ಯಲ್ಲಾಪುರ (Yallapur) : ಬೆಳಗಾವಿಯಿಂದ (Belagavi) ಮಂಗಳೂರಿಗೆ (Mangaluru) ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ಯಲ್ಲಾಪುರ ಠಾಣೆ ಪೊಲೀಸರು ರಕ್ಷಿಸಿದ್ದಾರೆ (Police raid). ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ (case registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮೈಸೂರು (Mysuru) ಜಿಲ್ಲೆಯ ಪಿರಿಯಾಪಟ್ಟಣದ (Piriyapattana) ಸಲ್ಮಾನ ಮತ್ತು ಮುಕ್ರಂ ಪಾಷಾ ಸಯ್ಯದ್ ಅಮೀರ್ (೩೭) ಹಾಗೂ ವಾಹನ ಚಾಲಕ ಹಾಸನ (Hassan) ಜಿಲ್ಲೆಯ ಹೊಳೆನರಸೀಪುರದ ಗಣೇಶ ಕಾಳೆಗೌಡ (೪೯) ವಿರುದ್ಧ ಪ್ರಕರಣ (complaint) ದಾಖಲಾಗಿದೆ. ಪ್ರಮುಖ ಆರೋಪಿ ಸಲ್ಮಾನ್ ಸೂಚನೆಯಂತೆ ಇನ್ನಿಬ್ಬರು ಆರೋಪಿತರು ಜಾನುವಾರು ಸಾಗಾಟ ಮಾಡುತ್ತಿದ್ದಾಗ ಪೊಲೀಸರು ವಾಹನ ಸಮೇತ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಬಾವಿಯಲ್ಲಿ ಯುವಕನ ಶವ ಪತ್ತೆ
ಬೆಳಗಾವಿ ಜಿಲ್ಲೆಯ ಯಮಕನಮರಡಿಯಿಂದ (Yamakanamaradi) ಮಂಗಳೂರಿಗೆ ವಾಹನದ ಇಕ್ಕಟ್ಟಾದ ಬಾಡಿಯಲ್ಲಿ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ವಾಹನದಲ್ಲಿ ಜಾನುವಾರುಗಳನ್ನು ತುಂಬಿ, ಅವುಗಳನ್ನು ಹಗ್ಗದಿಂದ ಕಟ್ಟದೆ, ಮಲಗಲೂ ಸಾಧ್ಯವಾಗದ ರೀತಿಯಲ್ಲಿ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಕಲಘಟಗಿ (Kalaghatagi) ಕಡೆಯಿಂದ ಕಾರವಾರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಯಲ್ಲಾಪುರ ಪಟ್ಟಣದ ಜೋಡಕೆರೆ ಹತ್ತಿರ ಕಾರವಾರ (Karwar) -ಬಳ್ಳಾರಿ(Ballari) ರಾಷ್ಟ್ರೀಯ ಹೆದ್ದಾರಿ (National Highway) ೬೩ರಲ್ಲಿ ಪೊಲೀಸರು ದಾಳಿ (Police raid) ಮಾಡಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆ ಪಿಎಸೈ ಸಿದ್ದಪ್ಪ ಗುಡಿ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಅಂತಿಮ ಪಂದ್ಯದಲ್ಲಿ ಎಸ್.ಎಸ್.ಎಸ್. ಸ್ಪೋರ್ಟ್ಸ್‌ಗೆ ಸೋಲು