ಕಾರವಾರ (Karwar) : ಉದ್ಯೋಗ ವಂಚನೆ ಪ್ರಕರಣದಲ್ಲಿ (Fraud case) ಕಾರವಾರದ ಓರ್ವ ಮಹಿಳೆ ಸೇರಿದಂತೆ ಇಬ್ಬರನ್ನು ಗೋವಾದ (Goa) ಮಾರ್ಗೋವಾ ಟೌನ್ ಪೊಲೀಸರು ಬಂಧಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರವಾರದ ಸದಾಶಿವಗಡ ಆಚಾರಿವಾಡಾದ ಸೋನಿಯಾ ಅಲಿಯಾಸ್ ರೋಷನ್ ಸೋಮನಾಥ ಆಚಾರಿ ಮತ್ತು ಗೋವಾದ ಸಾವೋ ಜೋಸ್ ಡಿ ಏರಿಯಾಲ್ನ ವಿಷಯಾ ಗಾವಡೆ ಬಂಧಿತರು. ನವೇಲಿಮ್ ನಾಗಮೋಡೆಮ್ನ ಸುನೀಲ್ ಬೋರ್ಕರ್ ನೀಡಿದ ದೂರಿನ ಆಧಾರದ ಮೇಲೆ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ ೪೨೦ ಆರ್/ಡಬ್ಲ್ಯೂ ೩೪ರ ಅಡಿಯಲ್ಲಿ ಪ್ರಕರಣ (fraud case) ದಾಖಲಿಸಲಾಗಿದೆ.
ಇದನ್ನೂ ಓದಿ : ಸಂತೆಗೆ ಹೋದ ನಾಲ್ವರಿಗೆ ಸಿಡಿಲು ಬಡಿತ
೨೦೨೦ರ ಜನವರಿ ೨೦ ಮತ್ತು ಜೂನ್ ೩೦ರ ನಡುವಿನ ದೂರಿನ ಪ್ರಕಾರ, ಹಲವಾರು ಸಂದರ್ಭಗಳಲ್ಲಿ ಆರೋಪಿತರಾದ ವಿಷಯಾ ಮತ್ತು ಸೋನಿಯಾ ಅವರು ದೂರುದಾರರಿಗೆ ಕಾರವಾರದಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ೧೬,೧೨,೫೦೦ ರೂ.ಗಳನ್ನು ವಂಚಿಸಿದ್ದಾರೆ (cheating). ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಶಕ್ಕೆ ಪಡೆಯಲಾಗುವುದು ಎಂದು ಮಾರ್ಗೋವಾ ಪೊಲೀಸರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ : ಮುರ್ಡೇಶ್ವರದಲ್ಲಿ ರೈಲು ಬಡಿದು ವ್ಯಕ್ತಿ ಸಾವು