ಗೋಕರ್ಣ (Gokarna): ತರಕಾರಿ ಖರೀದಿಗೆ ವಾರದ ಸಂತೆಗೆ ಹೋಗಿದ್ದವರು ಸಿಡಿಲು ಬಡಿದು (lightning) ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಬಿದ್ರಗೇರಿಯ ಪರಮೇಶ್ವರ ಗೌಡ(೫೬), ರೆಸಾರ್ಟ ಕಟ್ಟಲು ಬಂದ ಬಿಹಾರ ರಾಜ್ಯದ ಕಾರ್ಮಿಕರಾದ ನೂರ ಅಲಮಾ(೪೦), ಮಹ್ಮದ್ ಆಜಾದ್ (೩೦), ಆಯುಷ್‌ಕುಮಾರ (೩೦) ಗಾಯಗೊಂಡವರು. ಸಂಜೆ ನಾಲ್ಕು ಗಂಟೆ ನಂತರ ಭಾರಿ ಗುಡುಗು ಮಿಂಚಿನೊಂದಿಗೆ (lightning) ಗೋಕರ್ಣದಲ್ಲಿ ಮಳೆ ಅಬ್ಬರಿಸುತ್ತಿತ್ತು. ಹೀಗಾಗಿ ತರಕಾರಿ ಖರೀದಿಗೆ ತೆರಳಿದ್ದವರು ಮಳೆಯಿಂದ ರಕ್ಷಿಸಿಕೊಳ್ಳಲು ಮರದ ಕೆಳಗೆ ನಿಂತಿದ್ದರು. ಆ ವೇಳೆ ಸಿಡಿಲು ಅಪ್ಪಳಿಸಿ ನಾಲ್ವರೂ ಗಾಯಗೊಂಡಿದ್ದಾರೆ.
ಇದನ್ನೂ ಓದಿ : ಮುರ್ಡೇಶ್ವರದಲ್ಲಿ ರೈಲು ಬಡಿದು ವ್ಯಕ್ತಿ ಸಾವು
ತಕ್ಷಣ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ, ಡಾ. ದಿವ್ಯಾ ಮತ್ತು ಸಿಬ್ಬಂದಿ ಚಿಕಿತ್ಸೆ ನೀಡಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ. ಒಂದೂವರೆ ಗಂಟೆ ಕಾಲ ಗಾಯಗೊಂಡು ನಿಸ್ತೇಜರಾದವರ ಅಂಗಗಳಿಗೆ ವ್ಯಾಯಾಮ ಮತ್ತಿತರ ಚಿಕಿತ್ಸೆ ಮುಂದುವರಿಸಿ ಚೇತರಿಸಿಕೊಳ್ಳುವಂತೆ ಮಾಡಿ ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ : ನಾಳೆಯಿಂದ ಬೆಂಗಳೂರಿನಲ್ಲಿ ಟಿವಿ9 ಎಕ್ಸ್ಪೋ