ಭಟ್ಕಳ (Bhatkal): ೨೦೧೮-೨೦೨೩ರ ತನಕ ಬಿಜೆಪಿ ಸರಕಾರ (BJP government) ಶಾಸಕರಿಗೆ ೫೦-೧೦೦ ಕೋಟಿ, ಮುಖ್ಯಮಂತ್ರಿಗೆ ೨೫೦೦ ಕೋಟಿ ರೂ. ಆಫರ್ ನೀಡುತ್ತಾ ಬಂದಿದೆ. ಮತ್ತೆ ಅದೇ ಪ್ರಯತ್ನದಲ್ಲಿದ್ದಾರೆಯೇ ಹೊರತು ಹೊಸದು ಏನೂ ಇಲ್ಲ ಎಂದು ಮೀನುಗಾರಿಕೆ ಸಚಿವ (fisheries minister) ಮಂಕಾಳ ವೈದ್ಯ (Mankal Vaidya) ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಇಲ್ಲಿನ ಮುರುಡೇಶ್ವರ (Murudeshwar) ಗಾಲ್ಪ ರೆಸಾರ್ಟನಲ್ಲಿ ಏರ್ಪಡಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಹಿಂದೆ ಹೇಳಿದ್ದನ್ನೇ ಈಗ ಮಾಡಲು ಹೊರಟಿದ್ದಾರೆ. ಮಾಡಲೂಬಹುದು ಎಂದು ಹೇಳಿದ ಅವರು, ನನಗೆ ಬಿಜೆಪಿಯಿಂದ ಯಾವುದೇ ಆಫರ್ ಬಂದಿಲ್ಲ. ಅಷ್ಟಕ್ಕೂ ನಾನು ತುಂಬಾ ಕಾಸ್ಟ್ಲೀ ವ್ಯಕ್ತಿ. ೧೦೦ ಕೋಟಿ ನನಗೆ ಸಾಕಾಗುವುದಿಲ್ಲ ಎಂದು ಮಂಕಾಳ ವೈದ್ಯ (Mankal Vaidya) ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ : ಕ್ಷುಲ್ಲಕ ವಿಚಾರಕ್ಕೆ ಕುಟುಂಬಗಳ ಮಾರಾಮಾರಿ
ಈ ಹಿಂದೆ ಇದ್ದ ಬಿಜೆಪಿ ಸರಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ವಕ್ಫ ಆಸ್ತಿಗೆ (Waqf property) ಮೋಸ ಮಾಡಿದರೆ ದೇವರಿಗೆ ಮೋಸ ಮಾಡಿದಂತೆ ಎಂದಿದ್ದರು. ಇಂದು ನಮ್ಮ ಸರಕಾರದ ವಿರುದ್ದ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರ ರೈತರ ಜಮೀನು ನಾಶಕ್ಕೆ ವಕ್ಫ ಬಳಕೆ ಮಾಡುತ್ತಿದೆ ಎಂಬ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಸರಕಾರವು ಯಾವ ರೈತನನ್ನೂ ದಾರಿಯ ಮೇಲೆ ಹಾಕುವುದಿಲ್ಲ. ರೈತರ ರಕ್ಷಣೆ ನಮ್ಮ ಸರಕಾರದ್ದಾಗಿದೆ. ನಮ್ಮ ಜಿಲ್ಲೆಯಲ್ಲಿ (Uttara Kannada) ವಕ್ಫ ಸಂಬಂಧಿಸಿದ ಪ್ರಕರಣಗಳು ಕಂಡು ಬಂದಿದ್ದರೆ ೨೪ ಗಂಟೆಯೊಳಗೆ ಸರಿಪಡಿಸುವ ಭರವಸೆ ನೀಡಲಾಗಿದೆ. ಇನ್ನೂ ತನಕ ಯಾವುದೇ ಪ್ರಕರಣ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಯಲ್ಲಿ ಸಮಗ್ರ ವೀರಾಗ್ರಣಿ
ಕೇಂದ್ರ ಸರಕಾರವೇ ಆದೇಶಿಸಿದಂತೆ ಆದಾಯ ತೆರಿಗೆ ಇದ್ದವರು, ಆದಾಯ ತೆರಿಗೆ ತುಂಬುವವರು ಉಳ್ಳವರಾಗಿದ್ದರೆ ಬಿಪಿಎಲ್ ಕಾರ್ಡ್ (BPL Card) ರದ್ದಾಗುತ್ತದೆ. ಕೇಂದ್ರದ ಆದೇಶ ಪಾಲನೆಯನ್ನು ನಾವು ಮಾಡುತ್ತಿದ್ದೇವೆ. ಬಡವರಿಗೆ ಬ್ಯಾಂಕ್ ಸಾಲ ನೀಡುವ ವೇಳೆ ಆದಾಯ ತೆರಿಗೆ ವರದಿ ಕೇಳದೇ ಅವರಿಗೆ ೧೦ ಲಕ್ಷದ ತನಕ ಸಾಲ ನೀಡಿ, ಈ ವಿಚಾರದಲ್ಲಿ ಅವರನ್ನು ಬಿಪಿಎಲ್ ಕಾರ್ಡ್ ಅನರ್ಹತೆಯಲ್ಲಿ ಸಿಲುಕಿಸಿ ನಮ್ಮ ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸುವುದಲ್ಲ. ಮಾನದಂಡದ ಆಧಾರದಲ್ಲಿಯೇ ಅನರ್ಹತೆಯನ್ನು ಮಾಡಿದ್ದು ಹೊರತು ಯಾವ ಬಡವನ ಕಾರ್ಡ್ ಸಹ ರದ್ದು ಮಾಡಿಲ್ಲ. ಬಿಜೆಪಿತ ಅವಧಿಯಲ್ಲಿಯೇ ಬಿಪಿಎಲ್ ಕಾರ್ಡ್ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ನಮ್ಮ ಸರಕಾರದ ಅವಧಿ ಅದನ್ನು ಆರಂಭಿಸಿ ಅರ್ಹರಿಗೆ ಕಾರ್ಡ್ ನೀಡುತ್ತಿದ್ದೇವೆ ಎಂದು ಹೇಳಿದರು.
ಇದರ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಯಲ್ಲಿ ಸಮಗ್ರ ವೀರಾಗ್ರಣಿ