ಇಷ್ಟು ದಿನಗಳ ಕಾಲ ಅಭಿವೃದ್ಧಿಯತ್ತ ಗಮನ ಹರಿಸಿಲ್ಲವಾಗಿತ್ತು. ಆದರೆ ಈಗಿನಿಂದ ಅಭಿವೃದ್ಧಿ ಕಾರ್ಯವನ್ನು ಆರಂಭಿಸಿದ್ದೇವೆ. ಕಾರಣ ಗ್ಯಾರಂಟಿ ಯೋಜನೆ ಜನರಿಗೆ ತಲುಪಲು ಸಮಯ ತೆಗೆದುಕೊಂಡಿದೆ. ಜನರ ಜೀವನ ಪರಿಸ್ಥಿತಿ ಈಗ ಸುಧಾರಿಸಿದೆ ಎಂದರು.

ವಿಡಿಯೋ ಸಹಿತ ಇದನ್ನೂ ಓದಿ : ಬೇಕಾಬಿಟ್ಟಿ ಕಾರು ಚಲಾಯಿಸಿದವನಿಗೆ ಬಿತ್ತು ದಂಡ!

“ಏರ್ಪೋರ್ಟ (Airport), ಬಿ.ಎಸ್‌.ಎನ್.ಎಲ್.(BSNL) ಸೇರಿದಂತೆ ಸಾಕಷ್ಟು ಸಾರ್ವಜನಿಕ ಸಂಸ್ಥೆಯನ್ನು ಖಾಸಗಿ ಅವರಿಗೆ ಮಾರಿದ್ದಾರೆ. ಬಿ.ಎಸ್.ಎನ್‌.ಎಲ್. ಸಂಸ್ಥೆಯಲ್ಲಿ ವರ್ಷಕ್ಕೆ ಸಾಕಷ್ಟು ಜನರಿಗೆ ಕೆಲಸ ಸಿಗುತ್ತಲಿತ್ತು. ಅವೆಲ್ಲವನ್ನು ಮಾರಿದ್ದರಿಂದ ಉದ್ಯೋಗ ಸಿಗದಂತಾಗಿದೆ ಎಂದರು.

ವಿಡಿಯೋ ಸಹಿತ ಇದನ್ನೂ ಓದಿ : ಭಟ್ಕಳದಲ್ಲಿ ಭೀಕರ ಅಪಘಾತ; ಟ್ರಾಫಿಕ್ ಜಾಮ್

ಕಳೆದ ೫ ವರ್ಷದ ಬಿಜೆಪಿ ಸರಕಾರದ ಅವಧಿಯಲ್ಲಿ ಸರಕಾರ ಜಾತಿ ಸರ್ಟಿಫಿಕೇಟ್ ನೀಡಿಲ್ಲ. ಅವರದ್ದು ಎಲ್ಲವೂ ಬಾಯಿಯಲ್ಲಿಯೇ ಹೊರತು ಅಭಿವೃದ್ಧಿ ಕೆಲಸ ಶೂನ್ಯ ಎಂದು ಮಂಕಾಳ ವೈದ್ಯ ಆರೋಪಿಸಿದರು.

ಇದನ್ನೂ ಓದಿ : ಗ್ರಾಪಂ ಮಟ್ಟದಲ್ಲೂ ವಸತಿಗೃಹ ನಿರ್ಮಾಣ