ಶಿವಮೊಗ್ಗ(Shivamogga) : ಶರಾವತಿ (Sharavati) ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು ಮೃತಪಟ್ಟ ಘಟನೆ ಸಾಗರ (Sagar) ತಾಲೂಕಿನ ಸಿಗಂದೂರು (Sigandur) ಸಮೀಪದ ಕಳಸವಳ್ಳಿಯಲ್ಲಿ ಸಂಭವಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಚೇತನ್, ಸಂದೀಪ ಭಟ್ ಮತ್ತು ರಾಜು ಎಂಬುವವರು ಮೃತಪಟ್ಟ ದುರ್ದೈವಿಗಳು. ಇವರು ಸಿಗಂದೂರು(Sigandur), ಹುಲಿದೇವರ ಬನ ಮತ್ತು ಗಿಣಿವಾರದವರು ಎಂದು ತಿಳಿದು ಬಂದಿದೆ. ನಿನ್ನೆ ಬುಧವಾರ ಸಂಜೆ ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ದುರಂತ ಸಂಭವಿಸಿತ್ತು. ತೆಪ್ಪದಲ್ಲಿ ಒಟ್ಟು ಐದು ಯುವಕರು ಪಯಣಿಸುತ್ತಿದ್ದರು. ವಿನಯ್, ಯಶ್ವಂತ್ ನೀರಿನಲ್ಲಿ ಈಜಿಕೊಂಡು ಬಚಾವಾಗಿದ್ದರು. ಉಳಿದವರಿಗಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ಕೈಗೊಂಡಿದ್ದರು.
ಇದನ್ನೂ ಓದಿ : ಬೆಳಗಾವಿಯಿಂದ ಸಾಗಿಸಲಾಗುತ್ತಿದ್ದ ಜಾನುವಾರು ರಕ್ಷಣೆ
ಇಂದು ಬೆಳಿಗ್ಗೆ ಯುವಕರ ಮೃತದೇಹ ಹೊರ ತೆಗೆಯಲಾಗಿದೆ. ಮುಳುಗುತಜ್ಞ ಉಡುಪಿಯ (Udupi) ಈಶ್ವರ ಮಲ್ಪೆ (Eshwar Malpe) ತಂಡ ಶವ ಶೋಧನೆಗೆ ನೆರವಾಗಿದ್ದರು. ನೀರಿನಾಳದಲ್ಲಿದ್ದ ಮೂವರು ಯುವಕರ ಶವವನ್ನ ಪತ್ತೆಹಚ್ಚಲಾಗಿದೆ. ಮರಣೋತ್ತರ ಶವ ಪರೀಕ್ಷೆಗೆ ಸ್ಥಳದಲ್ಲೇ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯರ ಮನವಿ ಹಿನ್ನೆಲೆ ಸಾಗರ ತಾಲೂಕು ಆಸ್ಪತ್ರೆ ಬದಲಾಗಿ, ಸ್ಥಳದಲ್ಲೇ ಮರಣೋತ್ತರ ಪರೀಕ್ಷೆಗೆ ಸಿದ್ದಮಾಡಲಾಗಿದೆ. ಪೋಸ್ಟ ಮಾರ್ಟಂ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ.
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಫೇಸ್‌ಬುಕ್ ನಲ್ಲಿ ಮತ್ತು ಇನ್ಸ್ಟಾಗ್ರಾಂನಲ್ಲಿ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ಬಾವಿಯಲ್ಲಿ ಯುವಕನ ಶವ ಪತ್ತೆ