ಬೆಂಗಳೂರು (Bengaluru) : ಟಿವಿ9 ಕನ್ನಡ ಮತ್ತು ಸ್ವೀಟ್ ಹೋಂ ಜಂಟಿಯಾಗಿ ಆಯೋಜಿಸಿರುವ ರಿಯಲ್ ಎಸ್ಟೇಟ್ ಎಕ್ಸ್​ಪೋ 2024 ( TV9 Expo) ಚಾಲನೆಗೊಂಡಿದೆ. ಸಚಿವ ಭೈರತಿ ಸುರೇಶ (Byrathi Suresh) ಇಂದು ಶನಿವಾರ ಈ ಪ್ರಾಪರ್ಟಿ ಎಕ್ಸ್​ಪೋ ಉದ್ಘಾಟನೆ ನೆರವೇರಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮನೆ ಅಥವಾ ಸೈಟ್ ಖರೀದಿಸಬೇಕು ಎನ್ನುವ ಆಸೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಬೆಂಗಳೂರಿನಂಥ ನಗರಗಳಲ್ಲಿ ಚಿರಾಸ್ತಿ ಹೊಂದುವುದು ಜೀವಮಾನದ ಸಾಧನೆ ಎಂಬಂತಾಗಿದೆ. ಥರಹೇವಾರಿ ಬಿಸಿನೆಸ್​ಗಳಿಗೆ ಪೋಷಕವಾಗಿರುವ ಬೆಂಗಳೂರು ನಗರದಲ್ಲಿ ಭೂಮಿ ಬೆಲೆ ರಾಕೆಟ್​ನಂತೆ ಮೇಲೇರುತ್ತಲೇ ಇದೆ. ಎಲ್ಲಾ ವರ್ಗದ ಜನರ ಆಸೆ, ಅಗತ್ಯಗಳಿಗೆ ತಕ್ಕಂತೆ ಮನೆ, ನಿವೇಶನಗಳು ಲಭ್ಯ ಇವೆ. ಆದರೆ, ಅವುಗಳನ್ನು ಹುಡುಕಲು ಸಂಯಮ ಬೇಕು. ಅಷ್ಟು ವ್ಯವಧಾನ, ಸಮಯ ಇರುವವರ ಸಂಖ್ಯೆ ಕಡಿಮೆ. ಹೀಗಾಗಿ, ದುರಾಸೆಯ ಬ್ರೋಕರ್​ಗಳ ಜಾಲಕ್ಕೆ ಬೀಳುವುವರೇ ಹೆಚ್ಚು. ಇಂಥವರಿಗೆ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋ ಉತ್ತಮ ಮಾರ್ಗೋಪಾಯ ನೀಡಿದೆ. ನಗರದ ಪ್ರಮುಖ ಲ್ಯಾಂಡ್ ಡೆವಲಪರ್​ಗಳು ಈ ಎಕ್ಸ್​ಪೋದಲ್ಲಿ ಒಂದೆಡೆ ಲಭ್ಯ ಇರುತ್ತಾರೆ. ಇವರ ವಿವಿಧ ರೆಸಿಡೆನ್ಷಿಯಲ್ ಮತ್ತು ಕಮರ್ಷಿಯಲ್ ಪ್ರಾಪರ್ಟಿಗಳ ಬಗ್ಗೆ ಒಂದೇ ವೇದಿಕೆಯಲ್ಲಿ ಮಾಹಿತಿ ಪಡೆಯಬಹುದು.

ಇದನ್ನೂ ಓದಿ : ಭಟ್ಕಳದಲ್ಲಿ ನೀರೆಯರ ಜಗಳ ತಾರಕಕ್ಕೆ

ರಿಯಲ್ ಎಸ್ಟೇಟ್ ಎಕ್ಸ್​ಪೋ ವಿಶೇಷತೆಗಳಿವು: ಲಕ್ಷುರಿ ವಿಲ್ಲಾ, ಪ್ಲಾಟ್, ಅಪಾರ್ಟ್​ಮೆಂಟ್, ಫಾರ್ಮ್​ಲ್ಯಾಂಡ್​ಗಳನ್ನು ಒಂದೇ ಸ್ಥಳದಲ್ಲಿ ಮಾಹಿತಿ ಪಡೆದು ಅವಲೋಕಿಸಬಹುದು. ಉದ್ಯಮದ ತಜ್ಞರು, ಪ್ರಾಪರ್ಟಿ ಕನ್ಸಲ್ಟೆಂಟ್, ಲೀಗಲ್ ಅಡ್ವೈಸರ್​ಗಳೆಲ್ಲರೂ ಸ್ಥಳದಲ್ಲಿ ನೆರವಿಗೆ ಲಭ್ಯವಿರುತ್ತಾರೆ. ಎಕ್ಸ್​ಪೋದಲ್ಲಿ ನೀವು ಪ್ರಾಪರ್ಟಿ ಖರೀದಿಗೆ ನೊಂದಾಯಿಸಿದರೆ ವಿಶೇಷ ರಿಯಾಯಿತಿ, ಆಕರ್ಷಕ ಪಾವತಿ ಅವಕಾಶ ಮತ್ತಿತರ ಎಕ್ಸ್​ಕ್ಲೂಸಿವ್ ಆಫರ್​ಗಳನ್ನು ಪಡೆಯಬಹುದು. ಇತರ ಹೂಡಿಕೆದಾರರೊಂದಿಗೆ ಮಾತನಾಡಬಹುದು. ವೃತ್ತಿಪರರೊಂದಿಗೆ ಸಮಾಲೋಚಿಸಬಹುದು. ಹೀಗೆ ನಾನಾ ಅವಕಾಶಗಳುಂಟು.

ಇದನ್ನೂ ಓದಿ :   ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ

ಟಿವಿ9 ಕನ್ನಡ (TV9 kannada) ಸ್ವೀಟ್ ಹೋಮ್ ಕಳೆದ ೧೦ಕ್ಕೂ ಹೆಚ್ಚು ವರ್ಷಗಳಿಂದ ಪ್ರಾಪರ್ಟಿ ಎಕ್ಸ್​ಪೋ ( TV9 Expo) ಆಯೋಜಿಸುತ್ತಾ ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಎಕ್ಸ್​ಪೋದ ವಿಶ್ವಾಸಾರ್ಹತೆ, ಉಪಯುಕ್ತತೆ, ವ್ಯಾಪ್ತಿ ಹೆಚ್ಚುತ್ತಾ ಬಂದಿದೆ. ನಿಮಗೆ ಪ್ರಾಪರ್ಟಿ ಖರೀದಿಸುವ ಇರಾದೆ ಇದ್ದಲ್ಲಿ ಈ ವರ್ಷದ ಎಕ್ಸ್​ಪೋ ಖಂಡಿತ ತಪ್ಪಿಸಿಕೊಳ್ಳಬೇಡಿ ಎಂದು ಆಯೋಜಕರು ತಿಳಿಸಿದ್ದಾರೆ.

ಇದನ್ನೂ ಓದಿ :  ಸಮುದ್ರದಲ್ಲಿ ಮುಳುಗಿ ಕಾರವಾರದ ವ್ಯಕ್ತಿ ಸಾವು